
ನಾಯಕನಹಟ್ಟಿ: ಹೋಬಳಿಯ ನಲಗೇತನಹಟ್ಟಿ ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಸೌಹಾರ್ದತೆಯ ಪ್ರತೀಕವಾಗಿ ಮೊಹರಂ ಹಬ್ಬವನ್ನು ಸುಮಾರು ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಗಳು ಕಾರ್ಯಗಳೊಂದಿಗೆ ಸಂಭ್ರಮ ಸಡಗರದಿಂದ ಆಚರಿಸಿದರು. ವಿಶೇಷವಾಗಿ, ಹಬ್ಬದ ಕೊನೆಯ ದಿನದಂದು ನಡೆಯುವ ಕೆಂಡ ಹಾಯುವ ಸಂಪ್ರದಾಯದಲ್ಲಿ ಉಭಯ ಸಮುದಾಯದವರೂ ಭಕ್ತಿಭಾವದಿಂದ ಪಾಲ್ಗೊಂಡರು.



ನಲಗೇತನಹಟ್ಟಿ ಗ್ರಾಮಸ್ಥರ ಹೇಳಿಕೆಗಳ ಪ್ರಕಾರ, ಮೊಹರಂ
ಹಬ್ಬ ಅಥವಾ ಪೀರಲು ಹಬ್ಬವು ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ಸಾರುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಗ್ರಾಮದ ಯುವ ಮುಖಂಡ ಹಾಗೂ ಗ್ರಾ.
ಪಂ.ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪಿ. ಎನ್. ಮುತ್ತಯ್ಯ ಮಾತನಾಡಿ, ಮೊಹರಂ ಹಬ್ಬವನ್ನು ಪ್ರವಾದಿ ಮೊಹಮ್ಮದ್ ಅವರ ಮೊಮ್ಮಗ ಹುಸೇನ್ ಮತ್ತು ಅವರ ಸಹೋದರರ ನೆನಪಿಗಾಗಿ ಆಚರಿಸಲಾಗುತ್ತದೆ. ಜಾತಿ, ಧರ್ಮಗಳ ಭೇದವಿಲ್ಲದೆ ಬಹುತೇಕ ಕಡೆಗಳಲ್ಲಿ
ಹಿಂದೂ-ಮುಸ್ಲಿಮರು ಒಟ್ಟಾಗಿ ಇದನ್ನು ಆಚರಿಸುವುದು ಗಮನಾರ್ಹಎಂದರು.
ಗ್ರಾಮದ ಹಿರಿಯರಾದ ನಲ್ಲನ ದೊಡ್ಡಬೋರಯ್ಯ ವಿವರಿಸಿದಂತೆ ಹತ್ತು ದಿನಗಳ ಕಾಲ ನಡೆಯುವ ಪೀರಲು ಹಬ್ಬದಲ್ಲಿ ಪೆಟ್ಟಿಗೆಯಲ್ಲಿರುವ ದೇವರನ್ನು ಹೊರತೆಗೆದು ಪ್ರತಿಷ್ಠಾಪಿಸಲಾಗುತ್ತದೆ. ಪ್ರತಿದಿನ ವಿವಿಧ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಕೊನೆಯ ದಿನವಾದ ಮೊಹರಂ ಅನ್ನು ಎರಡೂ ಸಮುದಾಯದವರು ಸೇರಿ ಅತ್ಯಂತ ವಿಜೃಂಭಣೆಯಿಂದ ಮತ್ತು ಅದ್ದೂರಿಯಾಗಿ ಆಚರಿಸುತ್ತಾರೆ.
ಈ ಸಂದರ್ಭದಲ್ಲಿ. ನಲಗೇತನಹಟ್ಟಿ ಗ್ರಾಮದ ಹಿರಿಯರಾದ ಪೂರ್ಣ ಓಬಯ್ಯ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪಾಲಮ್ಮ ಪೂರ್ಣ ಓಬಯ್ಯ, ಉಪಾಧ್ಯಕ್ಷರಾದ ಈಗಲೂ ಬೋರಯ್ಯ, ಸದಸ್ಯರಾದ ಪಿ.ಎಂ ಮುತ್ತಯ್ಯ, ಬೋರಮ್ಮ ಸಣ್ಣ ಬೋರಯ್ಯ, ಪುಷ್ಪಲತಾ ಜಿ.ಬಿ ಮುತ್ತಯ್ಯ, ಬೋರಮ್ಮ ನಿಂಗರಾಜ್, ಬೋರಮ್ಮ ಮೇಕೆ ಬೋರಯ್ಯ, ಸೇರಿದಂತೆ ಸಮಸ್ತ ನಲಗೇತನಹಟ್ಟಿ ಗ್ರಾಮದ ಮುಸ್ಲಿಂ ಬಾಂಧವರಾದ ದಾದಾಪೀರ್, ಟಿಪ್ಪು ಸಾಬ್, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.