
ನಾಯಕನಹಟ್ಟಿ
ಮನೆಗೊಂದು ಮರ, ಊರಿಗೊಂದು ವನ ಎನ್ನುವ ಅರ್ಥದಲ್ಲಿ ಪ್ರತಿಯೊಂದು ಗ್ರಾಮದಲ್ಲಿ ಪ್ರತಿಯೊಬ್ಬರೂ ಗಿಡ ಬೆಳೆಸುವುದರಿಂದ ಮುಂದಿನ ದಿನಗಳ ಪೀಳೀಗೆಗೆ ಒಳ್ಳೆಯ ವಾತಾವರಣ ಕಲ್ಪಿಸಿದಂತಾಗುತ್ತದೆ ಎಂದು ಪ್ರ‍್ರಾಚಾರ್ಯರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ.ತಿಮ್ಮಣ್ಣ ತಿಳಿಸಿದರು.
ಸಮೀಪದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಎಸ್.ಪಿ.ಎಸ್.ಆರ್. ಪದವಿ ಪೂರ್ವ ಕಾಲೇಜು ರಾಂಪುರ ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಗುರುವಾರ ಸಸಿ ನೆಡಲಾಯಿತು. ಪರಿಸರ ಸಂರಕ್ಷಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ನಾವು ಉಸಿರಾಡುವುದು ಕಷ್ಟವಾಗುತ್ತದೆ ಎಂದು ಉಪಪ್ರಾಚಾರ್ಯರು ಗುರುಸಿದ್ದಪ್ಪ ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಅಶೋಕ್ ರೆಡ್ಡಿ ಓಂಕಾರಪ್ಪ, ಲತಾ, ನಿಂಗಾರೆಡ್ಡಿ, ಜಯಣ್ಣ ಶಿವಮೂರ್ತಿ, ಭೀಮಣ್ಣ, ಶಶಿಧರ, ಉಪನ್ಯಾಸಕರಾದ ಸಿದ್ದಣ್ಣ, ಸುರೇಶ್, ನಾಗೇಶ್, ಉಮೇಶ್, ಶಿಕ್ಷಕ ಶಿವರಾಜ್, ಹಾಗೂ ಶಿಕ್ಷಕರು ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.