September 15, 2025


ಹಿರಿಯೂರು :
ನಗರದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಟಾಪರ್ ಆಗಿದ್ದ ಕುಮಾರಿ ಎಂ.ಆರ್.ಅಮೃತಲಕ್ಷ್ಮಿಯವರು ಇದೀಗ ಪಿ.ಎಚ್.ಡಿ ಮುಗಿಸಿ ಡಾಕ್ಟರೇಟ್ ಪಡೆಯುವ ಮೂಲಕ ನಮ್ಮ ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜಕ್ಕೆ ಕೀರ್ತಿ ತಂದಿರುತ್ತಾರೆ, ಇದು ನಿಜಕ್ಕೂ ನಮಗೂ ಹಾಗೂ ನಮ್ಮ ಸಮಾಜಕ್ಕೂ ಹೆಮ್ಮೆಯ ವಿಷಯವಾಗಿದೆ ಎಂಬುದಾಗಿ ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜದ ಹಿರಿಯ ಉಪಾಧ್ಯಕ್ಷರಾದ ಉಮೇಶ್ ಗುಜ್ಜಾರ್ ಹೇಳಿದರು.
ನಗರದಲ್ಲಿ ಕುಮಾರಿ ಅಮೃತಲಕ್ಷ್ಮೀಯವರ ಮನೆಗೆ ಅಖಿಲ ಭಾರತ ಭಾವಸಾರ ಕ್ಷತ್ರಿಯ ಸಮಾಜದ ಪದಾಧಿಕಾರಿಗಳ ಜೊತೆ ಭೇಟಿ ನೀಡಿ ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದ ಡಾ.ಎಂ.ಆರ್.ಅಮೃತಲಕ್ಷ್ಮಿಯವರಿಗೆ ಆತ್ಮೀಯವಾಗಿ ಶಾಲು ಹೊದಿಸಿ, ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ, ನಂತರ ಅವರು ಮಾತನಾಡಿದರು.
ಅಮೃತಲಕ್ಷ್ಮೀಯವರು ಬಿಎಸ್ಸಿಯಲ್ಲಿ ಪ್ರಥಮ ರ್ಯಾಂ ಕ್ ಗಳಿಸಿ ಚಿನ್ನದ ಪದಕ ಪಡೆದಿದ್ದರು. ಅದೇ ರೀತಿ ಎಂ ಎಸ್ಸಿ ಯಲ್ಲಿಯೂ ಪ್ರಥಮ ರ್ಯಾಂ ಕ್ ಗಳಿಸಿ ಎರಡು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದರು. ನಗರದಲ್ಲಿ “ಚಿನ್ನದಹುಡುಗಿ” ಎಂದೇ ಪ್ರಸಿದ್ಧಿ ಪಡೆದ ಇವರು ಇದೀಗ ದಾವಣಗೆರೆ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ, ಇವರ ಮುಂದಿನ ಜೀವನ ಸುಖಕರವಾಗಿರಲಿ ಎಂಬುದಾಗಿ ಅವರು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಹಿರಿಯೂರು ತಾಲ್ಲೂಕು ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಬಿ.ಕೆ.ಮಂಜುನಾಥ್ ರಾವ್ ಬೇದ್ರೆ, ಹೊಸದುರ್ಗ ತುಳಜಾಭವಾನಿ ದೇವಸ್ಥಾನ ಟ್ರಸ್ಟ್ ಕಾರ್ಯದರ್ಶಿ ಎಂ.ಎನ್.ರವಿಕುಮಾರ್, ಮಾಳದ್ಕರ್, ಟಿ.ಪಿ ಚೇತನ್ ಕುಮಾರ್ ಬಾಂಗ್ರೆ ಹಾಗೂ ಗಣೇಶ್ ರಾವ್ ಡೋಯಿಜೋಡೆ ಮತ್ತು ಅಮೃತ ಲಕ್ಷ್ಮಿಯವರ ತಂದೆ ಹಾಗೂ ಹಿರಿಯ ಪತ್ರಕರ್ತರಾದ ಎಂ.ರವೀಂದ್ರನಾಥ್, ತಾಯಿ ಎನ್.ರೇಖಾ ಚಿಕ್ಕಪ್ಪ ಕಿರಣ್ ಮಿರಜ್ಕರ್, ಹಾಗೂ ಪ್ರಕಾಶ್ ಮಿರಜ್ಕರ್ ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading