” ಚಳ್ಳಕೆರೆ ಫೆ. 6ಮೌನಿ ಅಮಾವಾಸ್ಯೆ ಎನ್ನುವುದು ನೂರು ವರ್ಷಗಳಿಗೊಮ್ಮೆ ಬರುವ ವಿಶೇಷ ಅಮಾವಾಸ್ಯೆಯಾಗಿದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತೆ ಶ್ರೀಮತಿ ಯಶೋಧಾ ಪ್ರಕಾಶ್ ಅಭಿಪ್ರಾಯಪಟ್ಟರು. ಶಿವನಗರದ ತಮ್ಮ ಜಿ.ವಿ.ಎಸ್ ನಿವಾಸದಲ್ಲಿ ಮೌನಿ ಅಮಾವಾಸ್ಯೆಯ ಪ್ರಯುಕ್ತ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಾಘ ಕೃಷ್ಣ ಅಮಾವಾಸ್ಯೆಯನ್ನು “ಮೌನಿ ಅಮಾವಾಸ್ಯೆ” ಎಂದು ಕರೆಯಲಾಗುತ್ತದೆ.144 ವರ್ಷಗಳಿಗೊಮ್ಮೆ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಅಮೃತ ಸ್ನಾನ ಮಾಡುವ ದಿನಗಳಲ್ಲಿ ಈ ದಿನ ಅತ್ಯಂತ ಶ್ರೇಷ್ಠ ಎಂದು ನಂಬಲಾಗಿದೆ.ಮೌನಿ ಅಮಾವಾಸ್ಯೆಯಂದು ನದಿಯ ನೀರು ಅಮೃತಕ್ಕೆ ಸಮನಾಗಿರುತ್ತದೆ. ಹೀಗಾಗಿ ಇದೇ ದಿನ “ಅಮೃತ ಸ್ನಾನ” ಮಾಡಬೇಕು ಎಂಬುದು ಭಕ್ತರ ನಂಬಿಕೆಯಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ “ಮಹಾ ಕುಂಭಮೇಳ”ದ ಬಗ್ಗೆ ವಿಶೇಷ ಮಾಹಿತಿಯನ್ನು ಭಕ್ತರೊಂದಿಗೆ ಹಂಚಿಕೊಂಡರು.ಈ ಪ್ರವಚನ ಕಾರ್ಯಕ್ರಮಕ್ಕೆ ಮೊದಲು ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಠಣ, ವಿಶೇಷ ಭಜನೆ ಮತ್ತು “ಶ್ರೀಶಾರದಾದೇವಿ ಜೀವನಗಂಗಾ”ಗ್ರಂಥ ಪಾರಾಯಣ ಕಾರ್ಯಕ್ರಮವು ನಡೆಯಿತು.ಈ ಸತ್ಸಂಗ ಸಭೆಯಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಲೀಲಾವತಿ,ಸೌಮ್ಯ, ವಿಜಯಲಕ್ಷ್ಮೀ, ಸುಮನ ಕೋಟೇಶ್ವರ,ರಶ್ಮಿ ವಸಂತ, ಯತೀಶ್ ಎಂ ಸಿದ್ದಾಪುರ,ಕೃಷ್ಣವೇಣಿ, ಶೈಲಜ, ಜಯಮ್ಮ, ಸಂಗೀತ, ಗೀತಾಲಕ್ಷ್ಮೀ, ನಾಗರತ್ನಮ್ಮ,ವೀರಮ್ಮ, ಶಾರದಾಮ್ಮ, ಮಾಣಿಕ್ಯ ಸತ್ಯನಾರಾಯಣ, ಸೇರಿದಂತೆ ಶ್ರೀಶಾರದಾಶ್ರಮದ ಸದ್ಭಕ್ತರು ಭಾಗವಹಿಸಿದ್ದರು.


About The Author
Discover more from JANADHWANI NEWS
Subscribe to get the latest posts sent to your email.