
ನಾಯಕನಹಟ್ಟಿ : ಹೋಬಳಿಯ ಎನ್ ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನಮೈನಹಟ್ಟಿ ಗ್ರಾಮದ ಏಕಾಂತೇಶ್ವರಿ ಅಂಗಳದಲ್ಲಿ ನಾಯಕನಹಟ್ಟಿ ಪ್ರೀಮಿಯರ್ ಲೀಗ್ ಸೀಜನ್ -2 ಕ್ರಿಕೆಟ್ ಕ್ರೀಡಾಕೂಟವನ್ನು ಪಟೇಲ್ ಜಿ ಎಂ ತಿಪ್ಪೇಸ್ವಾಮಿ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.


ನಂತರ ಮಾತನಾಡಿದ ಅವರು ಕ್ರೀಡೆಗಳಲ್ಲಿ ಸೋಲು, ಗೆಲುವು ಮುಖ್ಯವಲ್ಲ, ಭಾಗವಹಿಸುವುದು ಮುಖ್ಯ. ಪ್ರಶಸ್ತಿ ಗೋಸ್ಕರ ಸೀಮಿತವಾಗಬಾರದು, ಜಿಲ್ಲಾ ಹಾಗೂ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಯಶಸ್ಸು ಸಾಧಿಸಿ ನಮ್ಮ ಗ್ರಾಮ ಹಾಗೂ ಹೋಬಳಿಗೆ ಒಳ್ಳೆ ಹೆಸರನ್ನು ತರುವಂತಹ ಆಟಗಾರರಾಗಿ ಗುರುತಿಸಿಕೊಳ್ಳಬೇಕು. ಆದ್ದರಿಂದ ಯಾವುದೇ ರೀತಿಯ ಕಲಹಗಳಿಗೆ ಅವಕಾಶ ಕಲ್ಪಿಸದೆ ಅಣ್ಣತಮ್ಮಂದಿರ ಹಾಗೆ ಇರಬೇಕೆಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ನಂತರ ಪಟ್ಟಣ ಪಂಚಾಯತಿ ಸದಸ್ಯ ಸೈಯದ್ ಅನ್ವರ್ ಮಾತನಾಡಿ ಯುವಕರಲ್ಲಿ ಕ್ರೀಡಾ ಸ್ಪೂರ್ತಿಯನ್ನು ಬೆಳೆಸಿಕೊಳ್ಳಬೇಕು. ಪಾನ್ ಮಸಾಲ, ಗುಟ್ಕಾ, ತಂಬಾಕುಗಳನ್ನು ತಿನ್ನುವುದರಿಂದ ನಿಮಗೇನು ಪ್ರಯೋಜನ ಅದರ ಬದಲು ಹಣ್ಣು, ತರಕಾರಿ, ಸೊಪ್ಪು, ಮೊಟ್ಟೆ ತಿನ್ನುವುದರಿಂದ ಉತ್ತಮ ಆರೋಗ್ಯ ದೊರೆಯುತ್ತದೆ ಎಂದು ಹೇಳಿದರು.
ನಂತರ ನೀರಾವರಿ ಹೋರಾಟ ಸಮಿತಿ ಹೋಬಳಿ ಅಧ್ಯಕ್ಷ ಜಿ.ಬಿ. ಮುದಿಯಪ್ಪ ಮಾತನಾಡಿ ಸೋಲು ಇದ್ದರೆ ಮಾತ್ರ ಮುಂದೆ ಜಯ ದೊರೆಯುತ್ತದೆ. ಸೋಲು ಇಲ್ಲದೆ ಜಯ ದೊರಕುವುದಿಲ್ಲ. ಪ್ರಪ್ರಥಮವಾಗಿ ಜಯಗಳಿಸಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಕಠಿಣ ಅಭ್ಯಾಸ ಮಾಡಿದರೆ ಮಾತ್ರ ನಮಗೆ ಜಯ ದೊರಕುತ್ತದೆ. ಪ್ರತಿಯೊಬ್ಬರಲ್ಲೂ ಅವರದೇ ಆದ ಪ್ರತಿ ಬೀರುತ್ತದೆ ಆ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ನಂತರ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಟಿ.ಬಸಪ್ಪನಾಯಕ ಮಾತನಾಡಿ ಕ್ರೀಡಾಪಟುಗಳು ಕೇವಲ ಬಹುಮಾನಕ್ಕಾಗಿ ಕ್ರೀಡೆಗಳಲ್ಲಿ ಭಾಗವಹಿಸಬಾರದು. ತಮ್ಮಲ್ಲಿರುವ ಶಕ್ತಿ ಸಾಮರ್ಥ್ಯವನ್ನು ಕ್ರೀಡೆಗಳಿಂದ ತೋರ್ಪಡಿಸಬೇಕು. ಪ್ರತಿಯೊಬ್ಬ ಕ್ರೀಡಾಪಟು ಹೋಗು ರಾಜ್ಯ ಹಾಗೂ ದೇಶ ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಾದ ಪಟ್ಟಣ ಪಂಚಾಯತಿ ಸದಸ್ಯ ಪಿ ಓಬಯ್ಯ ದಾಸ್, ಬೋಸಯ್ಯ ಬೋಸದೇವರಹಟ್ಟಿ, ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯ ಮಾಜಿ ಅಧ್ಯಕ್ಷ ಟಿ ರಂಗಪ್ಪ, ಎನ್ ಮಹದೇವಪುರ ಗ್ರಾಮ ಪಂಚಾಯತಿ ಸದಸ್ಯ ನಿರಂಜನ್, ಮಲ್ಲೂರಹಟ್ಟಿ ಬೋರಣ್ಣ, ಗುಂತಕೋಲಮ್ಮನಹಳ್ಳಿ ಜಿ.ಎಂ.ಜಯಣ್ಣ, ಎಸ್.ಪಿ. ಸೋಮು ಮಲ್ಲೂರಹಳ್ಳಿ, ಕರವೇ ಕನ್ನಡ ಸೇನೆ ಹೋಬಳಿ ಘಟಕ ಅಧ್ಯಕ್ಷ ಪಿ ಮುತ್ತಯ್ಯ, ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ, ದಾಸರ ಮುತ್ತೈಯ್ಯನಹಳ್ಳಿ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಬೋರಣ್ಣ, ಜಾಗನೂರಹಟ್ಟಿ ಕೆ.ಪಿ. ನಾಗರಾಜ್, ಗೌಡಗೆರೆ ಜಿ.ಟಿ ತಿಪ್ಪೇಸ್ವಾಮಿ, ರೇಖಲಗೆರೆ ತಿಪ್ಪೇಸ್ವಾಮಿ, ಮಲ್ಲೂರಹಳ್ಳಿ ಸುಧೀರ್, ಗುಂತಕೋಲಮ್ಮನಹಳ್ಳಿ ವಿಷ್ಣು, ಎಸ್ ವೆಂಕಟೇಶ್ ಜೋಗಿಹಟ್ಟಿ, ಗೋಪಿ ನಾಯಕನಹಟ್ಟಿ, ಪ್ರಹ್ಲಾದ ನಾಯಕ ಚನ್ನಬಸಯ್ಯನಹಟ್ಟಿ ,ಹೋಬಳಿಯ ವಿವಿಧ ಹಳ್ಳಿಗಳ ಕ್ರೀಡಾ ಅಭಿಮಾನಿಗಳು ಕ್ರೀಡಾಪಟುಗಳು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.