ವರದಿ: ಕೆ.ಟಿ.ಮೋಹನ್ ಕುಮಾರ್
ಕರ್ನಾಟಕ ಸಮತಾ ಸೈನಿಕ ದಳವು ಮೈಸೂರಿನಲ್ಲಿ ಜನವರಿ 10ರಂದು ಆಯೋಜಿಸಿರುವ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ಕರ್ನಾಟಕ ಸಮತಾ ಸೈನಿಕ ದಳದ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕು ಘಟಕದ ಅಧ್ಯಕ್ಷ ಎಸ್.ಎಸ್.ಈರಯ್ಯ ಮನವಿ ಮಾಡಿದ್ದಾರೆ.
ಅವರು ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿ ಶಿಕ್ಷಣವೆಂಬ ಜ್ಞಾನ ಭಂಡಾರವನ್ನು ನೀಡಿದ ವಿಶ್ವದ ಮಹಾಜ್ಞಾನಿ ಎಂದೇ ಖ್ಯಾತಿಯಾಗಿರುವ ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟ ಮತ್ತು ತ್ಯಾಗದ ಫಲವಾಗಿ 1924ರಲ್ಲಿ ಸಮತಾ ಸೈನಿಕ ದಳ ಎಂಬ ಸಂಘಟನೆಯ ಸಂಘವನ್ನು ಸ್ಥಾಪಿಸಿದರು. ಆ ಮೂಲಕ ದಲಿತ, ಹಿಂದುಳಿದ, ಮಹಿಳೆಯರ, ಅಲ್ಪಸಂಖ್ಯಾತರಿಗೆ ಸ್ವಾಭಿಮಾನವನ್ನು ತುಂಬಿದರು. ಇದೀಗ ಈ ಮಹಾನ್ ಸಂಘಕ್ಕೆ ನೂರು ವರ್ಷ ತುಂಬುತ್ತಿದೆ.
ಶೋಷಿತ ಸಮುದಾಯದವರ ಮನದಲ್ಲಿ ತುಂಬಿ ತುಳುಕುತ್ತಿರುವ ಅನೇಕ ಮೂಡನಂಬಿಕೆಗಳು, ಅನಿಷ್ಟ ಪದ್ದತಿಗಳು, ಮೌಢ ಆಚರಣೆಗಳು, ಬಹಿಷ್ಕಾರ, ಅತ್ಯಾಚಾರ, ಅನಾಚಾರ, ಜಾತಿ ದೌರ್ಜನ್ಯಗಳಂತ ಹಲವಾರು ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿ ಅವುಗಳಿಂದ ಮುಕ್ತರನ್ನಾಗಿ ಮಾಡಲು ಸಂಘವು ಪ್ರತಿನಿತ್ಯ ತನ್ನದೇ ಆದ ಚಟುವಟಿಕೆಗಳಿಂದ ಕೂಡಿದೆ.
ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು. ಅದರಂತೆ ಸಮತಾ ಸೈನಿಕ ದಳವು ದೇಶದ ಚರಿತ್ರೆಯನ್ನು ಮತ್ತೆ ಮತ್ತೆ ನೆನೆಯುವುದಕ್ಕೋಸ್ಕರ ಹಲವಾರು ರೀತಿಯ ಯೋಜನೆಗಳನ್ನು ಹಾಕಿಕೊಂಡು ಬರುತ್ತಿದೆ. ಹಾಗಾಗಿ ತಾವೆಲ್ಲರೂ ಈ ಶತಮಾನೋತ್ಸವ ಕಾರ್ಯಕ್ರಮಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.