July 7, 2025
IMG-20250605-WA03131.jpg

ನಾಯಕನಹಟ್ಟಿ

ಭವಿಷ್ಯದಲ್ಲಿ ಉತ್ತಮ ಜೀವನಕ್ಕಾಗಿ ಪರಿಸರವನ್ನು ಬೆಳೆಸಿ, ನಾಶಮಾಡಬೇಡಿ, ಪರಿಸರ ಉಳಿಸಿ ಎಂದು ನಾಯಕನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆ.ಆರ್.ರವಿಕುಮಾರ್ ಮನವಿಮಾಡಿಕೊಂಡರು.

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಛೇರಿ ಆವರಣದಲ್ಲಿ ಗುರುವಾರ ಗಿಡ ನೆಡುವುದರ ಮೂಲಕ ನಂತರ ಮಾತನಾಡಿದ ಅವರು ಯಾರು ಗಿಡಮರಗಳನ್ನು ತುಂಬಾ ಪ್ರೀತಿಸುತ್ತಾರೊ ಆಗಾಗಿ ಯಾವುದೇ ಮನುಷ್ಯನು ಗಿಡ-ಮರಗಳಿಗೆ ಗೌರವ ನೀಡುತ್ತ ಅದರ ಉತ್ತಮ ಆರೈಕೆ ಮಾಡುವನೋ ಅವರು ಸೃಷ್ಠಿಕರ್ತ ಪರಮಾತ್ಮನಿಗೆ ಸಹಾಯಕನಾಗಿದಂತೆ ಎಂಬ ನಂಬಿಕೆ ಇಟ್ಟು ಈ ಮೂಲಕ ಆ ಮನುಷ್ಯನು ಎಲ್ಲಾ ರೀತಿಯ ಸುಖದ ಸಂಪತ್ತನ್ನು ಪಡೆಯುತ್ತಾನೆ ಎಂದರು.

ಪ್ರತಿಯೊಬ್ಬರೂ ಗಿಡ ನೆಟ್ಟು ಪೋಷಿಸಬೇಕು ಪರಿಸರದ ಕಾಳಜಿ ಬಗ್ಗೆ ಹೆಚ್ಚು ಗಮನಹರಿಸುವುದು ಮುಖ್ಯವಾಗಿದೆ. ಪರಿಸರ ಮಾಲಿನ್ಯದಿಂದ ಮನುಷ್ಯ ಅನೇಕ ರೀತಿಯ ಸಮಸ್ಯೆಗಳಿಗೆ ಒಳಗಾಗುತ್ತಿದ್ದು ಅದನ್ನು ತಡೆಯಲು ಪ್ರತಿಯೊಬ್ಬರು ಪರಿಸರದ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು. ನಮ್ಮ ಸುತ್ತಮುತ್ತಲಿನ ಸ್ವಚ್ಛತೆ, ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಹಾಗೆ ಆರೋಗ್ಯದ ಪರಿಸರ ವ್ಯವಸ್ಥೆಗಾಗಿ ಆತ್ಮಸಾಕ್ಷಿಯಾಗಿ ಕೆಲಸ ಮಾಡುವ ಮೂಲಕ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಉಪಸ್ಥಿತರಾದ ಡಿ.ಡಿ.ಸಿ. ಬ್ಯಾಂಕ್ ಮ್ಯಾನೇಜರ್ ವಿನಯ್‌ಕುಮಾರ್, ಮಾಜಿ ಗ್ರಾ.ಪಂ. ಅಧ್ಯಕ್ಷ ತಿಮ್ಮಪ್ಪಯ್ಯನಹಳ್ಳಿ ತಿಪ್ಪೇಸ್ವಾಮಿ ಹಾಗೂ ಗಜ್ಜುಗಾನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು. ಸುರೇಶ್, ಬೋರಣ್ಣ, ಹಾಗೂ ಇನ್ನಿತರರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading