
ಹಿರಿಯೂರು:
ಮಧ್ಯಕರ್ನಾಟಕದ ರೈತರ ಏಕೈಕ ಜೀವನಾಡಿ ವಾಣಿವಿಲಾಸ ಸಾಗರ ಜಲಾಶಯದ ನೀರಿನಮಟ್ಟ ಸೋಮವಾರದಿಂದ ನೀರಿನ ಒಳಹರಿವು ಸ್ಥಗಿತವಾಗಿದೆ. ವಾಣಿವಿಲಾಸ ಜಲಾಶಯಕ್ಕೆ ಕಳೆದೊಂದು ತಿಂಗಳಿನಿಂದ ಭದ್ರಾ ಜಲಾಶಯದಿಂದ ಪ್ರತಿದಿನ 462 ಕ್ಯೂಸೆಕ್ ನೀರಿನ ಒಳಹರಿವು ಬರುತ್ತಿತ್ತು. ಭದ್ರಾ ಡ್ಯಾಂ ಕೂಡ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹರಿದು ಹಳ್ಳ ಸೇರುತ್ತಿದೆ.
ಡ್ಯಾಂ ನಲ್ಲಿ ಹೆಚ್ಚಿನ ನೀರು ಇರುವುದರಿಂದ ಇನ್ನೂ 2ಟಿ.ಎಂ.ಸಿ. ಅಷ್ಟು ನೀರನ್ನು ಲಿಫ್ಟ್ ಮಾಡಿ ವಾಣಿವಿಲಾಸ ಸಾಗರಕ್ಕೆ ಹರಿಸಿದರೆ ವಾಣಿವಿಲಾಸಸಾಗರ ಡ್ಯಾಂ ಈ ವರ್ಷವೂ ಭರ್ತಿಯಾಗುತ್ತಿತ್ತು. ಅತ್ತಎತ್ತಿನಹೊಳೆಯ ನೀರು ಬರುತ್ತಿಲ್ಲ. ಇತ್ತ ಭದ್ರಾ ಡ್ಯಾಂ ವಾಣಿವಿಲಾಸ ಸಾಗರಕ್ಕೆ ಹರಿಯುತ್ತಿಲ್ಲ.
ತರೀಕೆರೆ ಸಮೀಪದ ಬೆಟ್ಟದ ತಾವರೆಕೆರೆಯ ಪಂಪ್ ಹೌಸ್ ನಿಂದ ಪಂಪ್ ರನ್ ಮಾಡಿ ಲಿಫ್ಟ್ ಮಾಡಲು ಅಧಿಕಾರಿಗಳು, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಸೂಕ್ತ ಕ್ರಮ ಜರುಗಿಸಬೇಕಾಗಿದೆ. ಜೂನ್-ತಿಂಗಳಿನಿಂದ ಅಕ್ಟೋಬರ್ 15ರ ತನಕ ಭದ್ರಾ ಡ್ಯಾಂ ನಿಂದ ನೀರು ಹರಿಸಲು ಆದೇಶವಾಗಿದೆ.
ಆದರೆ ಜೂನ್ 15 ರಿಂದ ನೀರನ್ನು ಲಿಫ್ಟ್ ಮಾಡಿಲ್ಲ. ಅಲ್ಲದೆ, ಹಲವು ಕಾರಣಗಳನ್ನು ನೀಡಿ ಅವಧಿಯ ಮಧ್ಯದಲ್ಲಿ ನೀರು ಹರಿಸಿಲ್ಲ. ಹಾಗಾಗಿ ಇಡೀ ವರ್ಷ ಭದ್ರಾಡ್ಯಾಂನಿಂದ ವಾಣಿವಿಲಾಸಸಾಗರಕ್ಕೆ ನೀರು ಹರಿಸಲು ಆದೇಶ ಮಾಡಬೇಕಾಗಿದೆ.
ಈ ಕುರಿತು ಭದ್ರಾ ಮೇಲ್ದಂಡೆ ಮುಖ್ಯ ಎಂಜಿನಿಯರ್ ಲಮಣಿ ಅವರನ್ನು ಪತ್ರಿಕೆ ಎರಡು ಸಲ ಫೋನ್ ಮಾಡಿದ್ದು ಅವರು ಕರೆಯನ್ನು ಸ್ವೀಕರಿಸಿ ಮಾತನಾಡಿಲ್ಲ. ಇನ್ನು ವಾಣಿವಿಲಾಸ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಒಟ್ಟು135 ಅಡಿ ಆಗಿದ್ದು, 130 ಅಡಿಗೆ ಕೋಡಿ ಹರಿಯಲಿದೆ. ಜಲಾಶಯದಲ್ಲಿ 30 ಟಿ.ಎಂ.ಸಿ. ಅಡಿ ನೀರು ಸಂಗ್ರಹವಾಗುವ ಸಾಮರ್ಥ್ಯ ಹೊಂದಿದೆ.
About The Author
Discover more from JANADHWANI NEWS
Subscribe to get the latest posts sent to your email.