
” ಚಳ್ಳಕೆರೆ:-ತಾಲೂಕಿನ ಸಿದ್ದಾಪುರ ಗ್ರಾಮದ ಶ್ರೀದುರ್ಗಾಮ್ಮ ದೇವಿಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ “ಕುಷ್ಟರೋಗ ನಿವಾರಣಾ ಕಾರ್ಯಕ್ರಮ”ದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಗೋಪನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್,ಸಿ,ಡಿ.ಸಿ, ಮೇಲ್ವಿಚಾರಕರಾದ ಬಾಬುರಾಜೇಂದ್ರ ರೆಡ್ಡಿ ಅವರು “ಕುಷ್ಠರೋಗದ ಬಾಹ್ಯ ಲಕ್ಷಣಗಳು ಕಂಡು ಬಂದ ತಕ್ಷಣ ಅದರ ಮಾಹಿತಿಯನ್ನು ಸ್ಥಳೀಯ ಆಶಾ ಕಾರ್ಯಕರ್ತೆಯರ ಗಮನಕ್ಕೆ ತಂದು ಅದಕ್ಕೆ ಸರ್ಕಾರಿ ಆಸ್ಪತ್ರೆಗಳ ಮೂಲಕ ಸೂಕ್ತ ಚಿಕಿತ್ಸೆ ಪಡೆದುಕೊಂಡು ನಿವಾಸಿರಿಕೊಳ್ಳಬಹುದು ಎಂದು ಎಲ್,ಸಿ,ಡಿ,ಸಿ, ಸರ್ವೇಯ ಬಗ್ಗೆ ಜನರಿಗೆ ಮಾಹಿತಿ ನೀಡಿದರು,ಈ ಜಾಗೃತಿ ಕಾರ್ಯಕ್ರಮದಲ್ಲಿ ಆಶಾ ಸುಗಮಕಾರರಾದ ಸಿ.ವಸಂತಮ್ಮ,ಆಶಾ ಕಾರ್ಯಕರ್ತೆ ಎಸ್.ಎನ್.ಗಂಗಮ್ಮ, ಗ್ರಾಮದ ಹಿರಿಯ ಮುಖಂಡರಾದ ಯಲ್ಲಪ್ಪ,ಗ್ರಾಮ ಪಂಚಾಯಿತಿ ಸದಸ್ಯರಾದ ದ್ಯಾಮಣ್ಣ,ಸಮಾಜ ಸೇವಕರಾದ ಯತೀಶ್ ಎಂ ಸಿದ್ದಾಪುರ, ಸಿ,ಆರ್, ಮಹಂತೇಶ್, ನಾಗರಾಜ,ನಿಂಗರಾಜ, ಶಿವಲಿಂಗಪ್ಪ, ಶಾಂತಮ್ಮಮುಂತಾದ ಗ್ರಾಮಸ್ಥರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.