December 13, 2025
IMG-20251205-WA0411.jpg

ನಾಯಕನಹಟ್ಟಿ: ಗ್ರಾಮೀಣ ಪ್ರದೇಶದ ಜಾನಪದ ಶೈಲಿಯ ತಮಟೆ ಉರುಮೆ ನಂದಿಕೋಲು ವೀರಗಾಸೆ ಕಲಾತಂಡಗಳೊಂದಿಗೆ ಶ್ರೀ ಮಹಲಿಂಗೇಶ್ವರ ರಥೋತ್ಸವ ಶುಕ್ರವಾರ ಅದ್ದೂರಿಯಾಗಿ ಜರುಗಿತು.

ಸಮೀಪದ ಎನ್. ಮಹದೇವಪುರ ಗ್ರಾಮದ ಮಹಾಲಿಂಗೇಶ್ವರ ಸ್ವಾಮಿ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಮಧ್ಯಾಹ್ನ 2 ಗಂಟೆಯಿಂದ ಬಣ್ಣ ಬಣ್ಣದ ಬಾವುಟಗಳಿಂದ ಹೂವಿನ ಹಾರಗಳಿಂದ ರಥವನ್ನು ಶೃಂಗಾರ ಮಾಡಲಾಯಿತು.

ಮಧ್ಯಾಹ್ನ 3 ಗಂಟೆಗೆ ಶ್ರೀ ಮಹಾಲಿಂಗೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಸಕಲ ಪೂಜಾ ವಿಧಿ ವಿಧಾನಗಳಿಂದ ಪ್ರತಿಷ್ಠಾಪಿಸಲಾಯಿತು.
ನಂತರ ಮಹಾಮಂಗಳಾರತಿ
ನೆರವೇರಿಸಿ ಗ್ರಾಮಸ್ಥರು ರಥಕ್ಕೆ
ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಗುರು- ಹಿರಿಯರು. ಬಗರ್ ಹುಕುಂ ಕಮಿಟಿ ಸದಸ್ಯರು ಹಾಗೂ ಎನ್. ಮಹದೇವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಸಮಸ್ತ ಎನ್ ಮಹದೇವಪುರ ಊರಿನ ಗ್ರಾಮಸ್ಥರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading