
ವರದಿ : ಶಿವಮೂರ್ತಿ ಓಬಯ್ಯನಹಟ್ಟಿ
ನಾಯಕನಹಟ್ಟಿ :
ಮಂಗಳವಾರ ನಾಯಕನಹಟ್ಟಿ ಪಟ್ಟಣದ ಹೊರಮಠದಿಂದ ರಾಜ ಬೀದಿಗಳ ಮೂಲಕ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಳು, ದಲಿತ ಸಂಘಟನೆಗಳು, ವರ್ತಕರ ಸಂಘಟನೆಗಳು ಎಲ್ಲಾ ಸೇರಿ ವಾಲ್ಮೀಕಿ ವೃತ್ತದಲ್ಲಿ ಸ್ಥಳೀಯ ವರ್ತಕರಿ ಆಗಿರುವ ಅನ್ಯಾಯ ವಿರುದ್ದ ಪಟ್ಟಣ ಕಾರ್ಯಲಯಕ್ಕೆ ಆಗನಮಿಸಿ ಮಾತಾನಾಡಿದ ಕರುನಾಡ ನವ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಮಹಲಿಂಗಪ್ಪ
ರಾಜ್ಯದಲ್ಲೇ ಚಳ್ಳಕೆರೆ ತಾಲ್ಲೂಕು ಅತ್ಯಂತ ಹಿಂದುಳಿದ ಬರಪೀಡಿತ ತಾಲ್ಲೂಕಾಗಿದ್ದು ಇಲ್ಲಿ ಎಸ್ ಸಿ ಹಾಗೂ ಎಸ್ ಟಿ ಸಮುದಾಯದ ಜನರು ಅತಿ ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ ನಾಯಕನಹಟ್ಟಿ ಪಟ್ಟಣದಲ್ಲಿ ವಿವಿದ ರಾಜ್ಯದವರು ಬಂದು ವ್ಯಾಪಾರ ವಹಿವಾಟು ಮಾಡಲು ಮುಂದಾಗಿದ್ದು, ಸ್ಥಳೀಯ ವರ್ತಕರು ತಮ್ಮ ವ್ಯಾಪಾರ ವಹಿವಾಟು ನಿಲ್ಲಿಸುವ ನಿಟ್ಟಿನಲ್ಲಿ ಯೋಚನೆ ಮಾಡುತ್ತಿದ್ದಾರೆ ಆದ ಕಾರಣ ಅನ್ಯ ರಾಜ್ಯಗಳಾದ ಗುಜರಾತ್ ಮಹಾರಾಷ್ಟ್ರ ಕೇರಳ ಮುಂತಾದ ರಾಜ್ಯಾಗಳಿಂದ ಬಂದ ಅವರಿಗೆ ತಿಳಿದಂಗೆ ವ್ಯಾಪಾರ ಮಾಡುವರಿಗೆ ಕಡಿಮೆ ದರದಲ್ಲಿ ವಹಿವಾಟು ಮಾಡುವುದರಿಂದ ನಮಗೆ ತುಂಬಾ ತೊಂದರೆ ಆಗುತ್ತಿದೆ,
ತಾಲ್ಲೂಕು ಕರವೇ ಅಧ್ಯಕ್ಷ ಮುತ್ತಯ್ಯ ಆದ ಕಾರಣ ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಅನ್ಯ ರಾಜ್ಯದವರಿಗೆ ಅವಕಾಶ ಕೊಡಬಾರದು ಈಗಾಗಲೆ ಕೊಟ್ಟಿರುವ ವ್ಯಾಪಾರ ಪರವಾನಿಗೆ ರದ್ದು ಪಡಿಸಬೇಕು ಹಾಗೂ ಮುಂದೆ ಬರುವ ಯಾವುದೇ ಅನ್ಯ ಭಾಷಿಯ ಅಥವಾ ಅನ್ಯ ರಾಜ್ಯದವರಿಗೆ ಪಟ್ಟಣ ಪಂಚಾಯಿತಿ ಅವಕಾಶ ಕೊಡಬಾರದು ಎಂದು ಆಗ್ರಹಿಸಲಾಗುವುದು ಮುಂದೆ ಏನಾದರು ಅನ್ಯರಾಜ್ಯದವರಿಗೆ ಅವಕಾಶ ಕೊಟ್ಟರೆ ಉಗ್ರ ಹೋರಾಟ ಮಾಡಲಾಗುವುದು ಎಂದು ರೈತ ಸಂಘಟನೆಗಳು, ದಲಿತ ಸಂಘಟನೆಗಳು ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿದರು.
ಈ ಸಂಧರ್ಭದಲ್ಲಿ ಸಾಮಾಜಿಕ ಹೋರಾಟಗಾರ ಕೃಷ್ಣಗೌಡ, ವರ್ತಕರಾದ ಲೋಕೇಶ ಆಚಾರ್ಯ, ಬಾಬು, ರಾಜು, ಜಗದೀಶ್, ಸಂತೋಷ್, ಅಧ್ಯಕ್ಷರಾದ ಜೋಗಿಹಟ್ಟಿ ಮಂಜು, ಪ್ರಕಾಶ್, ಹೋಬಳಿ ಮಹಿಳಾ ಅಧ್ಯಕ್ಷೆ ತಿಪ್ಪಮ್ಮ ಚಿನ್ನಮಲ್ಲಯ್ಯ, ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ, ರೈತ ಸಂಘದ ಹೋಬಳಿ ಅಧ್ಯಕ್ಷ ಡಾ|| ನಾಗರಾಜ್ ಮೀಸೆ, ಕಾರ್ಯದರ್ಶಿ ನವೀನ್ ಮದಕರಿ, ರಾಘವೇಂದ್ರ, ಮಂಜುನಾಥ, ಕೆ.ಪಿ ನಾಗರಾಜ್, ಬೋರಯ್ಯ, ಸುರೇಶ, ಪ್ರೇಮ್ ಕುಮಾರ್, ಅರುಣ್ ಕುಮಾರ್, ಪ್ರಸನ್ನ, ಇನ್ನೂ ಕನ್ನಡ ಪರ ಸಂಘಟನೆಕಾರರು ಸ್ಥಳೀಯ ವರ್ತಕರು ಇದ್ದರು.









About The Author
Discover more from JANADHWANI NEWS
Subscribe to get the latest posts sent to your email.