December 15, 2025
1741259998741.jpg


ಚಿತ್ರದುರ್ಗಮಾ.06:
ಉಜ್ಜೀವನ್ ಸಣ್ಣ ಹಣಕಾಸು ಬ್ಯಾಂಕ್ ವತಿಯಿಂದ ಚಿತ್ರದುರ್ಗ ನಗರ ಜಿಲ್ಲಾಸ್ಪತ್ರೆಯ ಆವರಣದಲ್ಲಿ ರೋಗಿಗಳ ನಿರೀಕ್ಷಣಾ ತಂಗುದಾಣ ನಿರ್ಮಿಸಿ, ಜಿಲ್ಲಾಸ್ಪತ್ರೆಗೆ ಕೊಡುಗೆಯಾಗಿ ನೀಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಬುಧವಾರ ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ರೋಗಿಗಳ ನಿರೀಕ್ಷಣಾ ತಂಗುದಾಣವನ್ನು ಉದ್ಘಾಟಿಸಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಕುಮಾರ್ ಬಾಬು ಮಾತನಾಡಿ, ಜಿಲ್ಲಾಸ್ಪತ್ರೆಗೆ ಸುಸಜ್ಜಿತವಾದ ರೋಗಿಗಳ ಮತ್ತು ಸಾರ್ವಜನಿಕರಿಗೆ ಉಪಯುಕ್ತವಾದ ತಂಗುದಾಣ ಉಜ್ಜೀವನ್ ಬ್ಯಾಂಕ್ ವತಿಯಿಂದ ನಿರ್ಮಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉಜ್ಜೀವನ್ ಬ್ಯಾಂಕ್ ವಿತರಣಾ ವ್ಯವಸ್ಥಾಪಕ ಬಾಲಕೃಷ್ಣ ಮಾತನಾಡಿ, ಉಜ್ಜೀವನ್ ಬ್ಯಾಂಕ್‍ನ ಚೋಟೆ ಕದಮ್ ಯೋಜನೆಯಡಿ ಪರಿಸರ, ಆರೋಗ್ಯ, ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ, ಬಸ್ ತಂಗುದಾಣ ನಿರ್ಮಾಣದ ಜತೆಗೆ ಶಾಲೆಯ ಶೌಚಾಲಯ, ಆರೋಗ್ಯ ಕೇಂದ್ರಗಳ ನವೀಕರಣಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಉಜ್ಜೀವನ್ ಬ್ಯಾಂಕ್ ಸಾರ್ವಜನಿಕ ಅಭಿವೃದ್ಧಿಗೆ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಉಜ್ಜೀವನ್ ಬ್ಯಾಂಕ್‍ನ ಏರಿಯಾ ಮ್ಯಾನೇಜರ್ ಮಂಜುನಾಥ್, ಪ್ರಾದೇಶಿಕ ಮುಖ್ಯಸ್ಥ ಬಾಲಾಜಿ, ಕ್ಲಸ್ಟರ್ ಮುಖ್ಯಸ್ಥ ಕರುಣಾ ವಿನಾಯಕ, ಶಾಖಾ ವ್ಯವಸ್ಥಾಪಕ ಸೋಮಶೇಖರಪ್ಪ ಹಾಗೂ ಬ್ಯಾಂಕ್ ಸಿಬ್ಬಂದಿ ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading