
ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಾಯಕನಹಟ್ಟಿ:: ಕ್ರೀಡಾಪಟುಗಳು ಕ್ರೀಡೆಯಲ್ಲಿ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಎಂದು ಪಟ್ಟಣ ಪಂಚಾಯಿತಿ ಒಂದನೇ ವಾರ್ಡಿನ ಸದಸ್ಯ ಎಂ ಟಿ ಮಂಜುನಾಥ್ ಹೇಳಿದ್ದರು.
ಶನಿವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಮಾದಯ್ಯನಹಟ್ಟಿ ಗ್ರಾಮದಲ್ಲಿ ಶ್ರೀ ಮಾರಿಕಾಂಬ ಕ್ರಿಕೆಟರ್ಸ್ ವತಿಯಿಂದ ದಿವಂಗತ ಬಿ ಬೈಯಣ್ಣ, ಎನ್. ಲೋಕೇಶ್, ಗಟ್ಟಪ್ಪ ನಾಯಕ. ಇವರ ಸ್ಮರಣಾರ್ಥವಾಗಿ 2ನೇ ಬಾರಿಗೆ ಮಾದಯ್ಯನಹಟ್ಟಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆ ದೈಹಿಕ ಮತ್ತು ಸಾಮಾಜಿಕ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಲಿದೆ ಇಂದಿನ ದಿನಮಾನಗಳಲ್ಲಿ ಯುವಕರು ಜೀವನ ಅವಿಭಾಜ್ಯ ಅಂಗವಾಗಿದೆ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಬೇಕು ಕ್ರೀಡೆ ಎಂಬುವುದು ಮಾನಸಿಕ ನೆಮ್ಮದಿಗೆ ಹಾಗೂ ದೈಹಿಕ ಆರೋಗ್ಯಕ್ಕೆ ಉತ್ತಮ ಔಷಧಿ ಗುಣ ನೀಡುವುದು ಕ್ರೀಡೆಯಲ್ಲಿ ಸೋಲು ಗೆಲುವು ಸಮಾನವಾಗಿ ಇದರಿಂದ ಕ್ರೀಡಪಟುಗಳು ಸೋಲನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಕ್ರೀಡಾಪಟುಗಳಿಗೆ ಸಲಹೆ ನೀಡಿದರು.



ಇದೇ ವೇಳೆ ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಟಿ ಬಸಪ್ಪ ನಾಯಕ ಮಾತನಾಡಿದರು ಮಾದಯ್ಯನಹಳ್ಳಿ ಗ್ರಾಮದಲ್ಲಿ ಎರಡನೇ ಬಾರಿಗೆ ಎಂಪಿಎಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಕ್ರೀಡಾಕೂಟವನ್ನು ಆಯೋಜಿಸಿರುವುದು ಸಂತಸ ತಂದಿದೆ ಗ್ರಾಮದ ಪ್ರತಿಯೊಬ್ಬ ಯುವಕರು ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಪಿ. ತಿಪ್ಪೇಸ್ವಾಮಿ, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಓ ಶ್ರೀನಿವಾಸ್, ಗ್ರಾಮದ ಮುಖಂಡರಾದ ದಳಪತಿ ನಾಗರಾಜ್, ಪೂಜಾರಿ ತಿಪ್ಪಯ್ಯ, ಯಜಮಾನ್ ಓಬಯ್ಯ ಯಜಮಾನ್ ಯರ್ರಯ್ಯ ಗೋನೂರು ಬೊಮ್ಮಯ್ಯ, ಕಾಮಯ್ಯ, ದೊಡ್ಡ ಪಾಲಯ್ಯ, ದೇವುಡ್ಲ ಬಸವರಾಜ್, ಬಿ ಬಸವರಾಜ್, ರಾಜಶೇಖರಪ್ಪ ಗಾರೆ ಓಬಣ್ಣ, ಅಂಗಡಿ ಮಹಾಂತೇಶ್, ಕರವೇ ಕನ್ನಡ ಸೇನೆ ತಾಲೂಕು ಅಧ್ಯಕ್ಷ ಪಿ ಮುತ್ತಯ್ಯ ಜಾಗನೂರಹಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಹೋಬಳಿ ಘಟಕ ಅಧ್ಯಕ್ಷ ಪ್ರಕಾಶ್, ಕರವೇ ಕನ್ನಡ ಸೇನೆ ಹೋಬಳಿ ಘಟಕ ಅಧ್ಯಕ್ಷ ಕೆ.ಜಿ ಮಂಜುನಾಥ ಜೋಗಿಹಟ್ಟಿ, ನಗರ ಘಟಕ ಅಧ್ಯಕ್ಷ ತಿಪ್ಪೇಸ್ವಾಮಿ. ಸೇರಿದಂತೆ ಮಾದಯ್ಯನಹಟ್ಟಿ ಸಮಸ್ತ ಗ್ರಾಮಸ್ಥರು ಕ್ರಿಕೆಟ್ ಕ್ರೀಡಾಪಟುಗಳು ಉಪಸ್ಥಿತರಿದ್ದರು
About The Author
Discover more from JANADHWANI NEWS
Subscribe to get the latest posts sent to your email.