September 15, 2025

ಚಳ್ಳಕೆರೆ: ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸಿಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಆದೇಶವನ್ನು ವಿರೋಧಿಸಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಪದಾಧಿಕಾರಿಗಳು ರಾಜ್ಯಧ್ಯಕ್ಷ  ಬಂಗ್ಲೆ ಮಲ್ಲಿಕಾರ್ಜುನರವರ ನೇತೃತ್ವದಲ್ಲಿ ಸಚಿವ ಡಿ ಸುಧಾಕರ್ ರವರ ಚಳ್ಳಕೆರೆ ನಿವಾಸದ ಮುಂದೆ ಪ್ರತಿಭಟನೆ ನಡೆಸಿತು.

ಈ ವೇಳೆ ಮಾತಾಡಿದ ಧ್ವನಿ ಸಂಘಟನೆಯ ರಾಜ್ಯದ್ಯಕ್ಷರು ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಓಡಾಡಲು ಉಚಿತ ಬಸ್ ಪಾಸ್ ಸಂಬಂದಿಸಿದಂತೆ ರಾಜ್ಯ ಸರ್ಕಾರ ಕರಾಳ ಆದೇಶವನ್ನು ಹೊರಡಿಸಿದ್ದು ಗ್ರಾಮಾಂತರ ಪತ್ರಕರ್ತರಿಗೆ ಮರಣ ಶಾಸನದಂತಿದೆ ಪತ್ರಿಕೆಗಳು ಮಾಧ್ಯಮ ಪಟ್ಟಿಯಲ್ಲಿ ಇರಬೇಕು ಹಾಗೂ ಪತ್ರಕರ್ತರಿಗೆ ಖಾಯಂ ನೇಮಕಾತಿ ಆದೇಶ ಪತ್ರ ಹೊಂದಿರಬೇಕು ಎಂಬ ಆದೇಶದಿಂದಾಗಿ ರಾಜ್ಯದಲ್ಲಿರುವ ಯಾವೊಬ್ಬ ಗ್ರಾಮೀಣ ಪತ್ರಕರ್ತರಿಗೂ ಈ ಯೋಜನೆ ಪ್ರಯೋಜನವಾಗುವುದಿಲ್ಲ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಮಾಧ್ಯಮ ಪಟ್ಟಿಯಲ್ಲಿರುವ ಮುದ್ರಣ, ವಿದ್ಯುನ್ಮಾನ ಮಾಧ್ಯಮಗಳ ಸಂಖ್ಯೆಯನ್ನು ಆದರಿಸಿ ರಾಜ್ಯಾದ್ಯಂತ ಒಟ್ಟು 5222 ಪತ್ರಕರ್ತರಿಗೆ ಮಾತ್ರ ಈ ಯೋಜನೆಯ ಪ್ರಯೋಜನ ಎಂದು ಸರ್ಕಾರ ತಿಳಿಸಿದ್ದು ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳ ಸಂಪಾದಕರು ಹಾಗೂ ವರದಿಗಾರರಿಗೆ ಈ ಆದೇಶದಿಂದ ಅನ್ಯಾಯವಾಗಿದೆ ಮಾಧ್ಯಮ ಪಟ್ಟಿಯಲ್ಲಿರದ ಪತ್ರಿಕೆಗಳ ಸಂಪಾದಕರು ಹಾಗೂ ವರದಿಗಾರರು ಸರ್ಕಾರದ ಲೆಕ್ಕದಲ್ಲಿ ಪತ್ರಕರ್ತರೆ ಅಲ್ಲವೇ ಜೊತೆಗೆ ನಿಯತಕಾಲಿಕೆಗಳಿಗೆ ಈ ಸೌಲಭ್ಯ ನೀಡಲು ಅವಕಾಶ ಇಲ್ಲ ಎಂದಿರುವುದು ದುರದೃಷ್ಟಕರ ಪ್ರತಿಯೊಬ್ಬ ಪತ್ರಕರ್ತ ಹಾಗೂ ಸಂಪಾದಕರಿಗೆ ಆರ್ ಎನ್ ಐ ಪ್ರಮುಖವಾಗಿದ್ದು ಇದರ ಜೊತೆಗೆ ಪ್ರಕಟವಾಗುವ ಪತ್ರಿಕೆಗಳ ಸಂಚಿಕೆಯನ್ನು ಸರ್ಕಾರ ಪರಿಗಣಿಸಬೇಕು. ಈಗಾಗಲೇ ಶಕ್ತಿ ಯೋಜನೆ ಅಡಿ ರಾಜ್ಯಾದ್ಯಂತ ಓಡಾಡಲು ಮಹಿಳೆಯರಿಗೆ 1800 ಕೋಟಿ ರೂಗಳು ಮೀಸಲಿರಿಸಿ ಓಡಾಡಲು ಆಧಾರ್ ಕಾರ್ಡ್ ಮಾನದಂಡ ಮಾಡಿದ್ದು ರಾಜ್ಯದಲ್ಲಿ 12 ಸಾವಿರ ಪತ್ರಕರ್ತರಿಗೆ ಜಿಲ್ಲಾ ಮಟ್ಟದಲ್ಲಿ ಓಡಾಡಲು ಈ ರೀತಿಯ ಕಠಿಣ ಮಾನದಂಡ ವಿಧಿಸಿರುವುದು ಸರಿಯಲ್ಲ ಕೂಡಲೇ ಸರ್ಕಾರ ಆದೇಶದಲ್ಲಿರುವ ಮಾಧ್ಯಮ ಪಟ್ಟಿಯಲ್ಲಿ ಇರಬೇಕೆಂಬ ನಿಯಮವನ್ನು ತೆಗೆದುಹಾಕಿ ಖಾಯಂ ನೇಮಕಾತಿ ಆದೇಶ ಪತ್ರದ ಬದಲಾಗಿ ನೇಮಕಾತಿ ಪತ್ರದ ಆದೇಶ ಇದ್ದರೆ ಸಾಕು ಎಂಬ ನಿಯಮವನ್ನು ಒಳಪಡಿಸಿ ಮರು ಆದೇಶ ಹೊರಡಿಸಿ ನಾಡಿನ ಪತ್ರಕರ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಮಾತನಾಡಿ ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದ್ದು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪರಿಹಾರ ಸೂಚಿಸಲಾಗುವುದು ಎಂದು ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಪತ್ರಕರ್ತರ ಧ್ವನಿ ಸಂಘಟನೆಯ ಗೌರವಾಧ್ಯಕ್ಷ ಡಿ ವೀರಣ್ಣ ತಾಲೂಕು ಅಧ್ಯಕ್ಷ ಜಾಲಿ ಮಂಜುನಾಥ್ ಜಿಲ್ಲಾಧ್ಯಕ್ಷ ಅನಂತಮೂರ್ತಿ ನಾಯಕ್ ಉಪಾಧ್ಯಕ್ಷ ದಿನೇಶ್ ಜಿಲ್ಲಾ ಕಾರ್ಯದರ್ಶಿ ದ್ಯಾಮರಾಜ್ ಈ ನಾಗರಾಜ್ ಶ್ರೀನಿವಾಸ ವಿಜಯಕುಮಾರ್ ಮಹಾಂತೇಶ್ ರಾಮಪ್ಪ ಸುರೇಶ್ ನಾರಾಯಣಸ್ವಾಮಿ ಸಂಜೀವ ಮೂರ್ತಿ ತಿಪ್ಪೇಸ್ವಾಮಿ ರುದ್ರಮುನಿ ರಂಗಸ್ವಾಮಿ ರಮಾಮಣಿ ಸುಪ್ರಿತ ಪ್ರತಿಭಟನೆಯಲ್ಲಿ ಭಾಗವಹಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading