July 6, 2025
IMG-20250706-WA0242.jpg


ವರದಿ: ಶಿವಮೂರ್ತಿ ಓಬಯ್ಯನಹಟ್ಟಿ
ನಾಯಕನಹಟ್ಟಿ: 
ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಂ ಎರಡು ಸಮುದಾಯಗಳು ಸೇರಿ ಆಚರಣೆ ಮಾಡುವ ಹಬ್ಬ,  ನಾಯಕನಹಟ್ಟಿ ಸಮೀಪ ಇರುವ ಓಬಯ್ಯನಹಟ್ಟಿ  ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಅಮಾವಾಸ್ಯೆಯಾದ ಮೂರು ದಿನಗಳ ಬಳಿಕ ಗುದ್ದಲಿ ಹಾಕಿ ನಂತರ ಪೀರಲ ದೇವರುಗಳನ್ನು ಪ್ರತಿಷ್ಠಾಪನೆ ಮಾಡುತ್ತಾರೆ.

ಇನ್ನೂ ಶನಿವಾರ  ಸಂಜೆ ನಾಲ್ಕು ಗಂಟೆಯಿಂದ ಗ್ರಾಮದ ಪ್ರತಿ ಮನೆಯಿಂದ ಎತ್ತಿನ ಗಾಡಿ ಹಾಗೂ ಟ್ರ್ಯಾಕ್ಟರ್ ಮೂಲಕ ಕಟ್ಟಿಗೆಯನ್ನ ತಂದು ಕುಂಡಿಗೆ ಹಾಕುತ್ತಾರೆ, ಪೀರಲ ದೇವಾಲಯದ ಆವರಣದಲ್ಲಿ ರಾತ್ರಿ 10 ಗಂಟೆಗೆ ಸುಮಾರಿಗೆ ಅಗ್ನಿಕುಂಡಕ್ಕೆ ಅಗ್ನಿಯನ್ನು ಸ್ಪರ್ಶಿಸಿ ನಂತರ ಪೀರಲ ದೇವರಿಗೆ ಪಾನಕ ಸಕ್ಕರೆ ಕಡಲೆ, ಬೆಲ್ಲ ಮಂಡಕ್ಕಿ ಅರ್ಪಣೆ ಮಾಡಿ ವಿಶೇಷ ಪೂಜೆ ನೆರವೇರಿಸಿದರು,

 ಪೂರ್ವಿಕರ ಕಾಲದಿಂದಲೂ ಶ್ರದ್ಧ ಭಕ್ತಿಯಿಂದ ಮೊಹರಂ ಹಬ್ಬವನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ, ಅಲೈ ದೇವರು ಭಕ್ತರ ಇಷ್ಟಾರ್ಥ ಪೂರೈಸುವ ದೇವರೆಂದೇ ಪ್ರಸಿದ್ಧವಾಗಿದ್ದು, ಭಾನುವಾರ ಬೆಳಗ್ಗಿನಾ ಜಾವ ಇನ್ನೂ ಪೀರಲ ದೇವರ ಪೂಜಾರಿ ಮೊದಲು ಕೆಂಡ ತುಳಿದ ನಂತರ ಗ್ರಾಮದ ಯುವಕರು ಪೀರಲ ದೇವರುಗಳನ್ನು ಕೈಯಲ್ಲಿ ಹಿಡಿದು ಬೆಂಕಿ ಕೆಂಡ ತುಳಿದ ನಂತರ 13 ಜನ ಮಹಿಳೆಯರು ಸಂತಾನ ಭಾಗ್ಯ ಸಿಗಲೆಂದು ಕೆಂಡ ಅವರ ತಲೆ ಮೇಲೆ ಹಾಕಿದರು , ಇನ್ನೂ ಕೆಲವರು ಮನೆಯ ಸಮಸ್ಯೆ, ವ್ಯವಹಾರ ಸಮಸ್ಯೆ, ಇನ್ನೂ ಇತರೆ ಮನಸ್ಸಿನಲ್ಲಿ ಇಟ್ಟುಕೊಂಡು ಹರಕೆ ನಿರ್ವಹಿಸಲಿ ಎಂದು ಬೇಡಿಕೊಳ್ಳೋತ್ತಾರೆ.

ಭಾನುವಾರ  ಗ್ರಾಮಸ್ಥರ ಸಮ್ಮುಖದಲ್ಲಿ ಕೊನೆಯ ದಿನ ಅಂಗವಾಗಿ ಕಾವಸೇನಾ ವಿವಿಧ ವೇಷಗಳು ಹಾಕಿಕೊಂಡು ಮದ್ಯಾಹ್ನ ದಿಂದ ಸಂಜೆವರೆಗೂ ಹಿರಿಯ ಮುಖಂಡರು, ಯುವಕರು, ಮಹಿಳೆಯರು ಕುಣಿದು ಕುಪ್ಪಳಿಸುವ ಮೂಲಕ ಮೊಹರಂ ಆಚರಣೆ ಮಾಡುತ್ತಾರೆ,

ಇದೇ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಂಡೆ ಕಪ್ಪಿಲೆ ಓಬಣ್ಣ, ಮಾಜಿ ಉಪಾಧ್ಯಕ್ಷ ಡಿ ಎಚ್ ಪರಮೇಶ್ವರಪ್ಪ, ಗ್ರಾಮ ಪಂಚಾಯತಿ ಹಾಲಿ ಉಪಾಧ್ಯಕ್ಷ ಓ ಸೋಮಶೇಖರ, ಗ್ರಾಮ ಪಂಚಾಯತಿ ಸದಸ್ಯೆರಾದ ಲಕ್ಷ್ಮಿ ಮಹದೇವಣ್ಣ, ಗೀತಾ ಕುಮಾರ್ (ಬಡಯ್ಯ), ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಡಿ.ಟಿ ಕಾಮರಾಜ, ಕಾಕಸೂರಯ್ಯ, ಕುರುಬರು ಸಣ್ಣಣ್ಣ ತಿಪ್ಪೇಸ್ವಾಮಿ, ಕುಂಟಕಪ್ಪಿಲೆ ತಿಪ್ಪೇಸ್ವಾಮಿ, ಬೋರಜ್ಜಯ್ಯ, ಕರಡಿ ಚಿನ್ನಮಲ್ಲಯ್ಯ, ಮರಡಿ ಬೋರಯ್ಯ, ಕಾಮಯ್ಯ, ಕಾರೋಬಯ್ಯ, ಹುಚ್ಚಯ್ಯ, ಸಣ್ಣ ಬೋರಯ್ಯ, ಬೊಮ್ಮಲಿಂಗಯ್ಯ, ಸರ್ವೆ ಮಲ್ಲಯ್ಯ, ಎಲ್ಐಸಿ ಓಬಣ್ಣ, ಕೆ ಬಿ ಕುಮಾರ್, ತಿಪ್ಪೇಸ್ವಾಮಿ, ಮಾಳಜ್ಜ, ಬೋಸಯ್ಯ, ಪೋಲಿಸ್ ಸಿಬ್ಬಂದಿಯಾದ ಎಎಸ್ಐ ಧನುಂಜಯ್ಯ, ಪಿಸಿ ಶಿವಣ್ಣ, ಹೋಮ್ ಗಾರ್ಡ ಗುಡ್ಡದ ಮಲ್ಲಯ್ಯ, ಮಲ್ಲಿಕಾರ್ಜುನ ಜಿ, ಛಲವಾದಿ ರುದ್ರಯ್ಯ ಸಿಬ್ಬಂದಿ, ಓಬಯ್ಯನಹಟ್ಟಿ  ಗ್ರಾಮದ ಗುರು ಹಿರಿಯರು, ಮುಸ್ಲಿಂ ಸಮುದಾಯದವರು, ಬೊಮ್ಮಲಿಂಗೇಶ್ವರ ವಂಶಸ್ಥರು, ಊರಿನ ಸಮಸ್ತ ಯುವಕರು, ಮಹಿಳೆಯರು ಗ್ರಾಮಸ್ಥರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading