
ನಾಯಕನಹಟ್ಟಿ:: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣ ರವರು ರೇಖಲಗೆರೆ ಫೀಡರ್ ಚಾನೆಲ್ ಗೆ ₹ 5 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲು ಅನುದಾನವನ್ನ ನೀಡಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಸಂಚಾಲಕ ಎಸ್ ಸಿ ವಿಭಾಗ ಹಿರೇಹಳ್ಳಿ ವಕೀಲ ಟಿ. ಮಲ್ಲೇಶ್ ಹೇಳಿದ್ದಾರೆ.
ಮಂಗಳವಾರ ಹೋಬಳಿಯ ಎನ್ ಉಪ್ಪಾರಹಟ್ಟಿ ಗ್ರಾಮದಲ್ಲಿ ಶ್ರೀ ದುರ್ಗಾಂಬಿಕ ದೇವಿ ಜಾತ್ರೆ ಮಹೋತ್ಸವದಲ್ಲಿ ಪಾಲ್ಗೊಂಡು ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು ಶಾಸಕ ಗೋಪಾಲಕೃಷ್ಣ ರವರು ಕ್ಷೇತ್ರದಲ್ಲಿ ಕೃಷಿಗೆ ಹೆಚ್ಚಿನ ಹೊತ್ತನ್ನು ನೀಡಿ ರೈತರ ಪರ ಉತ್ತಮವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾರೆ. ಇನ್ನೂ ತಳಕು ಮತ್ತು ನಾಯಕನಹಟ್ಟಿ ಹೋಬಳಿ ಭಾಗದ ಕೆರೆಗಳಿಗೆ ಶಾಸಕ ಎನ್ ವೈ ಗೋಪಾಲಕೃಷ್ಣ ಬಾಗಿಲವನ್ನ ಅರ್ಪಿಸಿದ್ದಾರೆ. ಬಯಲುಸೀಮಿಗೆ ಭದ್ರಾ ನೀರು ಬಂದರೆ ರೈತರು ಉತ್ತಮ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ.ಎನ್ ಉಪ್ಪಾರಹಟ್ಟಿ
ಗ್ರಾಮದಲ್ಲಿ ಪ್ರತಿವರ್ಷದ ಸಂಪ್ರದಾಯದಂತೆ ಶ್ರದ್ದಾ ಭಕ್ತಿಯಿಂದ ಗ್ರಾಮಸ್ಥರು ಗಂಗಾ ಪೂಜೆ ಜಾತ್ರೋತ್ಸವವನ್ನು ಆಚರಣೆ ಮಾಡಿರುವುದು ಶ್ಲಾಘನೀಯ ದೇವಿ ಆಶೀರ್ವಾದ ಗ್ರಾಮದ ಜನತೆಗೆ ಉತ್ತಮ ಮಳೆ ಬೆಳೆ ಶಾಂತಿ ಗ್ರಾಮದಲ್ಲಿ ನೆಲಸಲಿ ಎಂದರು.
ಉಪ್ಪಾರಹಟ್ಟಿ ಗ್ರಾಮದ ವಕೀಲ ಬಿ.ಬೋಸಯ್ಯ ಮಾತನಾಡಿದರು ಪೂರ್ವಿಕರ ಕಾಲದಿಂದಲೂ ಗ್ರಾಮದಲ್ಲಿ ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವವನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ ಸಾಂಪ್ರದಾಯದಂತೆ ದೇವಿಗೆ ಪೂಜಾ ವಿಧಿ ವಿಧಾನಗಳನ್ನು ಮಾಡುವ ಮೂಲಕ ಗ್ರಾಮದಲ್ಲಿ ಶಾಂತಿಯನ್ನು ನೀಡಲಿ ಎಂದು ಶ್ರದ್ಧಾ ಭಕ್ತಿಯಿಂದ ಕೆಂಡೋತ್ಸವ ಮತ್ತು ಗಂಗಾ ಪೂಜೆಯನ್ನು ನೆರೆವೇರಿಸಲಾಗಿದೆ ಎಂದರು..
ಇನ್ನೂ ತುರುವನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಆರ್. ತಿಪ್ಪೇಸ್ವಾಮಿ ಮಾತನಾಡಿದರು
ಇದೇ ಸಂದರ್ಭದಲ್ಲಿ ಎಂ ಕಾಂತರಾಜ್, ಬಿ.ಹೆಚ್. ಜಯಕುಮಾರ್, ಚಂದ್ರಣ್ಣ, ಮೂರ್ತಿ, ರೇಣುಕೇಶ್, ಸೇರಿದಂತೆ ಸಮಸ್ತ ಎನ್ ಮತ್ತು ಟಿ. ಉಪ್ಪಾರಹಟ್ಟಿ ಹಾಗೂ ಎತ್ತಿನಹಟ್ಟಿ ಮತ್ತು ನಲಗೇತನಹಟ್ಟಿ ಗ್ರಾಮಸ್ಥರು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.