ಚಿತ್ರದುರ್ಗ ಸೆ.06:
ಸಹಜ ಕೃಷಿಯು ಒಂದುಉತ್ತಮ ಪರಿಸರ ಸ್ನೇಹಿ ಪದ್ಧತಿಯಾಗಿದೆ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಹಾಗೂ ಮುಖ್ಯಸ್ಥ ಆರ್.ರಜನೀಕಾಂತ ಹೇಳಿದರು. ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಿಲ್ಲೆಯ ರೈತರಿಗೆ ಹಮ್ಮಿಕೊಂಡಿದ್ದ ಮೂರು ದಿನಗಳ “ಸಹಜ ಕೃಷಿ – ಆನಂದಮಯ ಜೀವನಕ್ಕೆ ದಾರಿ’’ ಎಂಬ ವಿಷಯದ ಕುರಿತು ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ಸಹಜ ಕೃಷಿಯು ಒಂದು ಉತ್ತಮ ಪರಿಸರ ಸ್ನೇಹಿ ಪದ್ಧತಿಯಾಗಿದ್ದು, ಕನಿಷ್ಟ ನಿರ್ವಹಣೆ ಮತ್ತು ಕಡಿಮೆ ವೆಚ್ಚದಲ್ಲ್ಲಿ ವಿಷಮುಕ್ತ ಆಹಾರದ ಉತ್ಪಾದನೆಗೆ ಸಹಕಾರಿಯಾಗುತ್ತದೆ ಎಂದರು.
ಸಮರ್ಥ ನೀರಿನ ನಿರ್ವಹಣೆ ಮತ್ತು ಮಣ್ಣಿನಲ್ಲಿ ತೇವಾಂಶ ಕಾಪಾಡಲು ಸ್ಥಳೀಯವಾಗಿ ಸಿಗುವ ಕೃಷಿ ತ್ಯಾಜ್ಯಗಳಿಂದ ಮುಚ್ಚಿಗೆ, ಹಸಿರೆಲೆ ಗೊಬ್ಬರ ಬೆಳೆಗಳನ್ನು ಬೆಳೆದು ಭೂಮಿಗೆ ಸೇರಿಸುವುದು ಹಾಗೂ ಜೀವ ವೈವಿದ್ಯತೆ ಹೆಚ್ಚಿಸುವುದರ ಕುರಿತು ದಾವಣಗೆರೆ ಐಕಾಂತಿಕ ಸಮುದಾಯದ ಚಿಕ್ಕಜಾಜೂರಿನ ವೀರೇಶ್ ಮಾತನಾಡಿ, ಮಳೆಯಾಶ್ರಿತ ಸಹಜ ಕೃಷಿ ಮಾಡುವವರು ಬಿದ್ದ ಮಳೆ ನೀರನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಲು ಕಂದಕ ಬದುಗಳ ನಿರ್ಮಾಣ ಮತ್ತು ಕೃಷಿ ಹೊಂಡದಿಂದ ಸಾಧ್ಯವೆಂದರು.
ಭೂಮಿಯ ಫಲವತ್ತತೆ ಹಾಗೂ ಜೀವವೈವಿದ್ಯತೆ ಹೆಚ್ಚಿಸಲು ರೈತರು ಶೇ.25 ಏಕದಳ, ಶೇ.25 ದ್ವಿದಳ ಧಾನ್ಯ, ಶೇ.25 ಮಸಾಲೆ/ಸಾಂಬಾರು ಬೆಳೆ ಮತ್ತು ಶೇ.25 ಎಣ್ಣೇಕಾಳು ಬೆಳೆಯ ನಾಟಿ ಬೀಜಗಳನ್ನು ಬಿತ್ತನೆ ಮಾಡಿ ಬೆಳೆÉಯ ಅವಧಿ 30-45 ದಿನ ಇವರುವಾಗ ಭೂಮಿಗೆ ಸೇರಿಸಬೇಕು. ರೈತರುಉತ್ತಮಗುಣಮಟ್ಟದ ಆಹಾರ ಉತ್ದಾದನೆ ಹಾಗೂ ಅವುಗಳ ಮೌಲ್ಯವರ್ಧನೆಯಿಂದ ವರ್ಷಪೂರ್ತಿ ನೇರ ಮಾರುಕಟ್ಟೆಯನ್ನು ಕಲ್ಪಿಸಿಕೊಳ್ಳಬಹುದೆಂದರು.
ಕೈತೋಟ ಮತ್ತು ತಾರಸೀ ತೋಟದ ಬಗ್ಗೆ ದಾವಣಗೆರೆಯ ಅಭಿಶೇಕ್ ಮಾತನಾಡಿ, ರೈತರು ತಮ್ಮ ಕುಟುಂಬಕ್ಕೆ ಬೇಕಾದ ವಿಷಮುಕ್ತ ವಿವಿಧ ಸೊಪ್ಪು, ಹಣ್ಣು ಮತ್ತು ತರಕಾರಿಗಳನ್ನು ಬೆಳೆದುಕೊಳ್ಳುವ ವಿಧಾನ ಹಾಗೂ ಹೊಸದಾಗಿ ತೋಟ ಕಟ್ಟಲು ಅವಶ್ಯಕತೆ ಇರುವ ವಿಷಯಗಳ ಕುರಿತು ತಿಳಿಸಿದರು.
ದಾವಣಗೆರೆಯಶ್ರೀ ಜಬೀವುಲ್ಲಾ ಇ ಬಿದಿರಿನ ಬಗ್ಗೆ ಮಾತನಾಡಿ, ಪ್ರಪಂಚದಲ್ಲೇ ಬಿದಿರು ಅತ್ಯಂತ ವೇಗವಾಗಿ ಬೆಳೆಯುವ ಹುಲ್ಲಿನ ಜಾತಿಯ ಸಸ್ಯವಾಗಿದ್ದು, ಒಟ್ಟಾರೆ 1500ಕ್ಕೂ ಹೆಚ್ಚಿನ ವಿವಿಧಜಾತಿಯ ಬಿದಿರುಗಳಲ್ಲಿ 136 ಜಾತಿಯ ಬಿದಿರು ನಮ್ಮ ದಢಶದಲ್ಲಿವೆ. ಪರಿಸರದಲ್ಲಿ ಬಿದಿರು ಸಹ ಶುದ್ದವಾದ ಆಮ್ಲಜನಕ ನೀಡಲು ಸಹಕಾರಿಯಾಗಿದ್ದು, ಪೇಪರ್ ಮತ್ತು ಇತರೆ ಕೈಗಾರಿಕೆಗಳಲ್ಲಿ ಬಿದಿರಿನ ಹೆಚ್ಚಿನ ಬಳಕೆಯಿಂದ ಇತ್ತೀಚಿನ ದಿನಗಳಲ್ಲಿ ಇದರ ಸಂರಕ್ಷಣೆಗೆ ಒತ್ತು ನೀಡಬೇಕೆಂದರು.
ಸಹಜ ಕೃಷಿಕ ರಾಘವ ಅವರು ವಿವಿಧ ಸುಸ್ಥಿರ ಕೃಷಿ ಪದ್ದತಿಗಳಾದ ಸಾಂಪ್ರದಾಯಕ ಕೃಷಿ, ಸಾವಯವ ಕೃಷಿ, ಸಹಜ ಕೃಷಿ, ಶಾಶ್ವತ ಕೃಷಿ, ಜೀವಚೈತನ್ಯ ಕೃಷಿ, ಹವನ/ಹೋಮ ಕೃಷಿ, ನಾಟಿಕೋ ಕೃಷಿ, ಋಷಿ ಕೃಷಿ, ಪರಿಸರಆಧಾರಿತ ಕೃಷಿ, ತದ್ರೂಪಿ ಕಾಡು ಕೃಷಿ ಕುರಿತು ಮಾಹಿತಿ ನೀಡಿದರು.
ಮರಡಿದೇವಿಗೆರೆಯ ಈಶ್ವರನ್ ಪಿ ತೀರ್ಥ ಅವರು ತಮ್ಮ ಸಹಜ ಕೃಷಿ ಹಾಗೂ ಪ್ರಸಕ್ತ ಸಾಲಿನಲ್ಲಿ ಸಾವಯವ ಪದ್ದತಿಯಲ್ಲಿ ಈರುಳ್ಳಿ ಬೆಳೆದ ವಿಧಾನದ ಕುರಿತು ಮಾಹಿತಿ ನೀಡಿದರು.
ಹಂಪಿಯ ಪಂಪಯ್ಯ ಮಾಲಿಮಠ್ ಅವರು ವಿವಿಧ ಹಾವುಗಳ ಕುರಿತು ಪರಿಚಯ ಮಾಡಿಕೊಡುತ್ತಾ, ಹಾವು ಕಡಿತದಿಂದ ರೈತರು ಪಾರಾಗುವ ಮತ್ತು ಹಾವು ಕಡಿದಾದ ಅನುಸರಿಸಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಿದರು. ನಂತರ ಕೃಷಿ ಮತ್ತು ಪರಿಸರದಲ್ಲಿ ಇರುವ ವಿವಿಧ ಪಕ್ಷಿಗಳ ಪ್ರಾಮುಖ್ಯತೆ ಕುರಿತು ಮಾಹಿತಿ ನೀಡಿದರು. ನಂತರ ರಾಘವರವರ ಸಹಜ ಕೃಷಿ ಮತ್ತು ಸಹಜಜೀವನದ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.
3ನೇ ದಿನದ ತರಬೇತಿ ಕಾರ್ಯಗಾರದಲ್ಲಿ ವಿರೇಶ್ ಇವರು ರೈತರು ಉತ್ತಮಗುಣಮಟ್ಟದ ವಿಷಮುಕ್ತ ಆಹಾರ ಉತ್ಪಾದನೆ ಮಾಡಿದರೆ ನಮ್ಮ ಮಾರುಕಟ್ಟೆಯನ್ನು ನಾವೇ ರೂಪಿಸಿಕೊಳ್ಳಬಹುದೆಂದರು. ಮಲೆಬೆನ್ನೂರಿನ ಪಾಂಡುರಂಗ ಅವರು ಜೀವಂತ ಬೇಲಿಯ ಸ್ವರೂಪ, ಮರ ಮತ್ತು ವಿವಿಧ ಗಿಡಗಳ ಸಂಯೋಜನೆಯಿಂದ ಉತ್ತಮ ಸೂಕ್ಷ್ಮ ವಾತಾವರಣಾ ನಿರ್ಮಿಸಲು, ಮಣ್ಣಿನ ಫಲವತ್ತತೆ ಮತ್ತು ಜೀವವೈವಿದ್ಯತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆಂದರು.
ರಾಘವ ಅವರು ಕಾರ್ಯಗಾರದ ಕೊನೆಯಲ್ಲಿ 3 ದಿನದ ಅಧಿವೇಶನದಲ್ಲಿ ಮಂಡಿಸಿದ ವಿವಿಧ ವಿಷಯಗಳ ಕುರಿತು ಪ್ರಸ್ತಾಪಿಸುತ್ತಾ ಸಂಕ್ಷಿಪ್ತವಾಗಿ ತಮ್ಮ ತೋಟದಲ್ಲಿ ಸಹಜಕೃಷಿಯ ನಾಲ್ಕು ತತ್ವಗಳಾದ ಉಳುಮೆ ಮಾಡದಿಲ್ಲದಿರುವುದು, ರಸಗೊಬ್ಬರ ಮತ್ತು ಪೀಡೆನಾಶಕ ಬಳಸದಿರುವುದು ಹಾಗೂ ಕಳೆ ಕೀಳದೆ ಉತ್ತಮಗುಣಮಟ್ದದ ವಿಷಮುಕ್ತ ಆಹಾರ ಉತ್ಪಾದನೆಗೆ ತಾವು ಅಳವಡಿಸಿದ ಕ್ರಮಗಳ ಕುರಿತು ಮಾಹಿತಿ ನೀಡಿದರು.



ಸಹಜಕೃಷಿಯ ತೋಟಗಳಲ್ಲಿ ಬೇಲಿಯ ನಿರ್ವಹಣೆ, ಒಡಾಡಲು ದಾರಿಯ ಸ್ವಚ್ಚತೆ, ನೀರಿನ ನಿರ್ವಹಣೆ, ಹೊಸ ಗಿಡ ನೆಡುವುದು/ಗಿಡಗಳ ಸಂಯೋಜನೆ, ಕೊಯಿಲು, ಮಣ್ಣಿನ ಫಲವತ್ತತೆ ಹೆಚ್ಚಿಸುವುದು ಹಾಗೂ ತೇವಾಂಶ ನಿರ್ವಹಣೆಯಂತಹ ಕನಿಷ್ಟ ಕೆಲಸಗಳ ಕಡೆ ರೈತರು ಗಮನ ಕೊಡಬೇಕೆಂದು ತಿಳಿಸುತ್ತಾ ತರಬೇತಿಗೆ ಹಾಜರಾದ ರೈತರಲ್ಲಿ ಉದ್ಬವಿಸಿದ ವಿವಿಧ ಪ್ರಶ್ನೆ, ಸಂದೇಹಗಳಿಗೆ ಉತ್ತರಿಸಿದರು.
About The Author
Discover more from JANADHWANI NEWS
Subscribe to get the latest posts sent to your email.