ಚಳ್ಳಕೆರೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 9 ರಂದು ನಡೆದ ಸರಕಳ್ಳತನ ಪ್ರಕರಣವನ್ನು ಚಳ್ಳಕೆರೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಹಳೆ ಟೌನ್ ಪ್ರದೇಶದ ಅಂಗಡಿಯಲ್ಲಿ ಖರೀದಿ ಸೋಗಿನಲ್ಲಿ ಪ್ರವೇಶಿಸಿದ
ಗಾಂಧಿನಗದ ಶ್ಯಾಮ್. ದುರ್ಗವರ ಗ್ರಾಮದ ಮಂಜುನಾಥದ ಆರೋಪಿಗಳು ಮಹಿಳೆಯ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದರು.


ಪ್ರಕರಣದಾಖಲಿಸಿಕೊಂಡು
ತನಿಖೆ ನಡೆಸಿದ ಪೊಲೀಸರು ಶ್ಯಾಮ್ ಹಾಗೂ ಮಂಜುನಾಥ್ ಎಂಬ ಇಬ್ಬರನ್ನು ಬಂಧಿಸಿ, 7.15 ಲಕ್ಷ ಮೌಲ್ಯದ ಮಾಲು ಹಾಗೂ ಒಂದು ಮೋಟಾರ್ ಸೈಕಲ್ ಜಪ್ತಿ ಮಾಡಿದ್ದಾರೆ. ಡಿವೈಎಸ್ಪಿ ಸತ್ಯನಾರಾಯಣರಾವ್ ಮಾರ್ಗದರ್ಶನದಲ್ಲಿ, ಠಾಣಾಧಿಕಾರಿ ಕೆ.ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಪೊಲೀಸರ ಕಾರ್ಯಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.