ವರದಿ::ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಡಳಿತ ಜಿಲ್ಲಾ ಪಂಚಾಯತಿ,ಎಚ್ಐವಿ ಏಡ್ಸ್ ಪ್ರೇವೇನ್ಸನ್ ಸೊಸೈಟಿ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿ ಆಶ್ರಯದಲ್ಲಿ ಗುರುವಾರ ಪಟ್ಟಣದ ವಾಲ್ಮೀಕಿ ವೃತ್ತ ಮತ್ತು ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠದ ದೇವಾಲಯದ ಮುಂಭಾಗದಲ್ಲಿ ಎಚ್ಐವಿ ಜಾಗೃತಿ ಹಾಗೂ ಏಡ್ಸ್ ನಿಯಂತ್ರಣ ಕುರಿತು ಅಕ್ಷರ ಜ್ಞಾನ ಕಲಾಸಂಘ ಮರಿಯಮ್ಮನಹಳ್ಳಿ ವಿಜಯನಗರ ಜಿಲ್ಲೆ ಇವರಿಂದ ಬೀದಿ ನಾಟಕ ಹಾಗೂ ಕೋಲಾಟದ ಮೂಲಕ ಏಡ್ಸ್ ನಿಯಂತ್ರಣದ ಬಗ್ಗೆ ಕಲಾತಂಡದಿಂದ ಜಾಗೃತಿ ಮೂಡಿಸಲಾಯಿತು.

ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಸಿಬ್ಬಂದಿ ಎಸ್ ಸತೀಶ್ ಮುಂಭಾಗದಲ್ಲಿ ತಮಟೆ ಹೊಡೆಯುವ ಮೂಲಕ ಚಾಲನೆಯನ್ನು ನೀಡಿದರು.
ಇನ್ನು ಕಾರ್ಯಕ್ರಮವನ್ನು ಪಟ್ಟಣದ ನಾಗರಿಕರು ಮತ್ತು ಗ್ರಾಮಸ್ಥರು ಗ್ರಾಮಸ್ಥರು ವೀಕ್ಷಿಸಿದರು.
ಎನ್ ಜಿ ಓ ಜಯಪ್ರಕಾಶ್ ಸಂಸ್ಥೆ ಹಾಗೂ ಅಕ್ಷರ ಜ್ಞಾನ ಕಲಾ ಸಂಘ (ರಿ) ಮರಿಯಮ್ಮನಹಳ್ಳಿ ವಿಜಯನಗರ ಜಿಲ್ಲೆ ಕಲಾವಿದರಾದ ನವೀನ್ ಕುಮಾರ್ ಟಿ,ಸುನಿಲ್ ಕುಮಾರ್ ಎಂ, ಮಲ್ಲೇಶ ಮಾಲ್ವಿ, ಕೊಟ್ರೇಶ್ ಲಕ್ಕಿಮರ, ಎಂ ಧನಂಜಯ, ಚೌಡಪ್ಪ.ಹೆಚ್, ಸರ್ವಮಂಗಳ.ಕೆ, ದಿವ್ಯ.ಪಿ, ಇವರಿಂದ ಜಾನಪದ ಕೋಲಾಟ ಮತ್ತು ಬೀದಿ ನಾಟಕದ ಮೂಲಕವಾಗಿ ಎಚ್ಐವಿ ಏಡ್ಸ್ ಸೋಂಕು ಕುರಿತು ಜಾಗೃತಿಯ ಆಂದೋಲನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಎಚ್ಐವಿ ಏಡ್ಸ್ ಪ್ರೆವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಚಿತ್ರದುರ್ಗ, ತಾಲೂಕು ಸ ಆ ಕೇಂದ್ರ ನಾಯಕನಹಟ್ಟಿ, ಈ ಸಮಯದಲ್ಲಿ ಐಸಿಟಿಸಿ ಕೌನ್ಸಿಲರ್ ಆದ .ಶ್ರೀಮತಿ ಕೆ ಬಿ ಸುಧಾರಂಗಸ್ವಾಮಿ , ಎಲ್ ಟಿ ಅಪೂರ್ವ, ಎನ್‌ಜಿಓ ಪ್ರತಿನಿಧಿ ಬಸಣ್ಣ, ಲತಾ, ಸಿದ್ದಣ್ಣ, ನಾರಾಯಣಪ್ಪ, ಈರಣ್ಣ, ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.