
ಚಳ್ಳಕೆರೆ ಏ.5.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳಲ್ಲಿ ಲೋಪವೆಸಗದಂತೆ ಕರ್ತವ್ಯ ನಿರ್ವಹಿಸುವಂತೆ ತಾಪಂ ಇಒ ಶಶಿಧರ್ ಕಿವಿ ಮಾತು ಹೇಳಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನರೇಗಾ ಎಂಐಎಸ್ ನಿರ್ವಹಣೆ ಕುರಿತು ಪಿ.ಡಿ.ಓ.ತಾಂತ್ರಿಕ ಸಹಾಯಕರು,ಗ್ರಾ.ಪಂ ಹಾಗೂ ಅ.ಇ ಲಾಖೆಯ ಗಣಕ ಯಂತ್ರ ನಿರ್ವಾಹಕರು , ಭಿ.ಎಫ್.ಟಿ ಗಳಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
2025-26 ನೆ ಸಾಲಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆ ಅನುಷ್ಠಾನ ವೇಳೆ
ಎಮ್‌ಐಎಸ್‌ನಲ್ಲಿ ಕಾಮಗಾರಿ ಸೃಜಿಸುವಾಗ 2025-26 ನೇ ಸಾಲಿನ ಜಿಲ್ಲಾ ಕಾರ್ಮಿಕ ಆಯವ್ಯಯವನ್ನು
ಆನ್‌ಲೈನ್ (end2end2.0 action plan) ಮೂಲಕ ಸಿದ್ಧಪಡಿಸಿ ಅನುಮೋದಿಸಲಾಗಿರುವ ಈ ತಂತ್ರಾಂಶದಲ್ಲಿ
ದಾಖಲಿಸಿರುವ ಕಾಮಗಾರಿ ಸಂಕೇತ ಹಾಗೂ ಹೆಸರಿನಂತೆಯೇ ಎಮ್‌ಐಎಸ್‌ನಲ್ಲಿ ಕಾಮಗಾರಿ ಸೃಜಿಸುವಾಗ
ನಮೂದಿಸುವುದು ಕಡ್ಡಾಯವಾಗಿರುತ್ತದೆ. ಈ ರೀತಿ ನಮೂದಿಸುವುದರಿಂದ ಕಾಲಕಾಲಕ್ಕೆ ದತ್ತಾಂಶಗಳನ್ನು
ಸಂಗ್ರಹಿಸಿ ಹಿಂಬಾಲಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವ ಹಿನ್ನೆಲೆಯಲ್ಲಿ ಅನುಷ್ಠಾನ ಹಂತದ ಎಲ್ಲಾ
ಅಧಿಕಾರಿ ಸಿಬ್ಬಂದಿಗಳು ತಂತ್ರಾಂಶದಲ್ಲಿನ ಮಾಹಿತಿಯಂತೆ ಎಮ್‌ಐಎಸ್ ನಲ್ಲಿ ನಮೂದಿಸಲು ಕ್ರಮ
ವಹಿಸುವುದು. ನರೇಗಾ ಸಾಫ್ಟ್ ರಲ್ಲಿ ಕಾಮಗಾರಿಯ ಹೆಸರನ್ನು ನಮೂದಿಸಲು
ನಿರ್ದಿಷ್ಟ ಮಿತಿ ಇರುವುದರಿಂದ endzend ಕಾಮಗಾರಿ ಸಂಕೇತವನ್ನು ಕಡ್ಡಾಯವಾಗಿ ನಮೂದಿಸುವುದು ಹಾಗೂ
ಕಾಮಗಾರಿ ಹೆಸರನ್ನು ಅರ್ಥಪೂರ್ಣವಾಗಿ ನಮೂದಿಸುವುದು)
end2end2.0 ತಂತ್ರಾಂಶದಲ್ಲಿ ಸೃಜನೆಯಾಗುವ ಕಾಮಗಾರಿ ಕ್ರಿಯಾಯೋಜನೆ ನಮೂನೆಯನ್ನು
ಮುದ್ರಿಸಿಕೊಂಡು ಭೌತಿಕ ಕಡತದಲ್ಲಿ ಆಳವಡಿಸುವುದು.ಹಾಗೆಯೇ ಎಮ್‌ಐಎಸ್‌ನಲ್ಲಿ
ಸೃಜನೆಯಾಗುವ ಕಾಮಗಾರಿ ಸಂಕೇತವನ್ನು endzend2.0 ತಂತ್ರಾಂಶದಲ್ಲಿ ಆಯಾ ಕಾಮಗಾರಿಗೆ
ಇಂದೀಕರಿಸುವುದು. ತದನಂತರ ಅಂದಾಜು ಪಟ್ಟಿ ಸೃಜಿಸುವ ವೇಳೆ ಎಮ್‌ಐಎಸ್‌ನಲ್ಲಿ ಇರುವ ಮಾಹಿತಿ ಹಾಗೂ
end2end2.0 ತಂತ್ರಾಂಶದಲ್ಲಿನ ಮಾಹಿತಿಯನ್ನು ತುಲನೆ ಮಾಡಿ, ಸರಿ ಇದ್ದಲ್ಲಿ ಮಾತ್ರ ಸಂಬಂಧಪಟ್ಟ ಕಾಮಗಾರಿಯ
ಅಂದಾಜು ಪುತಿ ಸೃಜಿಸುವುದು ಇಲ್ಲವಾದಲ್ಲಿ ಸರಿಪಡಿಸಿ ಮರುಸಲ್ಲಿಸುವಂತೆ ಸಂಬಂಧಿಸಿದ
ಗ್ರಾಮಪಂಚಾಯಿತಿ/ಅನುಷ್ಠಾನ ಇಲಾಖೆಗಳಿಗೆ ತಿಳಿಸುವುದು. ಒಂದು ಕಾಮಕಾರಿಗೆ ಗರಿಷ್ಠ 3 ಬಾರಿ ಪರಿಷ್ಕರಣೆ
ಮಾಡಲು ಅವಕಾಶ ಕಲ್ಪಿಸಲಾಗಿದೆ.
ಮೇಲೆ ತಿಳಿಸಿರುವ ಅಂಶಗಳ ಕುರಿತು ತಾಲ್ಲೂಕು ಪಂಚಾಯತಿಯ TMIS ಹಾಗೂ ಜಿಲ್ಲೆಯ ಹಂತದಲ್ಲಿ DMIS
ರವರುಗಳು ಪರಿಶೀಲಿಸುವುದು, ಅಗತ್ಯವಿದ್ದಲ್ಲಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಸರಿಪಡಿಸಲು ಕ್ರಮ
ವಹಿಸುವುದು. ಮೊದಲ ಹಂತದ ಜಿಯೋ ಟ್ಯಾಗ್ ಗಳಿಗೆ ಅನುಮೋದನೆ ನೀಡುವ ವೇಳೆ ಸಂಬಂಧಪಟ್ಟ ಸಹಾಯಕ
ನಿರ್ದೇಶಕರು(ಗ್ರಾ.ಉ) ರವರು ಮೇಲ್ಕಂಡ ಅಂಶಗಳು ಕುರಿತು ಪರಿಶೀಲಿಸಿ, ಸರಿ ಇದ್ದಲ್ಲಿ ಅನುಮೋದಿಸುವುದು. ನರೇಗಾ ಕಾಮಗಾರಿಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆಸೂಚನೆ ನೀಡಿದರು.
ನರೇಗಾ ಸಹಾಯಕ ನಿರ್ದೇಶಕ ಸಂತೋಷ್ .ತಾಲ್ಲೂಕಿನ ಎಲ್ಲಾ ಪಿ.ಡಿ.ಓಗಳು.ಅನುಷ್ಠಾನ ಇಲಾಖೆ ಅಧಿಕಾರಿಗಳು,ತಾಂತ್ರಿಕ ಸಹಾಯಕರು,ಗ್ರಾ.ಪಂ ಹಾಗೂ ಅ.ಇ ಲಾಖೆಯ ಗಣಕ ಯಂತ್ರ ನಿರ್ವಾಹಕರು , ಭಿ.ಎಫ್.ಟಿ ರವರು ತರಬೇತಿಯಲ್ಲಿ ಭಾಗವಹಿಸಿದರೆ.ಎಮ್.ಐ.ಎಸ್ ಸಂಯೋಜಕ ಮಹೇಂದ್ರ. ಹಾಗೂಡಿ .ಐ ಇ ಸಿ ಸಂಯೋಜಕ ಪ್ರವೀಣ್ ಕುಮಾರ್ ತರಭೇತಿ ನೀಡಿದರು.









About The Author
Discover more from JANADHWANI NEWS
Subscribe to get the latest posts sent to your email.