ನಾಯಕನಹಟ್ಟಿ-: ಗ್ರಾಮೀಣ ಮಟ್ಟದಿಂದ ರಾಜ್ಯ ರಾಷ್ಟ್ರಮಟ್ಟದವರೆಗೆ ಹೆಸರು ಪಡೆದಿರುವ ಪಕ್ಷ ಬಿಜೆಪಿ ಎಂದು ನಾಯಕನಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್ ತಿಳಿಸಿದರು


.
ಸೋಮವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ 47ನೇ ಬಿಜೆಪಿ ಸಂಸ್ಥಾಪನ ದಿನದ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದೇಶಾಭಿಮಾನದ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಪಕ್ಷಾ ದೇಶದ ಕಾಣಿಸುವ ಮಟ್ಟಕ್ಕೆ ತರುವಲ್ಲಿ ಹಿರಿಯ ನಾಯಕರು ಕೋಟ್ಯಾಂತರ ಕಾರ್ಯಕರ್ತರ ಹೋರಾಟ ತ್ಯಾಗ ಪರಿಶ್ರಮ ಸಾಕಷ್ಟಿದೆ ಅವರೆಲ್ಲರ ನಿರಂತರ ಹೋರಾಟದ ಫಲವಾಗಿ ಇಂದು ಪಕ್ಷ ವಿಶ್ವದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವಾಗಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಅವರು ಬಡವರ ದೀನದಲಿತರ ರೈತ ಪ್ರವಾದ ಯೋಜನೆಗಳನ್ನು ಜಾರಿಗೊಳಿಸಿ ಸದೃಢ ದೇಶವನ್ನು ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂದರು.
ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಓ. ಕರಿಬಸಪ್ಪ ಮಾತನಾಡಿದರು. ಬೂತ್ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಹೆಚ್ಚಿನದಾಗಿ ಸಂಘಟನೆ ಮಾಡಬೇಕೆಂದು ಸಭೆಯಲ್ಲಿ ಕಾರ್ಯಕರ್ತರಿಗೆ ಸಲಹೆ ನೀಡಿದರು.
ನಿಕಟ ಪೂರ್ವ ಅಧ್ಯಕ್ಷ ಎಂವೈಟಿ ಸ್ವಾಮಿ, ಮಂಡಲ ಉಪಾಧ್ಯಕ್ಷ ಎನ್ ತಿಪ್ಪೇಸ್ವಾಮಿ, ಕಾರ್ಯದರ್ಶಿಗಳಾದ ಬೆಂಕಿ ಗೋವಿಂದಪ್ಪ,ಬಿ. ಮೂರ್ತಿ, ಎಚ್.ವಿ. ಪ್ರಕಾಶ್, ಬಸಣ್ಣ, ಎಸ್ ಟಿ ಮೋರ್ಚಾ ಅಧ್ಯಕ್ಷ ನಾಗರಾಜ್, ಎಸ್ ಸಿ ಮೋರ್ಚಾ ಅಧ್ಯಕ್ಷ ಬಿ. ಶಂಕರಸ್ವಾಮಿ ಮಲೇಬೋರನಹಟ್ಟಿ, ಓಬಿಸಿ ಮೋರ್ಚಾ ಅಧ್ಯಕ್ಷ ರಾಜು, ನಗರ ಘಟಕ ಅಧ್ಯಕ್ಷ ನಾಗರಾಜ್ ಜಾಗನೂರಹಟ್ಟಿ, ಮುಖಂಡರಾದ ವೆಂಕಟಪ್ಪ, ಹಿರೇಹಳ್ಳಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಡಿ ಎಚ್ ಪರಮೇಶ್ವರಪ್ಪ, ತಾರಕೇಶ್, ಶಿವದತ್ತ, ತಿಪ್ಪೇಸ್ವಾಮಿ, ರಾಜೇಂದ್ರ, ಸಣ್ಣೋಬಯ್ಯ, ಬೋರಯ್ಯ ಮಲ್ಲೂರಹಳ್ಳಿ ಮಲ್ಲಯ್ಯ, ವಿಜಯಕುಮಾರ್, ಮಂಜುನಾಥ್, ಮಹಿಳಾ ಮೋರ್ಚಾ ಅಧ್ಯಕ್ಷ ಪವಿತ್ರ ತಿಪ್ಪೇಸ್ವಾಮಿ, ಸೇರಿದಂತೆ ಪಕ್ಷದ ಮಂಡಲ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.