
ಚಳ್ಳಕೆರೆ ಏ.5. ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಎಫೆಕ್ಟ್ ಕೋಟಿ ಕೋಟಿ ಹಣ ಖರ್ಚಾದರೂ ಅಭಿವೃದ್ಧಿ ಅಭಿವೃದ್ಧಿ ಕಾಣದೆ -ನರೇಗಾ ಯೋಜನೆ ಮಧ್ಯವರ್ತಿಗಳಿಗೆ ವರದಾನ….ಎಂಬ ತಲೆಬರಹಡಿ . ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿ ಉದ್ದೇಶದಿಂದ ಅನುಷ್ಠಾನಗೊಂಡ ನರೇಗಾ (ಉದ್ಯೋಗಖಾತ್ರಿ)ಯೋಜನೆ ಇದೀಗ ದಿಕ್ಕು ತಪ್ಪಿದಂತಿದೆ. ಕೂಲಿ ಸೃಷ್ಟಿ ಹೆಸರಲ್ಲಿತಾಲೂಕಿನ ಬಹುತೇಕ ಗ್ರಾ.ಪಂ. ಆಡಳಿತ ವ್ಯಾಪ್ತಿ ಸಲೀಸಾಗಿ ಕೋಟ್ಯಂತರ ರೂಪಾಯಿ ಗೋಲ್ಮಾಲ್ ನಡೆಯುತ್ತಿದೆ.
ಹೌದು ಇದು ಚಳ್ಳಕೆರೆ ತಾಲೂಕಿನ ಚನ್ನಮ್ಮನಾಗತಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಚಳ್ಳಕೆರೆ ಇಲಾಖೆಯಿಂದ 2024-25 ನೇ ಸಾಲಿನ ನರೇಗಾ ಯೋಜನೆ ಉಲ್ಲಂಘಿಸಿ ರಸ್ತೆ ಅಭಿವೃದ್ಧಿಗೆ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದು ಬೆಳಗ್ಗೆ ಹಾಗೂ ಸಂಜೆ ಎರಡು ಬಾರಿ ಮಾತ್ರ ಕೂಲಿ ಕಾರ್ಮಿಕಾರ್ಮಿಕರಲ್ಲದವರನ್ನು ಕರೆದುಕೊಂಡು ಹೋಗಿ ಎನ್ ಎಂ ಎಂಎಸ್ ಹಾಜರಾತಿ ಮಾಡುತ್ತಿದ್ದುದರಿಂದ ಪ್ರತಿನಿತ್ಯ ಕೂಲಿ ಕಾರ್ಮಿಕರ ಹಾಜರಾತಿ ಎಂಟ್ರಿ ಮಾಡುತ್ತಿದ್ದರೂ ಕಾಮಗಾರಿ ಮಾತ್ರ ನಡೆಯುತ್ತಿಲ್ಲ.ಎಂಬ ಸಾರ್ವಜನಿಕರ ಆರೋಪದ ಮೇರೆಗೆ ಜನಧ್ವನಿ ಡಿಜಿಟಲ್ ಮೀಡಿಯಾ ವರದಿ ಬಿತ್ತರಿಸಿದ ಬೆನ್ನಲ್ಲೇ ನರೇಗಾ ಸಹಾಯಕ ನಿರ್ದೇಶಕ ಸಂತೋಷ್ ಹಾಗೂ ನರೇಗಾ ತಾಂತ್ರಿಕ ಅಧಿಕಾರಿ ದಿನೇಶ್ ಚನ್ನಮ್ಮನಾಗತಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗಳನ್ನು ಮಾಡದೆ ಕೂಲಿ ಹಣ ಪಾವತಿಸಿರುವುದು ಕಂಡು ಬಂದಿದ್ದು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಪವಿಭಾಗದ ಎಇಇ ರಾಮಚಂದ್ರಪ್ಪ ಸಹ ಕಾಮಗಾರಿ ಮಾಡದೆ .ಎಂ.ಆರ್ ತೆಗೆದಿರುವುದನ್ನು ಜೀರೋ ಮಾಡಲಾಗಿದೆ ಎಂದು ಕಾಮಗಾರಿ ಕೋಡ್ ಸಮೇತ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿರುವುದು ಜನಧ್ವನಿ ಡಿಜಿಟಲ್ ಮೀಡಿಯಾ ಗೆ ಲಭ್ಯವಾಗಿದೆ.












