ನಾಯಕನಹಟ್ಟಿ:-
ರಾಮಾಯಣ ಮನುಕುಲದ ಮಾರ್ಗದರ್ಶಿ ಆಗಿದೆ.
ಮನುಷ್ಯರ ವ್ಯಕ್ತಿತ್ವ ಹೇಗಿರಬೇಕು, ಹೇಗೆ ಬದುಕುಬೇಕು ಎಂಬುದಾಗಿ ರಾಮನ ಪಾತ್ರದ ಮೂಲಕ ರಾಮಾಯಣ ಚಿತ್ರಿಸಿರುವ ಮಹರ್ಷಿ ವಾಲ್ಮೀಕಿಯ ಪ್ರಗತಿಪರ ಗುಣವನ್ನು ನಾವು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು
ತಿಮ್ಮಪ್ಪಯ್ಯನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಂಡೆ ಕಪಿಲೆ ಓಬಣ್ಣ ಹೇಳಿದರು.




ಸಮೀಪದ ಓಬಯ್ಯನಹಟ್ಟಿಯಲ್ಲಿ ವಾಲ್ಮಿಕಿ ಯುವಕರ ಬಳಗ ಹಾಗೂ ನಾಯಕ ಸಮುದಾಯದ ವತಿಯಿಂದ ಗುರುವಾರ ಮಧ್ಯಾಹ್ನ 3ಗಂಟೆಗೆ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಮಾಯಣ ರಚನೆಗೂ ಮುಂಚೆ ಸದ್ಗುಣ ಮತ್ತು ಸನ್ಮಾರ್ಗ ಸೂಚಿಸುವ ಮಹತ್ವದ ಗ್ರಂಥಗಳು ಇರಲಿಲ್ಲ. ರಾಜಾಶ್ರಯದಲ್ಲಿ ರಚಿತವಾದ ಗ್ರಂಥಗಳೆಲ್ಲವೂ ವೈಭ ವೋಪೇತವಾಗಿ ರಾಜರ ಗುಣಗಾನ ಮಾಡುವಂತಿದ್ದವು. ರಾಜಾ ಪ್ರತ್ಯಕ್ಷ ದೈವ ಎಂಬುದಾಗಿ ಸೂಚಿಸುತ್ತವೆ. ಆದರೆ, ಒಬ್ಬಮನುಷ್ಯ ಸಮಾಜ ಮೆಚ್ಚುವಂತೆ ಬದುಕು ನಡೆಸುವುದು ಹೇಗೆ ಎಂಬುದನ್ನು ಮಾತ್ರ ರಾಮಾಯಣ ಕಲಿಸಿಕೊಡುತ್ತದೆ. ಹಾಗಾಗಿ, ಪ್ರತಿಯೊಬ್ಬರೂ ರಾಮಾಯಣ ಓದಬೇಕು ಎಂದು ಕಿವಿಮಾತು ಹೇಳಿದರು.
ಮಾಜಿ ಗ್ರಾಮ ಪಂಚಾಯತಿ ಸದಸ್ಯ ಡಿ ಟಿ ಕಾಮರಾಜ್,ಮುಖಂಡ ಕಾಕಸೂರಯ್ಯ,ಗ್ರಾಮದ ಮುಖಂಡರಾದ ಮರಡಿ ಬೋರಯ್ಯ, ಗುತ್ತಿಗೆದಾರ ಸೋಮಣ್ಣ, ನಾಗರಾಜ್, ಬೊಮ್ಮಯ್ಯ, ಬೋರಯ್ಯ, ಸಾರಥಿ ಪಾಲಯ್ಯ, ಸರ್ವೇ ಮಲ್ಲಯ್ಯ ,ತಿಪ್ಪೇಸ್ವಾಮಿ, ನವೀನ್ ಮದಕರಿ, ಹುಚ್ಚಯ್ಯ , ಮುನಿಯಪ್ಪ, ಪವನ್, ಸೇರಿದಂತೆ ಓಬಯ್ಯನಹಟ್ಟಿ ಸಮಸ್ತ ಗ್ರಾಮಸ್ಥರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.