September 15, 2025
FB_IMG_1730900375838.jpg


ಹಿರಿಯೂರು :
ಹಿರಿಯೂರಿನ ಬೆಸ್ಕಾಂ ವಿಭಾಗೀಯ ವ್ಯಾಪ್ತಿಯ ಡಿಜಿಟಲ್ ಸಹಿ ನಕಲು ಮಾಡಿ ಕೋಟಿಗಟ್ಟಲೆ ಹಣ ಲೂಟಿ ಮಾಡಲಾಗಿದೆ ಎಂಬುದಾಗಿ ರೈತ ಹೋರಾಟಗಾರ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಕಸವನಹಳ್ಳಿ ರಮೇಶ್ ಅವರು ಆರೋಪಿಸಿದ್ದಾರೆ.
ನವಂಬರ್ 6 ರಂದು ಹಿರಿಯೂರು ಬೆಸ್ಕಾಂ ಕಚೇರಿಗೆ ಭೇಟಿಕೊಟ್ಟು ಮಾಹಿತಿ ಕಲೆ ಹಾಕಿದಾಗ ಈ ಸ್ಪೋಟಕ ಸತ್ಯ ಬಹಿರಂಗವಾಗಿರುತ್ತದೆ. ಆದರೆ ಸಂಬಂಧಪಟ್ಟ ಇನ್ಸ್ಪೆಕ್ಟರ್ ಅಪ್ರುವಲ್ ಕೊಡುವ ಅಧಿಕಾರಿಗಳು ಹಣ ಲೂಟಿ ಮಾಡಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಡದೆ ತನಿಖೆ ಮಾಡುತ್ತೇವೆ ಎಂಬುದಾಗಿ ಪ್ರಕರಣ ವಿಳಂಬ ಮಾಡುತ್ತಾ ಸಾಕ್ಷಿ ನಾಶಗಳನ್ನು ಮಾಡುವ ಕಡೆಗೆ ಹೋಗುತ್ತಿದ್ದಾರೇನೋ ಎಂಬ ಅನುಮಾನ ಬರುತ್ತದೆ ಎಂಬುದಾಗಿ ಸಂಶಯ ವ್ಯಕ್ತಪಡಿಸಿದರು.
ಹಿರಿಯೂರು ವಿಭಾಗೀಯ ವ್ಯಾಪ್ತಿಯ ಏಪ್ರಿಲ್ 2024ರ ನಂತರ ಪಾವತಿ ಮಾಡಿದ ಸ್ವಯಂ ಕಾರ್ಯನಿರ್ವಹಣಾ ಯೋಜನೆಯಲ್ಲಿ ಪಾವತಿ ಮಾಡಿದ ಸುಮಾರು 108 ಫೈಲ್ ಗಳು ಹಿರಿಯೂರು ಉಪವಿಭಾಗದಲ್ಲಿ ಪತ್ತೆಯಾಗಿವೆ. ಅದೇ ರೀತಿ ಮೊಳಕಾಲ್ಮೂರು, ಚಳ್ಳಕೆರೆ ತಾಲ್ಲೂಕು ಭಾಗಗಳಲ್ಲಿ ತನಿಖೆಯಾಗುತ್ತಿದೆ. ಆದರೆ ಸಂಬಂಧಪಟ್ಟ ಹಣ ಲೂಟಿಯಾಗಲು ಕಾರಣಕರ್ತರಾದವರು ಮೇಲೆ ಇಲ್ಲಿಯವರೆಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಿಲ್ಲ ಎಂಬುದಾಗಿ ಅವರು ಹೇಳಿದರು.
ಅಲ್ಲದೆ, ಏಪ್ರಿಲ್ ನಿಂದ ಇಲ್ಲಿಯವರೆಗೆ ಹಣ ಪಾವತಿ ಆಗಿಲ್ಲದಿರುವ ಬಗ್ಗೆ ಕಾಲಕಾಲಕ್ಕೆ ನಿಗಾ ವಹಿಸಿರುವುದಿಲ್ಲ. ಹಾಗೂ ಈ ರೀತಿ ಡಿಜಿಟಲ್ ಸಿಗ್ನೇಚರ್ ನ್ನು ನಕಲು ಮಾಡಲು ಅವಕಾಶ ಮಾಡಿಕೊಟ್ಟ ಬಗ್ಗೆ ಯಾಕೆ ಗಮನಹರಿಸಲಿಲ್ಲ. ಇದರ ಹಿಂದೆ ಒಬ್ಬ ವ್ಯಕ್ತಿ ಮಾತ್ರ ಇದ್ದನೋ ಅಥವಾ ಮೇಲಾಧಿಕಾರಿಗಳು ಶಾಮಿಲಾಗಿದ್ದಾರೋ ಎಂಬುದು ನಿಷ್ಪಕ್ಷಪಾತ ತನಿಕೆಯಿಂದ ಸತ್ಯ ಹೊರಬರಬೇಕಾಗಿದೆ ಎಂಬುದಾಗಿ ಅವರು ಆಗ್ರಹಿಸಿದರು.
ಇದೇ ರೀತಿ ರಾಜ್ಯದಲ್ಲಿಯೂ ಅನೇಕ ಕಡೆ ಹಣ ನುಂಗಿದ್ದರೆ, ಗತಿಯೇನು. ಇಲಾಖೆಯ ಹಣದ ಜವಾಬ್ದಾರಿ ಯಾರು ಹೊರಬೇಕು. ಈಗಾಗಲೇ ಇಲಾಖೆಯಲ್ಲಿ ಸಂಬಳ ಕೊಡಲು ಹಣವಿಲ್ಲ. ಇಲಾಖೆ ವಾಹನಗಳು ರಿಪೇರಿಗೆ ಹಣ ಇಲ್ಲ. ಇದಕ್ಕಾಗಿ ಇಲಾಖೆ ಆಸ್ತಿಗಳನ್ನು ಅಡ ಇಡಲಾಗಿದೆ. ಇಲಾಖೆ ತನಿಖೆಯನ್ನು ಸಮರ್ಪಕವಾಗಿ ಮಾಡಲು ಹಣ ಲೂಟಿಯಾಗಲು ಕಾರಣರಾದವರು ಮೇಲೆ ಶೀಘ್ರವೇ ಕೇಸು ದಾಖಲು ಮಾಡಬೇಕು ಎಂಬುದಾಗಿ ಅವರು ಸಂಬಂಧಪಟ್ಟವರನ್ನು ಒತ್ತಾಯಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading