March 18, 2026
1759734069067.jpg

ಚಳ್ಳಕೆರೆ: ಒಬ್ಬ ವ್ಯಕ್ತಿ ಎಷ್ಟೇ ಉನ್ನತ ಸ್ಥಾನಕ್ಕೆ ಏರಿದರು ತಾನು ಬೆಳೆದು ಬಂದ ಸಮುದಾಯವನ್ನು ತಾಯಿಯಂತೆ ಗೌರವಿಸಬೇಕು ಎಂದು ಶಾಸಕ ಟಿ ರಘುಮೂರ್ತಿ ಅಭಿಪ್ರಾಯಪಟ್ಟರು.

ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ವಾಲ್ಮೀಕಿ ಸಮಾಜದ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ವಾಲ್ಮೀಕಿ ಸಿರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ತಾಲೂಕಿನಲ್ಲಿ ವಾಲ್ಮೀಕಿ ಸಮಾಜ ಹೆಚ್ಚಿನ ಜನಸಂಖ್ಯೆ ಹೊಂದಿದ್ದು ಮಾಜಿ ಸಚಿವ ತಿಪ್ಪೇಸ್ವಾಮಿ ಸೇರಿದಂತೆ ಸಮಾಜದ ಅನೇಕ ಹಿರಿಯ ಮುಖಂಡರ ಶ್ರಮದಿಂದ ಉತ್ತಮ ಕಾರ್ಯಗಳು ನಡೆದಿವೆ ರಾಜ್ಯದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಶೇ.7 ಮೀಸಲಾತಿ ಕಲ್ಪಿಸಲು ಪ್ರಸನ್ನಾನಂದಪುರಿ ಸ್ವಾಮೀಜಿ 258 ದಿನಗಳ ಕಾಲ ಹೋರಾಟ ನಡೆಸಿ ಮೀಸಲಾತಿ ಕಲ್ಪಿಸಿದರು. ಪ್ರತಿಭೆ ಎಂಬುದು ಎಲ್ಲರಲ್ಲೂ ಇರುತ್ತದೆ ಆದರೆ ಅದಕ್ಕೆ ಸರಿಯಾದ ಅವಕಾಶ ಸಿಕ್ಕಿರುವುದಿಲ್ಲ ವಾಲ್ಮೀಕಿ ಸಮುದಾಯದ ಜನರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಅನಾವರಣಗೊಳಿಸಲು ವಾಲ್ಮೀಕಿ ಸಿರಿ ಕಾರ್ಯಕ್ರಮ ಅನುಕೂಲಕರವಾಗಿದ್ದು ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆದು ಉತ್ತಮ ಪ್ರತಿಭೆಗಳು ಹೊರಹೊಮ್ಮಲಿ ಎಂದು ಆಶಿಸಿದರು.

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಕೆ ಟಿ ಕುಮಾರಸ್ವಾಮಿ ಮಾತನಾಡಿ ಮ್ಯಾಸನಾಯಕರ ಬುಡಕಟ್ಟು ಸಂಸ್ಕೃತಿಯನ್ನು ಉಳಿಸುವಲ್ಲಿ ಕಿಲಾರಿಗಳ ಪಾತ್ರ ಅತ್ಯಂತ ಪ್ರಮುಖವಾಗಿದ್ದು ಇಂತಹ ಕಾರ್ಯವನ್ನು ನನ್ನಿವಾಳ ಗ್ರಾಮದ ಕಿಲಾರಿಗಳು ಹಲವು ವರ್ಷಗಳಿಂದ ದೇವರ ಹಸುಗಳನ್ನು ಸಾಕುತ್ತ ವಾಲ್ಮೀಕಿ ಸಮಾಜದ ಬುಡಕಟ್ಟು ಸಂಸ್ಕೃತಿಯನ್ನು ಪೋಷಣೆ ಮಾಡುತ್ತಾ ಬಂದಿದ್ದಾರೆ ಪಾವಗಡದ ಜಪಾನಂದ ಸ್ವಾಮೀಜಿ ಹಾಗೂ ಪ್ರಸನ್ನಾನಂದಪುರಿ ಸ್ವಾಮೀಜಿ ಕಿಲಾರಿಗಳ ಜೀವನ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ ವಾಲ್ಮೀಕಿ ಸಮಾಜದ ಬುಡಕಟ್ಟು ಸಂಸ್ಕೃತಿ ಉಳಿಯಬೇಕಾದರೆ ಕಿಲಾರಿಗಳಿಗೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಾಲ್ಮೀಕಿ ಸಮುದಾಯದ ಮುಖಂಡರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶಿಲ್ಪ ಉಪಾಧ್ಯಕ್ಷೆ ಕವಿತಾ ಸಮುದಾಯದ ಮುಖಂಡ ಎಚ್ಎಂ ಮಲ್ಲಪ್ಪ ನಾಯಕ ಬಿಟಿ ರಮೇಶ್ ಗೌಡ ಎಂ ಜಯಣ್ಣ ಪಿ ತಿಪ್ಪೇಸ್ವಾಮಿ ಸುಮಕ್ಕ ತಿಪ್ಪಮ್ಮ ಟಿ ಶಿವಕುಮಾರ್ ಜಿಟಿ ವೀರಭದ್ರ ಸ್ವಾಮಿ ಸಿ ಕೆ ರಂಗಸ್ವಾಮಿ ತಿಪ್ಪಣ್ಣ ಮರಿಕುಂಟೆ ರಾಮದಾಸ್ ಕೆಪಿ ಬೂತಯ್ಯ ಸಿಟಿ ಶ್ರೀನಿವಾಸ್ ಸೂರ್ಯ ಪ್ರಭ ಯಶೋದಮ್ಮ ಸೌಭಾಗ್ಯಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading