December 14, 2025
images.jpeg

ಚಳ್ಳಕೆರೆ ಅ.6 ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯು ಬಹಳ ವೇಗವಾಗಿ ನಡೆಯುತ್ತಿದ್ದು, ರಾಜ್ಯಕ್ಕೆ 5 ನೇ ಸ್ಥಾನದಲ್ಲಿದ್ದರೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ.
ಹೌದು ಇದು ಚಳ್ಳಕೆರೆ ತಾಲೂಕಿನಲ್ಲಿ ಶಿಕ್ಷಕರ.ಗ್ರಾಮಲೆಕ್ಕಾಧಿಕಾರಿಗಳ ಹಾಗೂ ಮೇಲ್ವೀಚಾರಕರ ಶ್ರಮದಿಂದ ಚಳ್ಳಕೆರೆ ತಾಲೂಕು ರಾಜ್ಯದಲ್ಲಿ 5 ನೇ ಸ್ಥಾನ ಪಡೆದು ಕೊಂಡರೆ ಚಿತ್ರದುರ್ಗ ಜಿಲ್ಲೆಯಲ್ಲಿ ಚಳ್ಳಕೆರೆ ತಾಲೂಕು ಪ್ರಥಮ ಸ್ಥಾನ ಪಡೆದಿದೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
ರಾಜ್ಯ ಸರ್ಕಾರದ ಆದೇಶದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯ ರಾಜ್ಯದಾದ್ಯಂತ ಪ್ರಾರಂಭವಾಗಿದ್ದು ಸೆ.7 ಕ್ಕೆ ನಿಗದಿತ ಅವದಿ ಮುಕ್ತಾಯಗೊಂಡಿದ್ದು.ಉಳಿಕೆ ಸಮೀಕ್ಷೆಯನ್ನು ಸೆ.8 ರಿಂದ ಬೆಳಗ್ಗೆ 8 ಗಂಟೆಯಿಂದ ಮಧ್ಯಹ್ನಾ 1 ಗಂಟೆಯವರೆಗೆ ತರಗತಿಗಳಲ್ಲಿ ಭಾಗವಹಿಸಿ ನಂತರ ಸಮೀಕ್ಷೆ ಮಾಡುವಂತೆ ಸರಕಾರ ಸುತ್ತೋಲೆ ಹೊರಡಿಸಿದೆ.
ಚಳ್ಳಕೆರೆ ತಾಲೂಕಿನಲ್ಲಿ81527 ಮನೆಗಳನ್ನು ಗುರುತಿಸಿದ್ದು ಈಗಾಗಲೆ ಸುಮಾರು 79310 ಮನೆಗಳ ಸಮೀಕ್ಷೆ ಪೂರ್ಣಗೊಳಿಸಿದ್ದು. ಉಳಿಕೆ ಮನೆಗಳಲ್ಲಿ ಕೆಲವರು ಮಾಹಿತಿ ನೀಡಲು ನಿರಾಕರಿಸಿರುವ. ಮನೆ ಖಾಲಿ ಮಾಡಿರುವುದು.ಬೇರೆ ಊರಿಗೆ ಹೋದವರ ಮನೆಗಳು ಸೇರಿದಂತೆ ಇತರೆ ಮನೆಗಳಿದ್ದು ಗಣತಿದಾರರು ಸಮೀಕ್ಷೆ ಮಾಡಲು ಶ್ರಮವಹಿಸುತ್ತಿದ್ದು ಸರಕಾರ ನಿಗದಿಮಾಡಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯ ಪೂರ್ಣಗೊಳಿಸುವ ಮಾಹಿತಿ ಲಭ್ಯವಾಗಿದೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading