
ಚಳ್ಳಕೆರೆ ನ.6 ಅರ್ಜಿ ಸಲ್ಲಿಸಿದ ಬಡವರಿಗೆ ಪಡಿತರ ಚೀಟಿ ವಿತರಿಸದ ರಾಜ್ಯ ಸರಕಾರವು ಇರುವ ಪಡಿತರ ಚೀಟಿಗಳನ್ನೇ ರದ್ದು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಹೌದು ಇದು ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಪಂಚರ್ ಅಂಗಡಿ ಇಟ್ಟು ಕೊಂಡು ಜೀವನ ನಡೆಸುತ್ತಿರುವ ಗಂಗಮ್ಮ ವೃದ್ದ ದಂಪತಿಗಳ ಪಡಿತರ ಚೀಟಿ ಏಕಾಕಿ ರದ್ದಾಗಿರುವುದು ನ್ಯಾಯಬೆಲೆ ಅಂಗಡಿಗೆ ಪಡಿತರ ತರಲು ಹೋದಾಗ ನಿಮ್ಮ ಕಾರ್ಡ್ ರದ್ದಾಗಿದೆ ಎಂದು ಹೇಳಿದ್ದಾರೆ.
ನಗರದ ಆಹಾರ ಮತ್ತು ನಾಗರೀಕ ಇಲಾಖೆ ಅಧಿಕಾರಿಗಳ ಭೇಟಿ ನೀಡಿದಾ ಪಡಿತರ ಚೀಟಿ ನೀಡಿ ನೀವು ತೆರಿಗೆ ದಾರರಾಗಿದ್ದು ಸರಕಾರಕ್ಕೆ ತೆರಿಗೆ ಕಟ್ಟಿತ್ತಿರುವುದತಿಂದ ಕಾರ್ಡ್ ರದ್ದಾಗಿದೆ ಎಂದು ಉತ್ತರಕ್ಕೆ ಬೆಚ್ಚಿಬಿದ್ದಿದ್ದಾರೆ.
ನಾನಿಟ್ಟಿರುವುದು ಪಂಚರ್ ಅಂಗಡಿ ನನಗೆ ಯಾವುದೇ ಆಧಾಯ ಮೂಲವಿಲ್ಲ ಎಂದು ವಾಣಿಜ್ಯ ತೆರಿಗೆ ಇಲಾಖೆಗೆ ಹೋಗಿ ವಿಚಾರಿಸಿದಾಗ ನಿಮ್ನದು ಈಗಬಸಿಯಾಗಿದೆ ಯಾವುದೇ ತೆರಿಗೆ ಇಲ್ಲ ಎಂದು ಉತ್ತರ ನೀಡಿದ್ದಾರೆ.
ಮತ್ತೆ ಆಹಾರ ಮತ್ತು ನಾಗರೀಕ ಇಲಾಖೆಗೆ ಭೇಟಿ ನೀಡಿ ವಿಚಾರಸಿದಾಗ ಮೂರು ತಿಂಗಳು ಕಾಯಬೇಕು ಎಂದಿದ್ದಾರೆ.
ಪಡಿತರ ಚೀಟಿ ಕೇವಲ ಅಕ್ಕಿ ಪಡೆಯಲು ಅಲ್ಲ ಆಸ್ಪತ್ರೆಗೆ ಉಚಿತ ಆರೋಗ್ಯ. ಗೃಹಲಕ್ಷ್ಮಿ ಸೇರಿದಂತೆ ಗ್ಯಾರೆಂಟಿ ಯೋಜನೆ ಇತರಅನೇಕ ಸರಕಾರಿ ಸೌಲಭ್ಯ.ಮಕ್ಕಳ ವ್ಯಾಸಂಗ ಪಡೆಯಲು ಪಡಿತರ ಚೀಟಿ ಅವಶ್ಯಕತೆ ಇದೆ.
ಸಿದ್ದಾಪುರ ಗ್ರಾಮದ ಗಂಗಮ್ಮನ ಕಥೆಯಲ್ಲ ತಾಲೂಕಿನ ಬಹುತೇಡ ಬಡ ಕೂಲಿ ಕಾರ್ಮಿಕರ ಪಡಿತರ ಚೀಟಿಗಳನ್ನು ಅವೈಜ್ಞಾನಿಕ ವಾಗಿ ತೆರಿಗೆ ಕಟ್ಟುತ್ಯೀರ ಎಂಬ ಮಾಹಿತಿ ಆಧಾರಿಅದರಿಸಿ ಪಡಿತರ ಚೀಟಿ ರದ್ದಾಗಿದ್ದು ಪಡಿತರ ಚೀಟಿಗಾಗಿ ದಿನನಿತ್ಯ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಗೆ ಅಲೆದಾಡುತ್ತಿದ್ದಾರೆ.
ಕೂಡಲೆ ಸರಕಾರನಪರಶೀಲಿಸಿ ಬಿಪಿಎಲ್ ಕಾರ್ಡ್ ವಂಚಿತ ಬಡಕುಟುಂಬಗಳಿಗೆ ಪಡಿತರ ಚೀಟಿ ಕೊಡುವರೇ ಕಾದು ನೋಡ ಬೇಕಿದೆ.

About The Author
Discover more from JANADHWANI NEWS
Subscribe to get the latest posts sent to your email.