March 16, 2026
FB_IMG_1736173275684.jpg


ಹಿರಿಯೂರು:
ಮಧ್ಯ ಕರ್ನಾಟಕದ ಜಲಪಾತ್ರೆ ವಾಣಿವಿಸಾಗರ ಜಲಾಶಯ ಕೋಡಿಬೀಳಲು ಇನ್ನು ಹತ್ತು ದಿನಗಳು ಬೇಕಾಗಬಹುದು. ಆದರೆ ಕೆಲವರು 2022ನೇ ಇಸವಿಯ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜಲಾಶಯ ಕೋಡಿ ಬಿದ್ದಿದೆ ಎಂದು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂಬುದಾಗಿ ನೀರಾವರಿಹೋರಾಟಸಮಿತಿ ಅಧ್ಯಕ್ಷರಾದ ಕಸವನಹಳ್ಳಿರಮೇಶ್ ಹೇಳಿದರು.
ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯ ಕೋಡಿ ಬೀಳುವ ಸ್ಥಳಕ್ಕೆ ಭೇಟಿನೀಡಿ, ಸ್ಥಳ ವೀಕ್ಷಣೆ ಮಾಡಿ, ನಂತರ ಅವರು ಮಾತನಾಡಿದರು.
ಇದರಿಂದ ಭದ್ರಾ ಜಲಾಶಯದ ಸಮಿತಿಯವರು ಭದ್ರಾದಿಂದ ವಾಣಿವಿಲಾಸ ಸಾಗರಕ್ಕೆ ನೀರು ಹರಿಯುತ್ತಿರುವುದನ್ನು ನಿಲ್ಲಿಸಲು ತಾಕೀತು ಮಾಡಬಹುದು ಅಲ್ಲದೆ ಅಧಿಕಾರಿಗಳು ಸಹ ನೀರು ಪಂಪ್ ಮಾಡುವ ವಿದ್ಯುತ್ ವೆಚ್ಚ ಉಳಿತಾಯವಾಗುತ್ತದೆ ಎಂದು ಆಲೋಚಿಸಬಹುದು.
ಅಲ್ಲದೆ, ಪ್ರವಾಸಿಗರು ಕುತೂಹಲದಿಂದ ಜಲಾಶಯ ವೀಕ್ಷಣೆಗೆ ಬಂದು ನಿರಾಶರಾಗಬಹುದು, ಆದ್ದರಿಂದ ಯಾರು ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು ಹಾಗೂ ಇಂತಹ ವದಂತಿಗಳನ್ನು ನಂಬಬಾರದು. ಪತ್ರಿಕೆಗಳಲ್ಲಿ ಹಾಗೂ ನಂಬಬಹುದಾದ ಮೂಲಗಳಲ್ಲಿ ಪ್ರಕಟವಾದಾಗ ಮಾತ್ರ ಸತ್ಯವೆಂದು ನಂಬಬೇಕು ಎಂಬುದಾಗಿ ಹೇಳಿದರು.
ಜಲಾಶಯದ ಕೋಡಿಬಳಿ ಹಾಗೂ ಜಲಾಶಯದ ಸುತ್ತಮುತ್ತ ಪ್ಲಾಸ್ಟಿಕ್ ಆಹಾರ ಪದಾರ್ಥಗಳು ನೀರಿನ ಬಾಟಲಿಗಳು ಪೂಜಾ ಸಾಮಗ್ರಿಗಳನ್ನು ನೀರಿನಲ್ಲಿ ಹಾಕುತ್ತಿದ್ದಾರೆ ಇದರಿಂದ ಪರಿಸರ ನಾಶವಾಗುತ್ತದೆ ಜಲಚರ ಪ್ರಾಣಿಗಳು ಸಹ ಸಾಯುತ್ತವೆ ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಬಂದೋಬಸ್ತ್ ಮಾಡಬೇಕು ಹಾಗೂ ಪೋಲಿಸ್ ಇಲಾಖೆಯವರು ರಕ್ಷಣೆ ಒದಗಿಸಬೇಕು ಎಂಬುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರು ಮತ್ತು ನೀರಾವರಿ ಸಮಿತಿ ನಿರ್ದೇಶಕರಾದ ಮಂಜುನಾಥ್ ಮಾಳಿಗೆ ಹಾಗೂ ನೀರಾವರಿ ಹೋರಾಟ ಸಮಿತಿ ನಿರ್ದೇಶಕರಾದ ಆರ್.ಕೆ.ಗೌಡ್ರು. ಕುಂಚಿಟಿಗ ಕುಲಶಾಸ್ತ್ರ ಅಧ್ಯ್ಯನಕಾರ ಹಾಗೂ ಸಾಮಾಜಿಕ ಕಾರ್ಯಕರ್ತ ಎಸ್.ವಿ.ರಂಗನಾಥ್, ರಾಮಚಂದ್ರ ಕಸವನಹಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading