July 6, 2025
1751714962048.jpg


ಚಿತ್ರದುರ್ಗ ಜುಲೈ05:
ಹೆರಿಗೆ ನೋವು ಕಂಡುಬಂದ ತಕ್ಷಣ 108ಕ್ಕೆ ಕರೆ ಮಾಡಿ ಉಚಿತ ವಾಹನ ಸೌಲಭ್ಯ ಪಡೆದು ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿ, ಆರೋಗ್ಯ ಕಾಪಾಡಿಕೊಳ್ಳಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಹೇಳಿದರು
ಚಿತ್ರದುರ್ಗ ತಾಲ್ಲೂಕಿನ ಕಾಸರಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜೋಡಿ ಚಿಕ್ಕೇನಹಳ್ಳಿ ಹೊರವಲಯದಲ್ಲಿ ಇದ್ದಿಲು ಸುಡುವ ಮಹಾರಾಷ್ಟ್ರ ಮೂಲದ ಬಹು ಮಕ್ಕಳ ಹೊಂದಿದ ಗರ್ಭಿಣಿ ಕುಟುಂಬ ಭೇಟಿ ಮಾಡಿ, ಗರ್ಭಿಣಿಯರ ಆರೈಕೆ, ಪೌಷ್ಟಿಕ ಆಹಾರ ಕುರಿತು ಅವರು ಮಾತನಾಡಿದರು.
ಆರೋಗ್ಯ ಅಧಿಕಾರಿಗಳು ನೀಡಿರುವ ಔಷಧಿಗಳನ್ನು ತಪ್ಪದೇ ಸೇವನೆ ಮಾಡಿ, ಮೊಳಕೆ ಕಾಳು, ಹಸಿರು ತರಕಾರಿ, ಹಳದಿ ಹಣ್ಣುಗಳು ಬಳಕೆ ಮಾಡಿರೆಂದು ದಂಪತಿಗಳಿಗೆ ತಿಳಿಸಿದರು.
ತೂಕ ಕಡಿಮೆ ಮತ್ತು ಅಶಕ್ತತೆಯಿಂದ ಇರುವ ಬಹು ಮಕ್ಕಳ ತಾಯಿಗೆ ಹೆರಿಗೆಯ ನಂತರ ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸೆ ಮಾಡಿಸುವುದಕ್ಕಿಂತ ಪುರುಷರಾದ ತಾವೇ ಮುಂದೆ ಬಂದು ಎನ್‍ಎಸ್‍ವಿ ಶಸ್ತ್ರ ಚಿಕಿತ್ಸೆ ಮಾಡಿಸುವುದು ಒಳಿತು ಪುರುಷತ್ವಕ್ಕೆ ಹಾನಿ ಇಲ್ಲ, ಅಶಕ್ತತೆ ಉಂಟಾಗುವುದಿಲ್ಲ, ದಾಂಪತ್ಯ ಜೀವನಕ್ಕೆ ಅಡ್ಡಿಯಿಲ್ಲ, ಆಸ್ಪತ್ರೆಯಲ್ಲಿ ತಂಗುವ ಹಾಗಿಲ್ಲ, ಸರಳ ವಿಧಾನವನ್ನು ಅನುಸರಿಸಿ ಸಂತಸದ ಜೀವನವನ್ನು ಸಾಗಿಸಬಹುದು ಎಂದು ಅರ್ಹ ದಂಪತಿಗೆ ತಿಳಿಸಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಜಾನಕಿ ಗರ್ಭಿಣಿ ತಾಯಿಗೆ ಮಾಹಿತಿ ನೀಡುತ್ತಾ, ಹಗಲು ಹೊತ್ತು ಸಾಧ್ಯವಾದಷ್ಟು ಎಡಮೊಗ್ಗುಲಲ್ಲಿ ಮಲಗುವುದರ ಮುಖಾಂತರ ವಿರಾಮ ಪಡೆಯಿರಿ, ಆರೋಗ್ಯ ಇಲಾಖೆ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ನೀಡುವ ಸಲಹೆ ಪಡೆದು ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದು ಪೆÇ್ರಟೀನ್ ಪೌಡರ್‍ಅನ್ನು ಗರ್ಭಿಣಿ ತಾಯಿಗೆ ಕುಡಿಸುವುದರ ಮುಖಾಂತರ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಆಶಾ ಮತ್ತು ಆಶಾ ಕಾರ್ಯಕರ್ತೆ ಅನುಸೂಯಮ್ಮ, ಫಾರ್ಮಸಿ ಅಧಿಕಾರಿ ಸಲ್ಮಾನ್ ಸೇರಿದಂತೆ ಮತ್ತಿತರರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading