ಮೈಸೂರು: ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘದ ವತಿಯಿಂದ ಮಾ.9ರ ಭಾನುವಾರ ಮೈಸೂರು ನಗರದ ಕರ್ನಾಟಕ ಕಲಾಮಂದಿರದಲ್ಲಿ 29ನೇ ವಾರ್ಷಿಕ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರುಗಳಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಸಂಘದ ಪ್ರಚಾರ ಕಾರ್ಯದರ್ಶಿ ಕೆ.ಟಿ.ಮೋಹನ್ ಕುಮಾರ್ ಹೇಳಿದರು.
ಅವರು ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹೊಸದುರ್ಗ ಭಗೀರಥ ಪೀಠದ ಶ್ರೀ ಡಾ.ಪುರುಷೋತ್ತಮಾನಂದ ಪುರಿ ಮಹಾ ಸ್ವಾಮೀಜಿ ಅವರು ವಹಿಸಲಿದ್ದು, ಮಳವಳ್ಳಿ ತಾಲೂಕಿನ ಅಯ್ಯನ ಸರಗೂರು ಮಠದ ಶ್ರೀ ಮಹದೇವ ಸ್ವಾಮೀಜಿಗಳು ಸಾನಿಧ್ಯವನ್ನು ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಎಂ ಎಸ್ ಐ ಎಲ್ ಅಧ್ಯಕ್ಷರು ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ನೆರವೇರಿಸುವರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ
ಎಂ.ಸೋಮಣ್ಣ ಅವರು ವಹಿಸಲಿದ್ದಾರೆ.
ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರು ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿಗಳಾದ
ಡಾ.ಕೆ.ಎಸ್.ರವೀಂದ್ರನಾಥ್ ಅವರಿಗೆ ಶ್ರೀ ಭಗೀರಥ ವೈದ್ಯ ವಿಭೂಷಣ ಪ್ರತಿಭಾರತ್ನ ಪ್ರಶಸ್ತಿ ಹಾಗೂ ಚಾಮರಾಜನಗರ ಜಿಲ್ಲೆಯ
ದೊಡ್ಡಮೋಳೆ ಗ್ರಾಮದ ತಂಬೂರಿ ಶೈಲಿಯ ನೀಲಗಾರರು ಮತ್ತು ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತರಾದ ದೊಡ್ಡಗವಿಬಸಪ್ಪ ಅವರಿಗೆ ಶ್ರೀ ಭಗೀರಥ ಕಲಾ ವಿಭೂಷಣ ಪ್ರಶಸ್ತಿಯನ್ನು ವಿಶೇಷವಾಗಿ ನೀಡಿ ಗೌರವಿಸಲಾಗುವುದು.
ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಮಾರ್ಗದರ್ಶನವನ್ನು ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಲಕ್ಕಪ್ಪ ಹನುಮಣ್ಣನವರ್ ನೀಡಲಿದ್ದಾರೆ ಎಂದರು.
ಸಮಾರಂಭದಲ್ಲಿ ಶ್ರೀ ಭಗೀರಥ ಶೈಕ್ಷಣಿಕ ಮತ್ತು ಚಾರಿಟೆಬಲ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ
ಪಿ.ಶಿವಶಂಕರ್, ಉದ್ಯಮಿಗಳಾದ ಎಂ.ಎಸ್.ಲೋಕೇಶ್,
ಎನ್.ಶ್ರೀಧರ್, ಎ.ಜಿ.ನಾಗರಾಜು, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಪ್ಪಾರ ಸಂಘದ ಗೌರವಾಧ್ಯಕ್ಷ ಹನುಮಂತಶೆಟ್ಟಿ, ಕಾರ್ಯಾಧ್ಯಕ್ಷ
ಪಿ.ಎಸ್.ವಿಷಕಂಠಯ್ಯ, ಗುತ್ತಿಗೆದಾರ ಗಂಗಯ್ಯ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ ಕುಮಾರ್, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ ಮಾಜಿ ಅಧ್ಯಕ್ಷ ನೂರೊಂದುಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಲತಾ ಸಿದ್ದಶೆಟ್ಟಿ,
ಸಿ.ಎ.ಮಹದೇವಶೆಟ್ಟಿ, ಮಾಜಿ ಉಪಮೇಯರ್ ಡಾ.ಜಿ.ರೂಪಯೋಗೇಶ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ವೈ.ಜಿ.ಯೋಗೇಶ್, ಸಿದ್ದರಾಜು, ಸುಚಿತ್ರ ವಿನೋದ್, ಉಪ್ಪಾರ ಸಮಾಜದ ಹಿರಿಯ ಮುಖಂಡ ಮಂಗಲ ಶಿವಕುಮಾರ್, ನಿವೃತ್ತ ಇಂಜಿನಿಯರ್ ಕೆ.ಸ್ವಾಮಿನಾಥ್, ನಗರ ಪಾಲಿಕೆ ಮಾಜಿ ಸದಸ್ಯೆ ಆಶಾ ಲಕ್ಷ್ಮಿ ನಾರಾಯಣ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚಿಕ್ಕಮಹದೇವ, ಉದ್ಯಮಿ ಎಂ.ಕೃಷ್ಣಸ್ವಾಮಿ, ವಲಯ ಅರಣ್ಯಾಧಿಕಾರಿ ಸುಂದರ್, ಭಗೀರಥ ವೃಕ್ಷಮಿತ್ರ ಪ್ರಶಸ್ತಿ ಪುರಸ್ಕೃತ ಸಿ.ಎಂ.ವೆಂಕಟೇಶ್, ನಿವೃತ್ತ ಪ್ರಾಂಶುಪಾಲ ಬಸವಣ್ಣ, ಚಾಮರಾಜನಗರ ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ
ಎಂ.ಜಯಕುಮಾರ್, ಕೊಳ್ಳೇಗಾಲ ಹಾಗೂ ಹನೂರು ತಾಲೂಕು ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಪ್ರಿಯಾಶಂಕರ್, ಚಾಮರಾಜನಗರ ತಾಲೂಕು ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಆರ್.ಸೋಮಣ್ಣ, ಯಳಂದೂರು ತಾಲೂಕು ಉಪ್ಪಾರ ನೌಕರರ ಸಂಘದ ಅಧ್ಯಕ್ಷ ರೇಚಣ್ಣ, ಪಿರಿಯಾಪಟ್ಟಣ ತಾಲೂಕು ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಸಿ.ಎಲ್.ಸೋಮಶೇಖರ್,
ಕೆ.ಆರ್.ನಗರ ತಾಲ್ಲೂಕು ಉಪ್ಪಾರ ನೌಕರರ ಸಂಘದ ಅಧ್ಯಕ್ಷ
ಹೆಚ್.ಟಿ.ಪಾಂಡು, ನಂಜನಗೂಡು ತಾಲೂಕು ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಮಹದೇವ ಪ್ರಸಾದ್ ಸೇರಿದಂತೆ ಹಲವು ಗಣ್ಯರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಶ್ರೀ ಭಗೀರಥ ವಿದ್ಯಾಶ್ರೀ ಪ್ರಶಸ್ತಿಯನ್ನು ಎಸ್ ಎಸ್ ಎಲ್ ಸಿ ವಿಭಾಗದಿಂದ
ಎನ್.ಮಹದೇವಸ್ವಾಮಿ (ಯಳಂದೂರು),
ಸಿ.ಎಸ್. ಸಂಜೀವಿನಿ (ಚಾಮರಾಜನಗರ), ಎಚ್.ಆರ್. ಶೀತಲ್ (ಹರದನಹಳ್ಳಿ), ಸಿ ಬಿ ಎಸ್ ಸಿ ವಿಭಾಗದ ಮೌಲ್ಯ ಎಮ್.ಶೆಟ್ಟಿ (ಅಮಚವಾಡಿ) ಅವರುಗಳಿಗೆ ದ್ವಿತೀಯ ಪಿಯುಸಿ ವಿಭಾಗದ ಮಹಾದೇವಿ (ಕಲಾ ವಿಭಾಗ – ನಿಟ್ರೆ ಗ್ರಾಮ), ಎಸ್.ಭವಾನಿ (ವಾಣಿಜ್ಯ ವಿಭಾಗ – ಯರಗಂಬಳ್ಳಿ), ಎಸ್.ಪವನ್ ರಾಜ್ (ವಿಜ್ಞಾನ ವಿಭಾಗ – ದುಗ್ಗಟ್ಟಿ) ರವರುಗಳಿಗೆ ಪ್ರಧಾನ ಮಾಡಲಾಗುವುದು.
ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳಲ್ಲಿ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳಲ್ಲಿ 2024ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 85ಕ್ಕಿಂತ ಹೆಚ್ಚು ಅಂಕ ಗಳಿಸಿರುವ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುವುದು.
ಶ್ರೀ ಭಗೀರಥ ಪ್ರತಿಭಾರತ್ನ ಪ್ರಶಸ್ತಿಯನ್ನು
ಡಾ.ಪಿ.ಸಿದ್ದರಾಮು, ಡಾ.ನರೇಂದ್ರ ಕುಮಾರ್, ದೀಪಕ್, ಡಾ.ಪಿ.ದೀಪ, ಕು.ಎಂ.ಎಂ.ಸುಷ್ಮಶ್ರೀ,
ಕು.ಎಸ್.ರೇಖಾ ರವರುಗಳಿಗೆ ನೀಡಿ ಗೌರವಿಸಲಾಗುವುದು.
ವಿಶೇಷ ಚೇತನ ಶ್ರೀ ಭಗೀರಥ ಕ್ರೀಡಾ ರತ್ನ ಪ್ರಶಸ್ತಿಯನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಕೊಳ್ಳೇಗಾಲ ತಾಲೂಕಿನ ಕ್ರೀಡಾಪಟುಗಳಾದ ಪ್ರತಾಪ್, ಜಗನ್, ಜನಾರ್ಧನ್ ಅವರುಗಳಿಗೆ ನೀಡಿ ಸನ್ಮಾನಿಸಲಾಗುವುದು.
ಶ್ರೀ ಭಗೀರಥ ವಿಶಿಷ್ಟ ಸೇವಾ ರತ್ನ ಪ್ರಶಸ್ತಿಯನ್ನು ಹರದನಹಳ್ಳಿಯ ಸಿವಿಲ್ ಇಂಜಿನಿಯರ್ ಹೆಚ್.ಎನ್.ರಮೇಶ್, ಕೆಪಿಟಿಸಿಎಲ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಕೆ.ಆರ್.ನಗರ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸೂತಿ ತಜ್ಞ ವೈದ್ಯೆ ಡಾ.ಕೆ.ಆರ್.ದಿವ್ಯತಾ, ಕಲಾವಿದ ಆರ್.ಮಂಜುನಾಥ್ ಅವರುಗಳಿಗೆ ಪ್ರಧಾನ ಮಾಡಲಾಗುವುದು.
ಸಮಾರಂಭದಲ್ಲಿ ಶ್ರೀ ಮಲೆ ಮಹದೇಶ್ವರ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಮರಿಸ್ವಾಮಿ, ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ದರಾಜು, ಕೊಳ್ಳೇಗಾಲ ತಾಲೂಕಿನ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಾಜೇಂದ್ರ, ಚಾಮರಾಜನಗರದ ಪಿ ಎಲ್ ಡಿ ಬ್ಯಾಂಕಿನ ನಾಮನಿರ್ದೇಶನ ನಿರ್ದೇಶಕ ಗೋವಿಂದಶೆಟ್ಟಿ, ಸರಗೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ
ಎಸ್.ಎಂ.ಸೋಮಶೇಖರ್, ನಂಜನಗೂಡು ತಾಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷೆ
ಸಿ.ವಿಜಯಕುಮಾರಿ, ದಾನಿಗಳಾದ
ಬಿ.ಸ್ವಾಮಿ, ಸಿ.ಎಚ್.ಶಂಕರ್, ಸಿದ್ದಪ್ಪ, ಬಡ್ತಿ ಹೊಂದಿದ ನೌಕರರಾದ ಎಸ್.ಬಸವಣ್ಣ (ಉಪ ಆಯುಕ್ತರು ವಾಣಿಜ್ಯ ತೆರಿಗೆ ಇಲಾಖೆ – ಬೆಂಗಳೂರು), ಹನುಮಶೆಟ್ಟಿ (ಕ್ಷೇತ್ರ ಶಿಕ್ಷಣಾಧಿಕಾರಿ – ಚಾಮರಾಜನಗರ), ಹೆಡ್ ಕಾನ್ಸ್ ಟೇಬಲ್ ಗಳಾದ ರಮೇಶ್ (ಕೋಗಿಲೂರು) , ಶಿವಪ್ಪ (ಹರದನಹಳ್ಳಿ), ಕೆ.ಎಸ್.ಪ್ರಕಾಶ್ (ಕಾಟ್ನಾಳು), ಕೆ.ಪಿ.ಶಿವಕುಮಾರ್ ( ಅಬಕಾರಿ ಇಲಾಖೆ – ಕಾಟ್ನಾಳು), ಸಾಕಮ್ಮ (ಎಎಸ್ಐ – ಮೈಸೂರು), ವಾಣಿಜ್ಯ ತೆರಿಗೆ ಇಲಾಖೆಯ
ಕೆ.ಜೆ.ಉಮೇಶ್ (ಕಾಟ್ನಾಳು), ನಾಗರಾಜು(ಹೆಮ್ಮರಗಾಲ), ಪೂರ್ಣಿಮಾ (ಅರದೂರು), ಸುಪ್ರಿಯ (ಕೊಳ್ಳೇಗಾಲ), ರಾಮು (ಮಂಗಳೂರು), ನಿವೃತ್ತಿ ಹೊಂದಿರುವ ನೌಕರರಾದ ಮಧುವನಹಳ್ಳಿಯ ಲಕ್ಷ್ಮಣ, ನಂಜಶೆಟ್ಟಿ, ಸೋಮಣ್ಣ, ಹರದನಹಳ್ಳಿಯ ಕೋಟೆಗೌಡ ಮತ್ತು ಸುರೇಶ್, ಕಾಟ್ನಾಳಿನ ಪುಟ್ಟಸ್ವಾಮಿ, ದೊಡ್ಡಬಾಗಿಲು ಮೋಳೆಯ ಮಹದೇವಸ್ವಾಮಿ ಸೇರಿದಂತೆ ಹಲವರನ್ನು ಸನ್ಮಾನಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಕೋಟಾದಡಿ ಎಂ ಬಿ ಬಿ ಎಸ್ ಗೆ ಪ್ರವೇಶಾತಿ ಪಡೆದಿರುವ
ಆರ್.ನೂತನ್ ಪ್ರಸಾದ್,
ಸಿ.ಪುನೀತ್ ರಾಜ್, ಆರ್.ಶ್ರೀವಲ್ಲಿ, ಎಸ್.ರೋಹನ್, ಆರ್.ಅಭಯ್ ಕೃಷ್ಣ, ಕೆ.ಭರತ್ ಅವರುಗಳನ್ನು ಅಭಿನಂದಿಸಲಾಗುವುದು.
ಮೈಸೂರು ನಗರದಲ್ಲಿನ ಉಪ್ಪಾರ ವಿದ್ಯಾರ್ಥಿ ನಿಲಯದ ವಿಜೇತ ಕ್ರೀಡಾ ತಂಡಗಳಿಗೆ ಶ್ರೀ ಭಗೀರಥ ಕ್ರಿಕೆಟ್ ಟ್ರೋಫಿ ಪ್ರಶಸ್ತಿ ಪ್ರಧಾನವನ್ನು ಮಾಡಲಾಗುವುದು.
ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವ ಸಲಹೆಗಾರರಾದ ಜವರಶೆಟ್ಟಿ,
ಡಾ.ಎಂ.ಗೋವಿಂದರಾಜು, ಖಜಾಂಚಿ ಫಿಲಂ ಮಹದೇವಶೆಟ್ಟಿ, ಗೌರವಾಧ್ಯಕ್ಷ ಟಿ.ಆರ್.ಶಿವರಾಜ್, ಕಾರ್ಯದರ್ಶಿ ಹೆಮ್ಮನಹಳ್ಳಿ
ಕೆ.ನಾಗೇಶ್ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.