ಚಳ್ಳಕೆರೆ ಡಿ.5
ನಮ್ಮಮುಂದಿನ ಪೀಳಿಗೆಗೆ ನಮ್ಮ ಕೊಡುಗೆ ಎಂದರೆ ಅದು ಫಲವತ್ತಾದ ಮಣ್ಣು ಮಾತ್ರ ಎಂಬುದು ಪ್ರತಿಯೊಬ್ಬರೂ ಹರಿಯಬೇಕಿದೆ ಎಂದು ಮಣ್ಣು ವಿಜ್ಞಾನಿ ರವಿಕುಮಾರ್ ಹೇಳಿದರು







ಅವರು ನಗರದ ಸೊಮಗುದ್ದು ರಸ್ತೆಯಲ್ಲಿ ಇರುವ ಉಪಕೃಷಿ ನಿರ್ದೇಶಕರ ಕಛೇರಿ ಆವರಣದಲ್ಲಿ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,
ರೈತರು ಮಣ್ಣು ರಕ್ಷಣೆ ಮಾಡಬೇಕು ಎಂಬುದು
ಥೈಲ್ಯಾಂಡ್ ರಾಜ ಎಂಬುವವರು ಅಲ್ಲಿನ ಕೃಷಿಯ ಕ್ರಮಗಳನ್ನು ಭಾರತದಲ್ಲಿ ಅನುಷ್ಟಾನಕ್ಕೆ ತಂದರು ಅಂದಿನಿಂದ ಇಂದು ವಿಶ್ವ ಮಣ್ಣು ದಿನಾಚರಣೆ ಆಚರಿಸಲಾಗುತ್ತದೆ,
ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಈ ವರ್ಷದ ಘೋಷ ವಾಖ್ಯವಾಗಿದೆ,
ಪ್ರಪಂಚದಲ್ಲಿ ವರ್ಷಕ್ಕೆ 100 ಮಿಲಿಯನ್ ಹೆಕ್ಟೇರ್ ರಷ್ಟು ಕೃಷಿ ಭೂಮಿ ಹಾಳಾಗುತ್ತದೆ, ಎಂದು ವರದಿಯಾಗಿದೆ,
ರಾಸಾಯನಿಕ ಗೊಬ್ಬರ, ರಿಯಲ್ ಎಸ್ಟೇಟ್, ಕೃಷಿ ಮಾಡುವವರ ಸಂಖ್ಯೆ ಹಲವು ಕಾರಣಗಳಿಂದ ಫಲವತ್ತಾದ ಕೃಷಿ ಭೂಮಿ ಕಡಿಮೆಯಾಗುತ್ತದೆ ಬರುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಕೃಷಿ ಸಹಾಯಕ ನಿರ್ದೇಶಕ ಆರ್.ಅಶೋಕ ಮಾತನಾಡಿಪಂಚಬೂತಗಳಲ್ಲಿ ಮಣ್ಣು ಜೀವಸಂಕುಲಕ್ಕೆ ಸಹಕಾರಿಯಾಗಲಿದೆ ಮಣ್ಣು ಇರುವ ವಸ್ತು ನೀರು ಖನಿಜ. ಸೂಕ್ಷ್ಮ .ಗಾಳಿ ಇರುತ್ತದೆ ಫಲವತ್ತಾದ ಮಣ್ಣು ಇದ್ದರೆ ಮಾತ್ರ ಗುಣ ಮಣ್ಣದ ಇಳುವರಿ ಪಡೆಯಲು ಸಾಧ್ಯ ನೈಸರ್ಗಿಕ ಮಣ್ಣನ್ನು ಖರೀದಿ ಮಾಡಲು ಸಾಧ್ಯವಿಲ್ಲ ಉತ್ತಮಬೀಜ ಗೊಬ್ಬರ ಖರೀದಿಸ ಬಹುದು ಮಾನವನ ದುರಾಷೆಯಿಂದ ಮಳೆ ಹಾನಿಯಿಂದ ಕೊಚ್ಚಿಹೋಗುತ್ತದೆ ಇದರನ್ನು ರಕ್ಷಣೆ ಮಾಡಿಕೊಳ್ಳಲು ದನದಗೊಬ್ಬರ ಜಿಪ್ಸಮ್. ಬದು ನಿರ್ಮಾಣ ಮಾಡಿಕೊಳ್ಳಬೇಕು. ಮಣ್ಣಿನ ಗುಣ ಲಕ್ಷಣಗಳನ್ನು ಪರಿಶೀಲನೆ ಮಾಡುವ ಮೂಲಕ ಅದರ ಅನುಗುಣವಾಗಿ ಬೆಳೆಗಳನ್ನು ಬೆಳೆಯಬೇಕು ಆಹಾರ ಭದ್ರತೆ ಮಾಡಿಕೊಳ್ಳಲು ಮಣ್ಣು ನೀರು ಪರೀಕ್ಷೆ ಮಾಡಿಕೊಳ್ಳಬೇಕು. ಮಣ್ಣು ವಿಜ್ಞಾನಿಗಳ ಮೂಲಕ ಸಲಹೆ ಪಡೆದು ರೈತರು ಸ್ಥಳೀಯವಾಗಿ ಸಿಗುವಂತ ಮಣ್ಣನ್ನು ಸಂರಕ್ಷಣೆ ಮಾಡಿಕೊಳ್ಳೊಣ ಎಂದು ಕರೆ ನೀಡಿದರು.
ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಮಣ್ಣು ನಮ್ಮ ಜೀವನದ ಅತ್ಯಮೂಲ್ಯವಾದದು ಆದ್ದರಿಂದ ಮಣ್ಣನ್ನು ರಕ್ಷಣೆ ಮಾಡಬೇಕು, ಮಣ್ಣಿನಲ್ಲಿ ಕೆಲಸ ಮಾಡಿ ದೇಶದ ಆಹಾರ ಭದ್ರತೆ ಕಾಪಡಬೇಕಿದೆ ಆದರೆ ಎಲ್ಲವಕ್ಕೂ ಮೂಲ ಕಾರಣ ಮಣ್ಣು, ರೈತರು ಅತೀ ಹೆಚ್ಚಿನ ಇಳುವರಿ ಪಡೆಯುವ ಆಸೆಗೆ ರಾಸಾಯನಿಕ ಗೊಬ್ಬರ ಬಳಸಿ ಮಣ್ಣಿನ ಫಲವತ್ತತೆ ನಾಶ ಮಾಡಬಾರದು ಎಂದರು.
ಪ್ರಗತಿಪರ ರೈತ ಮುಖಂಡರಾದ ರುದ್ರಮುನಿಯಪ್ಪ.ಚಿಕ್ಕಣ್ಣ.ಉಪ ಕೃಷಿ ನಿರ್ದೇಶಕ ಡಾ.ಪ್ರಭಕಾರ್, ಮಾತನಾಡಿದರು.
ಇದೇ ಸಂಧರ್ಭದಲ್ಲಿ ಉಪ ಕೃಷಿ ನಿರ್ದೇಶಕ ಪ್ರಭಕರ್,
ಕೃಷಿ ನಿರ್ದೇಶಕ ಅಶೋಕ, ವೀರಣ್ಣ, ಶ್ರೀಕಂಠ ಮೂರ್ತಿ, ಕೆಡಿಪಿ ಸದಸ್ಯ ರಮೇಶ್,
ರೈತ ಮುಖಂಡರು
ಪಶುಸಖಿ, ಹಾಗೂ ರೈತರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.