
ಚಳ್ಳಕೆರೆ ಜು.5
ಜಿಲ್ಲಾ .ತಾಲೂಕು ಹಾಗೂ ಗ್ರಾಮಪಂಚಾಯಿಗಳಿಗೆ ಕರ್ನಾಟಕ ಸರಕಾರ ಲಾಂಚನ ಬದಲಾಯಿಸಿ ಆದೇಶ ಹೊರಡಿಸಿದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ.
ಹೌದು ಇನ್ನು ಮುಂದೆ ಜಿಲ್ಲಾ
ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ
ಪಂಚಾಯತಿಗಳಿಗೆ ಇದ್ದ ಕರ್ನಾಟಕ ಸರಕಾರದ ಸತ್ಯಮೇವ ಜಯತೆ ಲಾಂಭನ ಬದಲಾಗಿ ಮರದ ಲಾಂಛನವನ್ನು ಜಾರಿಗೊಳಿಸುವಂತೆ ಸುತ್ತೋಲೆ ಹೊರಡಿಸಿದ್ದು.

ಲಾಂಛನ ಬಳಸುವ
ಕುರಿತು ಮಾರ್ಗಸೂಚಿಗಳು.
ಭಾರತ ಸಂವಿಧಾನದ 73ನೇ ತಿದ್ದುಪಡಿಯ ಉದ್ದೇಶವನ್ನು ಈಡೇರಿಸುವುದಕ್ಕಾಗಿ ಮತ್ತು ಜನರು
ಹೆಚ್ಚಿನ ರೀತಿಯಲ್ಲಿ ಗ್ರಾಮ ಸ್ವರಾಜ್ ಸ್ಥಳೀಯ ಸ್ವಯಂ ಆಡಳಿತದ ಘಟಕಗಳಲ್ಲಿ ಭಾಗವಹಿಸಿ
ಕಾರ್ಯನಿರ್ವಹಿಸಲು ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಹಂತಗಳಲ್ಲಿ ಚುನಾಯಿತ
ಸಂಸ್ಥೆಗಳೊಂದಿಗೆ ಮೂರು ಹಂತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.
ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸ್ಥಳೀಯ
ಪ್ರಾಧಿಕಾರವಿರುತ್ತದೆ. ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳು ಅಧಿಕೃತ ಮುದ್ರೆಯಲ್ಲಿ
ಮತ್ತು ಸ್ಟೇಷನರಿ ಮತ್ತು ಅದರ ವಿನ್ಯಾಸದಲ್ಲಿ ಅರ್ಥ ಪೂರ್ಣವಾದಂತಹ ಪ್ರತ್ಯೇಕ
ಲಾಂಛನವನ್ನು ಸೃಜಿಸಿದ್ದು ಅದರ ಬಳಕೆ ಬಗ್ಗೆ ಈ ಕೆಳಗಿನಂತೆ ಮಾರ್ಗಸೂಚಿಗಳನ್ನು ಸೂಚಿಸಿದೆ
ಲಾಂಛನದ ಬಳಕೆ
ಗ್ರಾಮ ಪಂಚಾಯತಿ, ತಾಲ್ಲೂಕು ಹಾಗೂ
ಜಿಲ್ಲಾ ಪಂಚಾಯತಿಯ ಅಧಿಕೃತ ಸರ್ಕಾರಿ ಹಾಗೂ ಅರೆಸರ್ಕಾರಿ ಪತ್ರಗಳಲ್ಲಿ ಲಾಂಛನವು ಪತ್ರದ ಮೇಲ್ಬಾಗದ ಮಧ್ಯದಲ್ಲಿ ಪ್ರಾಮುಖ್ಯವಾಗಿ
ಕಾಣಿಸಬೇಕು.
ಗ್ರಾಮ ಪಂಚಾಯತಿ, ತಾಲ್ಲೂಕು. ಹಾಗೂ ಜಿಲ್ಲಾ ಪಂಚಾಯತಿಯ
ಅಧಿಕೃತ ಕಟ್ಟಡಗಳ ಹಾಗೂ
ಅಧಿಕೃತ ಬ್ಯಾನರ್ .ಜಾಹೀರಾತು ಫಲಕಗಳ ಮೇಲೆ ಬಳಸಬಹುದು.
*ಯಾರು ಬಳಸ ಬಾರದು.
ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ
ಪಂಚಾಯತಿಗಳ ಮಾಜಿ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು ಮತ್ತು ಸದಸ್ಯರುಗಳು, ಹಾಗೂ
ರಾಜ್ಯ/ಕೇಂದ್ರ ಸರ್ಕಾರಿ/ ನಿವೃತ್ತ ಅಧಿಕಾರಿ/ನೌಕರರು ಸೇರಿದಂತೆ ಇನ್ನಿತರ ಯಾವುದೇ ವ್ಯಕ್ತಿ
ಲಾಂಛನವನ್ನು ವಾಹನಗಳ ಮೇಲೆ.
ಯಾವುದೇ ಆಯೋಗ ಅಥವಾ ಕಮಿಟಿ, ಸಾರ್ವಜನಿಕ ವಲಯದ ಉದ್ಯಮ, ಬ್ಯಾಂಕ್,
ಮುನಿಸಿಪಲ್ ಕೌನ್ಸಿಲ್, ಪರಿಷತ್ತು, ಸರ್ಕಾರೇತರ ಸಂಸ್ಥೆ, ವಿಶ್ವವಿದ್ಯಾಲಯ, ಯಾವುದೇ
ರೀತಿಯಲ್ಲಿ ಲಾಂಛನವನ್ನು ಬಳಸಬಾರದು.ಯಾವುದೇ ಸಂಘ ಅಥವಾ ಸಂಸ್ಥೆಗಳು, ಸಂಘಟಿತವಾಗಿರಲಿ ಅಥವಾ ಇಲ್ಲದಿರಲಿ, ಅವರ
ಲೆಟರ್-ಹೆಡ್‌ಗಳು, ಕರಪತ್ರಗಳು, ಆಸನಗಳು, ಬ್ಯಾಡ್‌ಜ್‌ಗಳು, ಧ್ವಜಗಳು .ವಿಜಿಟಿಂಗ್ ಕಾರ್ಡ್ ಅಥವಾ ಯಾವುದೇ
ರೀತಿಯಲ್ಲಿ ಯಾವುದೇ ಇತರ ಉದ್ದೇಶಕ್ಕಾಗಿ ಲಾಂಛನವನ್ನು ಬಳಸುವಂತಿಲ್ಲ ಎಂದು ನಿರ್ದೇಶಕರು(ಪಂಚಾಯತ್ ರಾಜ್ ಮತ್ತು
ಪದನಿಮಿತ್ತ ಸರ್ಕಾರದ ಉಪಕಾರ್ಯದರ್ಶಿ,
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸುತ್ತೋಲೆ ಹೊರಡಿದಿದ್ದಾರೆ.





About The Author
Discover more from JANADHWANI NEWS
Subscribe to get the latest posts sent to your email.