
ಚಳ್ಳಕೆರೆ ಆ.5
ಯೂರಿಯಾ ಗೊಬ್ಬರಕ್ಕೆ ರೈತರು ಹಲವೆಡೆ ಮುಗಿಬೀಳುರುವಂತೆಯೇ ನ್ಯಾನೊ ಯೂರಿಯಾದ ಬಳಕೆಯ ಕುರಿತು ಮಂಗಳವಾರ ಸಾಣೀಕೆರೆ ಗ್ರಾಮದ ರೈತ ಮಲ್ಲಿಕಾರ್ಜುನಪ್ಪ ಇವರ ಜಮೀನಿನಲ್ಲಿ ಡ್ರೋನ್ ಮೂಲಕ ಕೃಷಿ ಇಲಾಖೆ, ಇಫ್ಕೋ ಸಂಸ್ಥೆಗಳ ಸಹಯೋಗದೊಂದಿಗೆ
ಯೂರಿಯಾ ಸಿಂಪಡಣೆಯ ಪ್ರಾತ್ಯಕ್ಷಿಕೆ ನಡೆಸಲಾಯಿತು.
ಕೃಷಿ ಉಪನಿರ್ದೇಶಕ ಉಮೆರಶ್ ಮಾತನಾಡಿ ನ್ಯಾನೊ ಯೂರಿಯಾ ಒಂದು ದ್ರವ ರೂಪದ ರಸಗೊಬ್ಬರವಾಗಿದ್ದು, ಸಾಂಪ್ರದಾಯಿಕ ಯೂರಿಯಾ ಗೊಬ್ಬರಕ್ಕಿಂತ 8-10 ಪಟ್ಟು ಪರಿಣಾಮಕಾರಿಯಾಗಿದೆ. ಬೆಳೆಗಳಿಗೆ ತ್ವರಿತ ಪೋಷಕಾಂಶ ನೀಡುತ್ತದೆ. ನ್ಯಾನೊ ಯೂರಿಯಾ ಬಳಸಿದರೆ, ಸಾಂಪ್ರದಾಯಿಕ ಗ್ರಾನುಲರ್ ಯೂರಿಯಾ ಬಳಕೆ ಶೇ 50ರಷ್ಟು ಕಡಿಮೆ ಮಾಡಬಹುದು ಸಮಯ ಹಾಗೂ ಕೂಲಿ ಹಾಳುಗಳ ಉಳಿತಾಯವಾಗಲಿದೆ ಮಣ್ಣಿನಲ್ಲಿ ಸಾರಜನಕ ಕೊರತೆ ಹೆಚ್ಚಾಗಿರುತ್ತದೆ. ಸಾರಜನಕದ ಉದ್ದೇಶಿತ ಮತ್ತು ನಿಖರವಾದ ಬಳಕೆಗಾಗಿ ನ್ಯಾನೊ ಯೂರಿಯಾ ಒಂದು ಉತ್ತಮ ರಸಗೊಬ್ಬರ. ಇದು ಗಿಡಕ್ಕೆ ಬೇಕಾಗಿರುವ ಸಾರಜನಕ ಮತ್ತು ರಂಜಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸುವುದರಿಂದ ಗಿಡದ ಬೆಳೆವಣಿಗೆ ಹಾಗೂ ಬೇರಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಇವುಗಳನ್ನು ಬಳಸುವುದರಿಂದ ಬೆಳೆಗಳ ಉತ್ಪಾದಕತೆ ಹೆಚ್ಚಾಗಿ ವೆಚ್ಚ ಕಡಿಮೆಯಾಗುವುದರಿಂದ ರೈತರ ಆದಾಯ ಹೆಚ್ಚಾಗುತ್ತದೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಅಶೋಕ್. ಕಸಬಾ ಕೃಷಿ ಅಧಿಕಾರಿ ತಿಪ್ಪೇಸ್ವಾಮಿ ಇಸ್ಕೋ ಕಂಪನಿಯ ವಿಭಾಗೀಯ ವ್ಯವಸ್ಥಾಪಕ ಚಿದಂಬರಮೂರ್ತಿ ರೈತರು ಹಾಗೂ ಇತರರು ಉಪಸ್ಥಿತರಿದ್ದರು.








About The Author
Discover more from JANADHWANI NEWS
Subscribe to get the latest posts sent to your email.