December 14, 2025
IMG-20241205-WA0181.jpg

ಚಳ್ಳಕೆರೆ-05 ದಲಿತರಿಗೆ ಸೇರಿದ ಅಸ್ತಿಯನ್ನು ಯಾವುದೇ ಕಾರಣಕ್ಕೂ ಬೇರೆಯವರ ಪಾಲಾಗಲು ಬಿಡುವುದಿಲ್ಲ ಕೂಡಲೆ ನಗರಸಭೆ ಮಾದಿಗ ಸಮುದಾಯದ ಹೆಸರಿಗೆ ಖಾತೆ ಮಾಡುವಂತೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿನಾರಾಯಣಸ್ವಾಮಿ ಹೇಳಿದರು.
ನಗರದ ಬೆಂಗಳೂರು ರಸ್ತೆಯ ಕಬರಸ್ತಾನ ಹಾಗೂ ಗಾಂಧಿನಗರದ ಚರ್ಮದ ಮಂಡಿ ವಿವಾಧಿತ ಸ್ಥಳಗಳಿಗೆ ಭೇಟಿ ನೀಡಿ ಮಾತನಾಡಿ, ಚರ್ಮಮಂಡಿ ಮತ್ತು ಕಬರಸ್ಥಾನ ಎರಡೂ ಆಸ್ತಿಗಳು ಚರ್ಮದ ಮಂಡಿ ಹೆಸರಿನಲ್ಲಿವೆ, ನ್ಯಾಯಾಲಯಕ್ಕೆ ಹೋದರೂ ಯಾವುದೇ ಆದೇಶವಿಲ್ಲ. ಆದರೂ ನಗರಸಭೆ ಆಡಳಿತ ಈ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಿಲ್ಲ. ಕೂಡಲೇ ನಗರಸಭೆ ಆಡಳಿತ ಈ ಎರಡೂ ಆಸ್ತಿಗಳನ್ನು ಮಾದಿಗ ಸಮುದಾಯಕ್ಕೆ ಹಸ್ತಾಂತರ ಮಾಡಬೇಕು. ಒತ್ತುವರಿಯಾಗಿದ್ದಲ್ಲಿ ಪೊಲೀಸ್ ಸಹಕಾರದಿಂದ ಖುಲ್ಲಾಪಡಿಸಿಕೊಡಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಮಾದಿಗ ಮಹಾಸಭಾ ಅಧ್ಯಕ್ಷ ಮಾಜಿ ಪುರಸಭಾ ಸದಸ್ಯ ಎಂ.ಶಿವಮೂರ್ತಿ ಮಾತನಾಡಿ,  ಬೆಂಗಳೂರು ರಸ್ತೆಯಕಬರಸ್ತಾನ ಹಾಗೂ ಗಾಂಧಿನಗರದ ಚರ್ಮದ ಮಂಡಿ 1962ರಲ್ಲಿ ಮಾದಿಗ ಸಮುದಾಯಕ್ಕೆ ಚರ್ಮ ಹದಮಾಡುವ ಮತ್ತು ಮಾರಾಟ ಮಾಡುವ ಉದ್ದೇಶದಿಂದ ನೀಡಲಾಗಿದೆ. ನಾವು ಜಾಗಕ್ಕೆ ಕಂದಾಯ ಕಟ್ಟುತ್ತಾ ಬಂದಿದ್ದರೂ ಸಹ ಜಾಗವನ್ನು ವಕ್ಫ್ ಬೋರ್ಡ್ ಹೆಸರಿಗೆ ಮಾಡಿಸಿಕೊಡುವಂತೆ ಅರ್ಜಿ ನೀಡಲಾಗಿದೆ. ನಾವು ಯಾವುದೇ ಅರ್ಜಿ ನೀಡಿಲ್ಲ, ಅದು ನಕಲು ಎಂದು ಮುಸ್ಲಿಂ ಸಮುದಾಯವೇ ಮತ್ತೆ ಸ್ವರದ ನೀಡಿದೆ ಎಂದಾಗ. ಛಲವಾದಿ ನಾರಾಯಣಸ್ವಾಮಿ, ತಹಶೀಲ್ಧಾರ್ ರೇಹಾನ್‍ಪಾಷ, ಪೌರಾಯುಕ್ತ ಜಗರೆಡ್ಡಿ, ವ್ಯವಸ್ಥಾಪಕ ಲಿಂಗರಾಜ್ ಸೂಚಿಸಿ,  ನಗರಸಭೆ ಸದರಿ ಎರಡೂ ಜಾಗಗಳು ಮಾದಿಗ ಸಮುದಾಯದ ಹೆಸರಿನಲ್ಲಿದ್ದು, ಈ ಬಗ್ಗೆ ಕಳೆದ ವರ್ಷ ವಕ್ಫ್ ಬೋರ್ಡ್‍ಗೆ ಸೇರಿದಂತೆ ಅರ್ಜಿ ನೀಡಿ, ನ್ಯಾಯಾಲಯಕ್ಕೂ ಸಹ ಮೊರೆ ಹೋಗಿದ್ದಾರೆ. ಸಮುದಾಯದ ಜಾಗವನ್ನು ಸಮುದಾಯಕ್ಕೆ ಮೀಸಲಾಗಿರಲಿ. ಮೂಲಖಾತೆದಾರರಾದ ಮಾದಿಗ ಸಮುದಾಯಕ್ಕೆ ರಕ್ಷಣೆ ನೀಡಿ ಕೂಡಲೇ ಆಸ್ತಿಯನ್ನು ನಮಗೆ ನೀಡಬೇಕು. ವಿಳಂಬ ನೀತಿ ಅನುಸುವುದು‌ ಬೇಡ ಎಂದರು.
ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಕೆ.ಎಸ್.ನವೀನ್, ಬಿಜೆಪಿ ಹಿರಿಯ ಮುಖಂಡ ಮುನಿಸ್ವಾಮಿ, ಜಿಲ್ಲಾಧ್ಯಕ್ಷ ಎ.ಮುರುಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿರಾಮದಾಸ್, ಮಾಜಿಶಾಸಕ ನೇರ್ಲಕುಂಟೆಎಸ್.ತಿಪ್ಪೇಸ್ವಾಮಿ, ಕೆ.ಟಿ.ಕುಮಾರಸ್ವಾಮಿ, ಬಿಜೆಪಿ ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಬಸವರಾಜು, ರೈತ ಮೋರ್ಚಾ ಅಧ್ಯಕ್ಷ ಕೆ.ಎಸ್.ನವೀನ್, ಡಿ.ಎಂ.ತಿಪ್ಪೇಸ್ವಾಮಿ, ಡಿ.ಸೋಮಶೇಖರಮಂಡಿಮಠ, ಪಿ.ರಾಮಕೃಷ್ಣರೆಡ್ಡಿ, ಜಯಪಾಲಯ್ಯ, ಮಾತೃಶ್ರೀಎನ್.ಮಂಜುನಾಥ, ಹೊಟ್ಟೆಪ್ಪನಹಳ್ಳಿಕಾಂತರಾಜ್ ಇತರರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading