December 14, 2025
IMG-20250505-WA0190.jpg

ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಯ ಛಾಯಾ ಪ್ರತಿಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಮೌಲ್ಯಮಾಪನ ಎಡವಟ್ಟು ಬಯಲಾಗಿದೆ.

ಹೌದು ಇದು ಚಳ್ಳಕೆರೆ ನಗರದ ಸೈಯ್ಯಾದ್ರಿ ಆಂಗ್ಲ ಮಾಧ್ಯಮ  ತನುಶ್ರಿಎಸ್.ಎಂ. ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಹಿಂದಿ ಭಾಷೆಯಲ್ಲಿ  20+28 ಒಟ್ಟು 48  ಅಂಕ ನಮೂದಿಸಲಾಗಿದೆ. ಆದರೆ, ಉತ್ತರ ಪತ್ರಿಕೆಯ ಛಾಯಾಪ್ರತಿಯಲ್ಲಿ 20+57= 97 ಅಂಕ ಇರುವುದು ಈಗ ಬಹಿರಂಗಗೊಂಡಿದೆ.ಇಂಗ್ಲಿಷ್ (100), ಹಿಂದಿ (48), ಗಣಿತ (89), ವಿಜ್ಞಾನ (94), ಸಮಾಜ ವಿಜ್ಞಾನ (92) ಮತ್ತು ಕನ್ನಡ ವಿಷಯದಲ್ಲಿ (125) ಅಂಕಗಳನ್ನು ಪಡೆದಿದ್ದ ಹಿಂದಿ ಭಾಷೆಯಲ್ಲಿ 48  ಕಡಿಮೆ ಅಂಕ ಬಂದಿದ್ದಕ್ಕೆ ಬೇಸರಗೊಂಡಿದ್ದಳು. ಪಾಲಕರು, ವಿದ್ಯಾರ್ಥಿನಿಯ ಶಿಕ್ಷಕರ ಸಲಹೆಯಂತೆ ಉತ್ತರ ಪತ್ರಿಕೆಯ ಛಾಯಾಪ್ರತಿ ತರಿಸಿದ್ದಾರೆ. ಛಾಯಾಪ್ರತಿಯಲ್ಲಿ 57 ಅಂಗಳಿದ್ದು ಒಟ್ಟು ಗೂಡಿಸುವಲ್ಲಿ ಕೇವಲ 28 ಅಂಗಳನ್ನು ಮಾತ್ರ   ನಮೂದಿಸಿದ್ದು ಆಂತರಿಕ ಅಂಕ ಸೇರಿಸಿದಲ್ಲಿ ಬಾಲಕಿ ಒಟ್ಟು 97 ಅಂಕ ಪಡೆದಿದ್ದಾಳೆ. ಉತ್ತರ ಪತ್ರಿಕೆಯ 14ಪುಟಗಳಲ್ಲಿ ಸರಿ ಉತ್ತರಕ್ಕೆ ಅಂಕ ನೀಡಿದ ಮೌಲ್ಯಮಾಪಕರು ಆಯಾ ಪುಟದ ಕೊನೆಯಲ್ಲಿ ಅಂಕ ಒಟ್ಟುಗೂಡಿಸಿದ್ದಾರೆ.

ಮೌಲ್ಯಮಾಪಕರ ಉಪಯೋಗಕ್ಕೆ ಇರುವ ಮೊದಲ ಪುಟದಲ್ಲಿ ಪ್ರಶ್ನೆಗಳ ಕ್ರಮ ಸಂಖ್ಯೆ ಮುಂದೆ ಕೆಂಪು ಶಾಹಿಯಲ್ಲಿ ಅಂಕ ಹಾಕಿದ್ದು ಕೊನೆ ಸಾಲಿನಲ್ಲಿ ಒಟ್ಟು 28 ಅಂಕಗಳನ್ನು ಮಾತ್ರ ಅಂಕಟ್ಟಿಗೆ ತೆಗೆದುಕೊಂಡಿದ್ದು ಉಳಿದ ಪುಟಗಳ 49 ಅಂಗಳನ್ನು ಒಟ್ಟುಗೂಡಿಸುವಲ್ಲಿ ಕೈಬಿಟ್ಟು ಮೊದಲ ಪುಟದ 28 ಮಾತ್ರ ಪರಿಗಣಿಸಿ 49 ಅಂಕಗಳನ್ನು ಬಿಟ್ಟು ಒಟ್ಟು ಒಟ್ಟುಗೂಡಿಸಿದ್ದಾರೆ. ಪ್ರಕಟಿತ ಫಲಿತಾಂಶದಲ್ಲಿ ಬಾಲಕಿಗೆ 28 ಅಂಕ ಮಾತ್ರ ದಕ್ಕಿವೆ.ಮೌಲ್ಯಮಾಪನದ ಬಳಿಕ 49 ಅಂಕಗಳು ಹೆಚ್ಚಿಗೆ ಬಂದಿವೆ.

ಹಿಂದಿ ಭಾಷೆಯಲ್ಲಿ ಕಡಿಮೆ ಅಂಕಗಳು ಬಂದಿರುವುದು ಫಲಿತಂಶನೋಡಿ ಬಾಲಕಿ ಬಿಕ್ಕಿ ಬಿಕ್ಕಿ ಹತ್ತುಕಣ್ಣೀರಿಟ್ಟಿದ್ದು ಪರಿಕ್ಷೆ ಬರದದಿನದಂತೆ ನನಗೆ ಇಷ್ಟೇ ಅಂಗಳಗಳು ಬರುತ್ತವೆ ಎಂದು ಪೋಷಕರ ಬಳಿ ಹೇಳಿಕೊಂಡಿದ್ದಳು ಫಲಿ ತಾಂಶದಲ್ಲಿ ಕಡಿಮೆ ಅಂಕಗಳನ್ನು ಕಂಡು ಬಿಕ್ಕಿ ಬಿಕ್ಕಿ ಹತ್ತುಕಣ್ಣೀರಿಟ್ಟಿದ್ದು ಅಳ ಬೇಡ ಮಗಳೇ ಮತ್ತೆ ಮರು ಮೌಲ್ಯಮಾಪನ ಹಾಕಿಸಲು ಉತ್ತರ ಪತ್ರಿಕೆಯ ಛಾಯಪತ್ರಿಕೆಗೆ ಪರೀಕ್ಷಾ ಮಂಡಳಿಗೆ ಅರ್ಜಿ ಸಲ್ಲಿಸಿದಾಗ ಸೋಮವಾರ ಉತ್ತರ ಪತ್ರಿಕಕೆಯ ಛಾಯ ಪತ್ರಿಯನ್ನು ನೋಡಿದಾಗ ಮೌಲ್ಯಮಾಪಕರು ಅಂಕಗಳನ್ನು ಒಟ್ಟುಗೂಡಿಸುವಲ್ಲಿ ಯಡವಟ್ಟು ಮಾಡಿರುವುದು ಬೆಳೆಗೆ ಬಂದಿದೆ ಇದರಿಂದ ವಿದ್ಯಾರ್ಥಿನಿ ಹಾಗೂ ಪೋಷಕರು ನಿಟ್ಟಿಸಿರುವ ಬಿಟ್ಟು ಖುಷಿ ಪಟ್ಟಿದ್ದಾರೆ.

 

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading