
ಹಿರಿಯೂರು :
ಈ ಬಿರುಬೇಸಿಗೆಯ ಬಿಸಿಲಿನಲ್ಲಿ ಕಲ್ವಳ್ಳಿ ಭಾಗದ ಜನರು ಕುಡಿಯುವ ನೀರಿಗೂ ಸಹ ಕಷ್ಟಪಡುವಂತಾಗಿದ್ದು, ತಾಲ್ಲೂಕಿನ ಜೆ ಜೆ ಹಳ್ಳಿ ಹೋಬಳಿಯ ಕಲ್ವಳ್ಳಿ ಭಾಗದ ಉಡುವಳ್ಳಿ ಕೆರೆಗೆ ಶಾಶ್ವತ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಮೂಲಕ ಈ ಭಾಗದ ಜನರ ನೀರಿನ ಸಂಕಷ್ಟವನ್ನು ದೂರಮಾಡಬೇಕು ಎಂಬುದಾಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರಾದ ಎಂ.ರವೀಂದ್ರಪ್ಪ ಹೇಳಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಜೆ ಜೆ ಹಳ್ಳಿ ಹೋಬಳಿಯ ಕಲ್ವಳ್ಳಿ ಭಾಗದ ಉಡುವಳ್ಳಿ ಕೆರೆಗೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ, ಪ್ರತಿಭಟನೆಯನ್ನು ನಡೆಸಿ, ನಂತರ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ರೈತಮುಖಂಡರುಗಳು ಜೆ ಜೆ ಹಳ್ಳಿ ಹೋಬಳಿಯ ಕಲ್ವಳ್ಳಿ ಭಾಗದ ಉಡುವಳ್ಳಿ ಕೆರೆಗೆ ಶಾಶ್ವತ ನೀರಿಗಾಗಿ, ತುಳಸಿ ಕಲ್ಯಾಣ ಮಂಟಪದಿಂದ ತಾಲೂಕು ದಂಡಾಧಿಕಾರಿಗಳ ಕಚೇರಿವರೆಗೆ ಬೃಹತ್ ಕಾಲ್ನಡಿಗೆ ಪ್ರತಿಭಟನೆಯನ್ನು ನಡೆಸಿದರು.
ಈ ಪ್ರತಿಭಟನೆಯಲ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡರಾದ ಎಂ.ರವೀಂದ್ರಪ್ಪ, ಹಾಗೂ ತಾಲ್ಲೂಕು ಅಧ್ಯಕ್ಷರಾದ ಮಸ್ಕಲ್ ಹನುಮಂತರಾಯಪ್ಪ, ರಂಗೇನಹಳ್ಳಿಯ ಜೆ ಡಿ ಎಸ್ ಮುಖಂಡರಾದ ಜಲದಪ್ಪ, ರಾಜಸ್ಥಾನ ಸಮಾಜದ ಮುಖಂಡರಾದ ಎನ್.ಎಸ್.ಜೋದಾ, ಸೇರಿದಂತೆ ಕಲ್ವಳ್ಳಿ ಭಾಗದ ಎಲ್ಲ ರೈತ ಮುಖಂಡರು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.