January 30, 2026
IMG-20241205-WA0134.jpg

ವರದಿ :ಕೆ ಟಿ. ಓಬಳೇಶ್ ನಲಗೇತನಹಟ್ಟಿ

ನಾಯಕನಹಟ್ಟಿ: ಡಿ.5. ಹೋಬಳಿಯ ಎನ್ ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುದಾಪುರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ರವರ ಮಹಾಪರಿ ನಿಬ್ಬಣ ಹೊಂದಿದ ದಿನದ ಪುಣ್ಯಸ್ಮರಣೆ ಹಾಗೂ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಜಿ ಬಿ ಉಮೇಶ್ ಕುದಾಪುರ ಅವರ ಹುಟ್ಟು ಹಬ್ಬದ ಪ್ರಯುಕ್ತ ಹಮ್ಮಿಕೊಂಡಿರುವ ಕ್ರಿಕೆಟ್ ಟೂರ್ನಮೆಂಟ್ ಬಹುಜನ ನಾಯಕ ಜೈ ಭೀಮ ಸಿಂಗಂ ಕಪ್ ಕ್ರೀಡಾಕೂಟವನ್ನು ಟೇಪ್ ಕತ್ತರಿಸುವ ಮೂಲಕ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಜಿ ಬಿ ಉಮೇಶ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಭಾರತ ದೇಶದ ಮೊದಲ ಶಕ್ತಿ, ನಮ್ಮ ನಿಮ್ಮೆಲ್ಲರ ನಾಯಕ, ಮಹಾ ಮಾನವತಾವಾದಿ, ಸಮಾನತೆ ಹರಿಕಾರ ಡಾ. ಬಿ .ಆರ್. ಅಂಬೇಡ್ಕರ್ ಅವರ ಮಹಾ ಪರಿನಿಬ್ಬಣದ ದಿನ ಡಿ 06 ರಂದು ಡಿ. 5. ರಂದು ನಾನು ಹುಟ್ಟಿದ ದಿನ ಎರಡು ಕಾರ್ಯಕ್ರಮಗಳನ್ನು ಸೇರಿಸಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಈ ದಿನ ನಾವೆಲ್ಲರೂ ಅಂಬೇಡ್ಕರ್ ಅವರನ್ನು ಸ್ಮರಣೆ ಮಾಡಿಕೊಳ್ಳಬೇಕು. ಅಂಬೇಡ್ಕರ್ ಅವರು ಭಾರತದಲ್ಲಿ ಜನಿಸದಿದ್ದರೆ, ಈ ದೇಶದ ಸಂವಿಧಾನ ಬರೆದಿದಿದ್ದರೆ, ಖಂಡಿತವಾಗಿ ನಾನು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗುತ್ತಿರಲಿಲ್ಲ. ನಮ್ಮ ಸ್ನೇಹಿತರು ಗ್ರಾಮ ಪಂಚಾಯತಿ ಸದಸ್ಯರಾಗುತ್ತಿರಲಿಲ್ಲ. ಹಲವಾರು ಜನರ ಸರ್ಕಾರಿ ಹುದ್ದೆಗಳಲ್ಲಿ ಇದ್ದಾರೆ ಇದಕ್ಕೆಲ್ಲ ಕಾರಣಕರ್ತರು ಡಾ. ಬಿ ಆರ್ ಅಂಬೇಡ್ಕರ್. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಮಹಾತ್ಮ ಗಾಂಧೀಜಿ, ನಾವು ಬದುಕುವುದಕ್ಕೆ ಅವಕಾಶ ಕೊಟ್ಟಿದ್ದು ಡಾ. ಬಿ ಆರ್ ಅಂಬೇಡ್ಕರ್ ಅವರ ಮಹಾ ಪರಿನಿಬ್ಬಣದ ಪ್ರಯುಕ್ತ 5 ದಿನಗಳ ಕಾಲ ಅವರು ನೆನಪಿನಲ್ಲಿ ಕ್ರೀಡೆ ಆಡುವುದರ ಮೂಲಕ ಯಶಸ್ವಿಗೊಳಿಸಬೇಕು. ಡಾ. ಬಿ ಆರ್ ಅಂಬೇಡ್ಕರ್ ರವರು ಸಂವಿಧಾನ ಬರೆಯುವುದರ ಮೂಲಕ ರಾಜಕೀಯ ಸಮಾನತೆ ಕೊಟ್ಟಿದ್ದಾರೆ. ಈ ದೇಶದಲ್ಲಿ ಸಾವಿರಾರು ಕೋಟಿ ಹೊಂದಿರುವವರೆಗೂ ಒಂದೇ ವೋಟು. ಸಾಮಾನ್ಯ ವ್ಯಕ್ತಿಗೂ ಒಂದೇ ವೋಟು. ಆದರೆ ನಮಗೆ ಸಾಮಾಜಿಕ ಸಮಾನತೆ ಹಾಗೂ ಆರ್ಥಿಕ ಸಮಾನತೆ ಸಿಕ್ಕಿಲ್ಲ. ಸಾಮಾಜಿಕ ಸಮನತೆ ಎಂದರೆ ನಮ್ಮ ದಲಿತರು ಸಮಾಜದಲ್ಲಿ ಗೌರವತಾಗಿ ಬದುಕಲು ಆಗುತ್ತಿಲ್ಲ. ಕೆಲವೊಂದು ದೇವಸ್ಥಾನಕ್ಕೆ ಪ್ರವೇಶವಿಲ್ಲ. ಕಟಿಂಗ್ ಶಾಪ್ ಗಳಲ್ಲಿ ಕಟಿಂಗ್ ಮಾಡುವುದಿಲ್ಲವೆಂಬ ಆರೋಪ ನೋಡಿದ್ದೇವೆ ಹಾಗಾಗಿ ಸಾಮಾಜಿಕ ಸಮಾನತೆ ದೊರೆತಿಲ್ಲ. ಆರ್ಥಿಕ ಸಮಾನತೆ ದೇಶದಲ್ಲಿ ಶ್ರೀಮಂತರು ಶ್ರೀಮಂತರೇ ಆಗುತ್ತಿದ್ದಾರೆ. ಬಡವರು ಬಡವರಾಗುತ್ತಿದ್ದಾರೆ.
ಸಮಾನತೆ ಇಲ್ಲದೆ ಇರುವಂತ ರಾಜಕೀಯ ಸಮಾನತೆ ಅದು ಶಾಶ್ವತ ಅಲ್ಲ. ನಿಮಗೆ ನಾನು ಏನು ಒಂದು ವೋಟು ಕೊಟ್ಟಿದ್ದೇನೆ ರಾಜಕೀಯ ಶಕ್ತಿಯ ಮೂಲಕ ಮುಂದಿನ ದಿನಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯನ್ನು ಪಡೆಯಬೇಕು. ಹಾಗೆ ಇದ್ದರೆ ಮಾತ್ರ ಈ ರಾಜಕೀಯ ಸಮಾನತೆ ಕೊಟ್ಟಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಡಾ. ಬಿ ಆರ್ ಅಂಬೇಡ್ಕರ್ ಹೇಳಿದ್ದಾರೆ ಎಂದು ಹೇಳಿದರು.

ಮುಖಂಡ ಜಿ. ಪಾಪನಾಯಕ ಮಾತನಾಡಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿಬ್ಬಣದ ದಿನ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಜಿಬಿ ಉಮೇಶ್ ರವರ ಹುಟ್ಟುಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಕ್ರೀಡಾಕೂಟವನ್ನು ಆಯೋಜನೆ ಮಾಡಿರುವುದು ಸಂತೋಷದ ವಿಷಯ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ ಯಾರು ಸಹ ಅಹಿತಕರ ಘಟನೆಗಳು ಸಂಭವಿಸದಂತೆ ಒಂದೇ ತಾಯಿಯ ಮಕ್ಕಳಂತೆ ಕ್ರೀಡೆಯನ್ನು ಆಡಬೇಕು ಎಂದು ಕ್ರೀಡಾಪಟುಗಳಿಗೆ ಮನವಿಯನ್ನು ಮಾಡಿದರು.

ಈ ಸಂದರ್ಭದಲ್ಲಿ ಎನ್ ಮಹದೇವಪುರ ಗ್ರಾ.ಪಂ‌. ಸದಸ್ಯರಾದ ಎಂ. ಪಾಲಯ್ಯ,ನಿರಂಜನ್, ನಾಯಕನಹಟ್ಟಿ ಬೆಸ್ಕಾಂ ಶಾಖಾಧಿಕಾರಿ ಎನ್ ಬಿ ಬೋರಣ್ಣ, ಜಿ.ಪಿ. ಪಾಪನಾಯಕ, ಶಿಕ್ಷಕ ಟಿ. ಗಂಗಾಧರಪ್ಪ, ಯುವ ಮುಖಂಡ ಕೃಷ್ಣೇಗೌಡ, ಮಾಜಿ ಪಟ್ಟಣ ಪಂಚಾಯತಿ ಸದಸ್ಯ ನಾಗರಾಜ್ ಜಾಗನೂರಹಟ್ಟಿ, ಎ.ಕೆ. ಗುಂಡಪ್ಪ, ಕೆ ಜಿ ಓಬನಾಯಕ, ಜಿ.ಬಿ ಲೋಕೇಶ್, ಜಿ.ಬಿ. ಬೋರಣ್ಣ ವಿಷ್ಣು ಗುಂತಕೋಲಮ್ಮನಹಳ್ಳಿ, ಬಡಗಿ ಮಲ್ಲಯ್ಯ, ವರವು ಕಾಟಯ್ಯ, ಎಲ್ಲಾ ಕ್ರೀಡಾಪಟುಗಳು ಕ್ರೀಡಾಭಿಮಾನಿಗಳು ಸೇರಿದಂತೆ ಸಮಸ್ತ ಕುದಾಪುರ ಗ್ರಾಮಸ್ಥರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading