September 15, 2025

ಚಳ್ಳಕೆರೆ-ಅ6 ಧ್ಯಾನ ಪ್ರತಿಯೊಬ್ಬರಿಗೂ ನೆಮ್ಮದಿ ನೀಡುವ ಕೇಂದ್ರವಾಗಿದೆ ಎಂದು ಪಿರಮಿಡ್ ಧ್ಯಾನ ಕೇಂದ್ರದ ಹಿರಿಯ ಮುಖಂಡ ಕೆ.ಎಸ್.ಗೋವಿಂದರಾಜು ತಿಳಿಸಿದರು.
ಅವರು, ದಸರಾಹಬ್ಬ ಹಿನ್ನೆಲೆಯಲ್ಲಿ ಪಿರಮಿಡ್ ಧ್ಯಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಧ್ಯಾನ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನವರಾತ್ರಿ ಹಿನ್ನೆಲೆಯಲ್ಲಿ 9ದಿನಗಳ ಕಾಲ ಪ್ರತಿ ರಾತ್ರಿ 9ರಿಂದ12ವರೆಗೂ ಸಾಮೂಹಿಕ ಧ್ಯಾನ ಮತ್ತು ಸಜ್ಜನ ಸಾಂಗತ್ಯವನ್ನು ಹಮ್ಮಿಕೊಂಡಿದ್ದು ಈ ಸಂದರ್ಭದಲ್ಲಿ ಹಲವಾರು ಆಧ್ಯಾತ್ಮಿಕ ಹಾಗೂ ದೈವ ಸಂಕಲ್ಪದ ಬಗ್ಗೆ ಅನೇಕ ಹಿರಿಯರು ಮಾರ್ಗದರ್ಶನ ನೀಡುವರು. ಪ್ರತಿಯೊಬ್ಬ ವ್ಯಕ್ತಿ ಕೇವಲ ತನ್ನ ವ್ಯವಹಾರಗಳನ್ನು ನಡೆಸಿಕೊಂಡು ಹೋದರೆ ಸಾಲದು, ಬದಲಾಗಿ ಆತನಿಗೂ ಶಾಂತಿ, ನೆಮ್ಮದಿಯ ಅವಶ್ಯಕತೆ ಇದೆ. ಇಂತಹ ಶಾಂತಿ,ನೆಮ್ಮದಿಯನ್ನು ಧ್ಯಾನ ಕೇಂದ್ರಗಳಲ್ಲಿ ಮಾತ್ರ ಧ್ಯಾನ ಮಾಡುವ ಮೂಲಕ ಪಡೆಯಬಹುದು ಎಂದುಸಿ.ಈ.ಜಗದೀಶ್ವರಚಾರಿ, ಶಿವಲೀಲಾ, ಕಿರಣ್, ದ್ರಾಕ್ಷಾಯಿಣಿಸಿದ್ದೇಶ್, ಸೌಮ್ಯಉಮೇಶ್, ವೀಣಾಚಂದ್ರು, ಶಕುಂತಲಾಶಿವಣ್ಣ ಮುಂತಾದವರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading