ಹಿರಿಯೂರು
ನಗರದ ವಾಣಿವಿಲಾಸ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಆಲೂರು ಹನುಮಂತರಾಯಪ್ಪ, ಉಪಾಧ್ಯಕ್ಷರಾಗಿ ಪಿ.ಆರ್.ಸತೀಶಬಾಬು 6 ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

2026 ರಿಂದ 2030 ನೇ ಸಾಲಿಗೆ ಸೊಸೈಟಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗಾಗಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಆಲೂರು ಹನುಮಂತರಾಯಪ್ಪ, ಉಪಾಧ್ಯಕ್ಷರ ಸ್ಥಾನಕ್ಕೆ ಪಿ.ಆರ್.ಸತೀಶಬಾಬು ಈ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂಬುದಾಗಿ ಚುನಾವಣಾ ಅಧಿಕಾರಿಗಳಾದ ಶ್ರೀಯುತ ಕೆ.ಶಿವಮೂರ್ತಿ ಘೋಷಿಸಿದರು.
ಈ ಸಂದರ್ಭದಲ್ಲಿ ವಾಣಿವಿಲಾಸ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರುಗಳಾದ ಟಿ.ಮಲ್ಲೇಶಪ್ಪ, ರಂಗನಾಥ್, ವಸಂತ್ ಕುಮಾರ್, ಹೆಚ್.ನಟರಾಜ್, ಸಿ.ಜಗನ್ನಾಥ್, ಜೆ.ರಂಜಿತ, ಡಿ.ಗಂಗಮ್ಮ, ಹೆಚ್.ಡೀಶಪ್ಪ, ಮೂರುಕಣ್ಣಪ್ಪ, ಹಾಗೂ ವ್ಯವಸ್ಥಾಪಕರಾದ ಹೆಚ್.ಹೇಮಲತಾ, ಲೇಖಪಾಲಕರಾದ ಶಿವರಾಜ್, ಕ್ಯಾಶಿಯರ್ ಪ್ರಭಾಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕೆ.ಶಿವಮೂರ್ತಿರವರು ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.
About The Author
Discover more from JANADHWANI NEWS
Subscribe to get the latest posts sent to your email.