ಹಿರಿಯೂರು ತಾಲ್ಲೋಕು ಕೃಷಿಕ ಸಮಾಜದ ಚುನಾವಣೆಗೆ ಐಮಂಗಲ ಹೋಬಳಿ ಮಲ್ಲಪ್ಪನಳ್ಳಿ ಗ್ರಾಮದ ಎಂ.ಆರ್. ರುದ್ರಯ್ಯನವರ ಮಗ ಎಮ್. ಆರ್ .ಜೋಗೇಶ್ ಇಂದು ನಾಮಪತ್ರ ಸಲ್ಲಿಸಿದ್ದು,ಅವರು ಹಾಲಿ ಮಲ್ಲಪನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ, ಹಿರಿಯೂರು ತಾಲ್ಲೋಕು ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾಗಿ, ಭಾರತೀಯ ಕಿಸಾನ್ ಸಂಘದ ನಿರ್ದೇಶಕರಾಗಿ ಹಾಲಿಗೆ ನ್ಯಾಯಯುತವಾದ ಬೆಲೆ ಕೊಡಬೇಕೆಂದು ಹೋರಾಡುತ್ತಿರುವ ಹಾಗೂ ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿದ್ದು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇಂಥವರನ್ನು ಕೃಷಿಕ ಸಮಾಜದ ಚುನಾವಣೆಯಲ್ಲಿ ನೋಂದಾಯಿತ ಸದಸ್ಯರಾಗಿರುವವರು, ಆಯ್ಕೆ ಮಾಡಬೇಕೆಂದು ಕಸವನಹಳ್ಳಿ ರಮೇಶ್ ಮನವಿ ಮಾಡಿದರು. ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾದ ಗಡಾರಿ ಕೃಷ್ಣಪ್ಪ, ಕುಂಚಿಟಿಗ ಕುಲಶಾಸ್ತ್ರಅಧ್ಯಯನಕಾರ ಎಸ್ ವಿ ರಂಗನಾಥ್, ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ, ವಿ ಕುಬೇರಪ್ಪ, ಖಜಾಂಚಿ ಪೆಪ್ಸಿ ಹನುಮಂತರಾಯ, ಹುಚ್ಚವನಹಳ್ಳಿ ಅವಿನಾಶ್, ಗ್ರಾಮ ಪಂಚಾಯಿತಿ ಸದಸ್ಯೆ ಹುಲಗಲಕುಂಟೆ ಶಶಿಕಲಾ, ಧರ್ಮಪುರ ವೆಂಕಟರಮಣಪ್ಪ ಹಾಜರಿದ್ದು ಬೆಂಬಲಿಸಿದರು.
About The Author
Discover more from JANADHWANI NEWS
Subscribe to get the latest posts sent to your email.