December 14, 2025
IMG-20241205-WA0169.jpg

.

ನಾಯಕನಹಟ್ಟಿ:; ಮಧ್ಯ ಕರ್ನಾಟಕದ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಗುರುವಾರ ಲಕ್ಷ ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಸಂಜೆ 6.30ಕ್ಕೆ ಆಕಾಶ ದೀಪವನ್ನು ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು.

ದೀಪೋತ್ಸವದಲ್ಲಿ ಸುಮಾರು 100 ದೀಪಗಳನ್ನು ಭಕ್ತರು ಬೆಳಗಿಸಿದರು ತಲಾ 108 ಹಣತೆಗಳಲ್ಲಿರುವ 224 ದೀಪಸ್ಥಂಭಗಳನ್ನು ಈ ಬಾರಿ ವ್ಯವಸ್ಥೆ ಮಾಡಲಾಗಿತ್ತು.

ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಒಳ ಮಠ ಒರಮಠ ಈಶ್ವರ ದೇವಾಲಯ ಏಕಾಂತ ಮಠ ಗೋಪುರಗಳಿಗೆ ದೀಪ ಅಲಂಕಾರ ಮಾಡಲಾಗಿತ್ತು.

ರಾತ್ರಿ 8ಕ್ಕೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠದ ದೇವಾಲಯ ಆವರಣದಲ್ಲಿ ಬೆಳ್ಳಿ ರಥೋತ್ಸವ ನೆರವೇರಿಸಲಾಯಿತು.

ದೇವಾಲಯದ ಮುಂಭಾಗದಲ್ಲಿ ಚಳ್ಳಕೆರಿಯ ನಿತ್ಯ ನಿಕೇತನ ಶಾಲಾ ವಿದ್ಯಾರ್ಥಿಗಳು ಮಕ್ಕಳ ಆಕರ್ಷಿಕ ಭರತನಾಟ್ಯ ಪ್ರದರ್ಶಿಸಿದರು.

ಲಕ್ಷ ದೀಪೋತ್ಸವದ ವಿಶೇಷತೆ

ಹಲವು ದಶಕಗಳಿಂದ ಕಾರ್ತಿಕ ಮಾಸದಲ್ಲಿ ದೀಪೋತ್ಸವ ನಡೆಸಿಕೊಂಡು ಬರಲಾಗುತ್ತದೆ ಎಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯ ಕಾರ್ಯನಿರ್ವಹಣಾಧಿಕಾರಿ ಎಚ್ ಗಂಗಾಧರಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ಪಟ್ಟಣ ಪಂಚಾಯತಿ ಅಧ್ಯಕ್ಷ ಮಂಜುಳ ಶ್ರೀಕಾಂತ್,ಉಪಾಧ್ಯಕ್ಷೆ. ಸರ್ವ ಮಂಗಳ ಉಮಾಪತಿ, ದೇವಸ್ಥಾನ ಕಾರ್ಯ ನಿರ್ವಹಣಾಧಿಕಾರಿ ಹೆಚ್ ಗಂಗಾಧರಪ್ಪ, ದೇವಸ್ಥಾನ ಕಮಿಟಿ ಸದಸ್ಯ ಕಾವಲಪ್ಪರ ತಿಪ್ಪೇರುದ್ರಪ್ಪ, ಪಟ್ಟಣ ಪಂಚಾಯತಿ ಸದಸ್ಯ ಮಾಂತಣ್ಣ, ಜೆ ಆರ್ ರವಿಕುಮಾರ್, ಸಮಾಜ ಸೇವಕರಾದ ವಿ ದೊಡ್ಡ ನಾಗಯ್ಯ, ಉಮಾಪತಿ, ಬಂಡೆಕೊಪ್ಪಲೆ ಓಬಣ್ಣ, ಪ್ರಭುಸ್ವಾಮಿ, ಮಾಜಿ ಸದಸ್ಯ ಆರ್ ಶ್ರೀಕಾಂತ್, ಪಿ ಎಸ ಐ ದೇವರಾಜ್, ಪೊಲೀಸ್ ಸಿಬ್ಬಂದಿಗಳು, ದೇವಸ್ಥಾನ ಸಿಬ್ಬಂದಿಗಳು ಹಾಗೂ ಪಟ್ಟಣದ ನಾಗರಿಕರು, ಭಕ್ತಾದಿಗಳು ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading