ನಾಯಕನಹಟ್ಟಿ- ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ನಾಡಿಗೆ ಉತ್ತಮ ಮಳೆ ಬೆಳೆ ಸಮೃದ್ಧಿ ನೀಡಲಿ ಎಂದು ಬಿಜೆಪಿ ಮುಖಂಡ ಪಾಪೇಶ್ ನಾಯಕ ತಿಳಿಸಿದರು.


ಶುಕ್ರವಾರ ಶ್ರೀ ಗುರು ತಿಪ್ಪೇರುದ್ರಸ್ವಾಮಿ ವಾರ್ಷಿಕ ಜಾತ್ರೆ ಪ್ರಯುಕ್ತ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠ ಮತ್ತು ಹೊರಮಠದ ದೇವಾಲಯಕ್ಕೆ ಕುಟುಂಬಸ್ಥರ ಜೊತೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದು ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಮಾಡಿದಷ್ಟು ನೀಡು ಭಿಕ್ಷೆ ಎಂಬ ವಾಣಿಯನ್ನು ನಾಡಿಗೆ ಸಾರಿ ಕಾಯಕದ ಹಿರಿಮೆಯನ್ನು ಜನರಿಗೆ ತಿಳಿಸಿದ ಸಂತ ಅವಧೂತ ಶರಣ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಅವರ ತತ್ವ ಆದರ್ಶವನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಮಂಡಲ ಕಾರ್ಯದರ್ಶಿ ಎಚ್ ವಿ ಪ್ರಕಾಶ್, ಬಿಜೆಪಿ ಮುಖಂಡರಾದ ಸೋಮು ಚಿತ್ರದುರ್ಗ ಪಿ.ಬಿ. ತಿಪ್ಪೇಸ್ವಾಮಿ, ಗೌಡಗೆರೆ ಗ್ರಾಮ ಪಂಚಾಯತಿ ಸದಸ್ಯ ಗಿಣಿಯರ್ ತಿಪ್ಪೇಶ್, ಯುವ ಮುಖಂಡ ಮಲ್ಲೂರಹಳ್ಳಿ ಮದಕರಿ ಪಾಪನಾಯಕ, ಸುರೇಶ್, ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.