September 15, 2025
IMG-20241105-WA0151.jpg

ಚಳ್ಳಕೆರೆ ನ.5 ಸರ್ಕಾರದ ಯೋಜನೆಗಳನ್ನು ಅರ್ಹ ಪಲಾನುಭವಿಗಳಿಗೆ ತಲುಪಿಸುವ,ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಉತ್ತಮ ಸೇವೆ ಮಾಡಿದ ಗ್ರಾಮಪಂಚಾಯಿತಿಗಳನ್ನು ರಾಷ್ಟ್ರೀಯ ಪಂಚಾಯತ್
ಪುರಸ್ಕಾರ-2024 ಆಯ್ಕೆಯಾಗಿವೆ.
ಹೌದು ಚಳ್ಕಕೆರೆ ತಾಲೂಕಿನ ಘಟಪರ್ತಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡಿರುವುದನ್ನು ಗುರುತಿಸಿ ರಾಷ್ಟ್ರೀಯ ಪಂಚಾಯತ್
ಪುರಸ್ಕಾರ-2024 ಪ್ರಸಸ್ತಿಯ ಗರಿ ಮುಡಿಗೇರಿಸಿಕೊಂಡಿದೆ.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ (ಪಂಚಾಯತ್ ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್
ರಾಜ್ ಇಲಾಖೆಯವರ ಅಧ್ಯಕ್ಷತೆಯಲ್ಲಿ ನ‌4 04-11-2024 ರಂದು ಮಧ್ಯಹ್ನಾ 2.00 ಗಂಟೆಗೆ ರಾಷ್ಟ್ರೀಯ ಪಂಚಾಯತ್
ಪುರಸ್ಕಾರ-2024 (2022-23 ಸಾಲಿನ ಪ್ರಗತಿ ಆಧರಿಸಿ) ಕ ಸಂಬಂಧಿಸಿದಂತೆ 9 ವಿಷಯಾಧಾರಿತ ಅಂಶಗಳಡಿ
ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿ ಕೇಂದ್ರ ಸರ್ಕಾರಕ್ಕೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ (ಪಂಚಾಯತ್‌ ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ನಾಮ ನಿರ್ದೇಶನಗೊಂಡ 27 ಗ್ರಾಮ
ಪಂಚಾಯತಿಗಳನ್ನು ರಾಜ್ಯ ಮಟ್ಟದ ತಂಡವು ಕ್ಷೇತ್ರ ತಪಾಸಣೆಯೊಂದಿಗೆ ಮೌಲ್ಯಮಾಪನ ಮಾಡಿ ಅಂತಿಮವಾಗಿ ಮೊದಲ
ಮೂರು ಸ್ಥಾನ ಗಳಿಸಿದ ಗ್ರಾಮ ಪಂಚಾಯತಿಗಳು ಸಾಧಿಸಿರುವ ಪುಗತಿಯ ಕುರಿತು ವಿವರವಾದ ಮಾಹಿತಿಯನ್ನು ನೀಡುವಂತೆ
ಸಂಬಂಧಪಟ್ಟ, ತಂಡಗಳಿಗೆ ಸೂಚಿಸಿದರು.
ಅದರಂತೆ, ಕ್ಷೇತ್ರ ತಪಾಸಣೆ ಕೈಗೊಂಡ ತಂಡದವರು ಹಾಗೂ NPA ನೋಡಲ್ ಅಧಿಕಾರಿಯವರು ಭೇಟಿ ನೀಡಿದ ಗ್ರಾಮ
ಪಂಚಾಯತಿಗಳ ಸಾಧನೆ ಹಾಗೂ ಪ್ರಗತಿಯ ಕುರಿತು ದಾಖಲೆಗಳೊಂದಿಗೆ ಮತ್ತು ಕಿರು ಚಿತ್ರದೊಂದಿಗೆ PPT ಯನ್ನು
ಪುಸ್ತುತಪಡಿಸಿದರು. ತದನಂತರ, ಅಧ್ಯಕ್ಷತೆ ವಹಿಸಿದನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ(ಪಂಚಾಯತ್ ರಾಜ್)ರವರು ಘಟಪರ್ತಿ ಸಾಕಷ್ಟು ಕುಡಿಯುವ ನೀರಿನ ಲಭ್ಯತೆ ಇರುವ ಗ್ರಾಮ ಪಂಚಾಯಿತಿ.

ಘಟಪರ್ತಿ ಗ್ರಾಪಂ ಕಿರು ಮಾಯಿತಿ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಘಟಪರ್ತಿ ಗ್ರಾಮ ಪಂಚಾಯಿತಿಯು 05 ಗ್ರಾಮಗಳನ್ನು ಒಳಗೊಂಡ ಗ್ರೇಡ್-1 ಗ್ರಾಮ ಪಂಚಾಯಿತಿ ಆಗಿದ್ದು 21ಜನ ಸದಸ್ಯರುಳ್ಳ ಆಡಳಿತ ಮಂಡಳಿ ಹೊಂದಿದೆ. ಈ ಗ್ರಾಮ ಪಂಚಾಯಿತಿಯು ಸುಮಾರು2695 ಕುಟುಂಬ 9216ಜನ ಸಂಖ್ಯೆ ಹೊಂದಿರುತ್ತದೆ.
ಘಟಪರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ನೈಸರ್ಗಿಕ ಜಲ ಮೂಲಗಳಾದ 06 ಗೋಕಟ್ಟೆ, 02 ಕೆರೆ, 06 ರಾಜ ಕಾಲುವೆಗಳು, 11 ಹಳ್ಳಗಳನ್ನೊಳಗೊಂಡಿರುತ್ತದೆ. ಚಳ್ಖಕೆರೆ ತಾಲ್ಲೂಕು ಸದಾ ಬರಗಾಲವಿರುವ ತಾಲ್ಲೂಕು ಆಗಿದ್ದು ಅದರಂತೆ ಸದರಿ ಗ್ರಾಮ ಪಂಚಾಯಿತಿಯೂ ಹೊರತಾಗಿರುವುದಿಲ್ಲ. ಬರಗಾಲವೆಂದು ಕೈಚೆಲ್ಲಿ ಕೂರದೇ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜಲ ಮೂಲಗಳನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಗ್ರಾ.ಪಂ ಯು ಶ್ರಮವಹಿಸಿದೆ.
ಮನರೇಗಾ ಯೋಜನೆಯಡಿ ಕೆರೆ-ಕಾಲುವೆ, ಹಳ್ಳ ಹೊಳೆತ್ತುವುದು ಮತ್ತು ರೈತರ ಕೃಷಿ ಭೂಮಿಗಳಲ್ಲಿ ಭೂಅಭಿವೃದ್ಧಿ, ಕಟ್ಟೆ, ಬೋಲ್ಡರ್ ಚೆಕ್, ಕೃಷಿಹೊಂಡಗಳಂತಹ ಕಾಮಗಾರಿಗಳನ್ನು ಅನುಷ್ಟಾನಗೊಳಿಸಿ ಮಳೆಗಾಲದಲ್ಲಿ ಬೀಳುವ ಅಲ್ಪ ಪ್ರಮಾಣದ ಮಳೆ ನೀರನ್ನು ಹಿಡಿದು ನಿಲ್ಲಿಸಿ ಅದನ್ನು ಹಿಂಗಿಸುವ ಕೆಲಸವನ್ನು ನಿರ್ವಹಿಸಿದ್ದು ಇದರಿಂದಾಗಿ ಈ ಭಾಗದ ಅಂತರ್ಜಲ ವೃದ್ಧಿಸುವಂತೆ ಕ್ರಮವಹಿಸಲಾಗಿದೆ. ವಿಶೇಷವಾಗಿ 2015-16ನೇ ಸಾಲಿನಲ್ಲಿ ಬೋರ್ ವೆಲ್ ರಿಚಾರ್ಜ್ ಕಾಮಗಾರಿಗಳನ್ನು ಕೈಗೊಂಡು ಕುಡಿಯುವ ನೀರಿನ ಬೋರ್ ವೆಲ್ ನಲ್ಲಿ ನೀರು ಬತ್ತಿಹೋಗದಂತೆ ನೋಡಿಕೊಳ್ಳಲಾಗಿದೆ.
ಈ ಪರಿಣಾಮವಾಗಿ ಘಟಪರ್ತಿ ಗ್ರಾ.ಪಂ ಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ಬಳಕೆಗೆ ಮತ್ತು ಸಾರ್ವಜನಿಕರ ಬಳಕೆಯ ಉದ್ದೇಶಕ್ಕೆ ಕೊರತೆಯಾಗದಂತೆ ಹಾಗು ಸರ್ಕಾರದ ನಿಯಮದಂತೆ 55 ಎಲ್.ಪಿ.ಸಿ.ಡಿ ಗೂ ಕಡಿಮೆಯಿರದಂತೆ ಹೆಚ್ಚಿನ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿದೆ.
ಘಟಪರ್ತಿ ಗ್ರಾಮ ಪಂಚಾಯಿತಿಯು ಸಾಕಷ್ಟು ಕುಡಿಯುವ ನೀರಿನ ಲಭ್ಯತೆ ಇರುವ ಗ್ರಾಮ ಪಂಚಾಯಿತಿ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಸಗಿದೆ‌ ಎಂದು ತಾಪಂ ಇಒ‌ಶಶಿಧರ್ ತಿಳಿಸಿದ್ದಾರೆ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading