ವರದಿ: ಶಿವಮೂರ್ತಿ ನಾಯಕನಹಟ್ಟಿ
ನಾಯಕನಹಟ್ಟಿ: ಉಪನಿರ್ದೆಶಕರು, ಪಶುಪಾಲನಾ ಇಲಾಖೆ, ಚಿತ್ರದುರ್ಗ,
ಸಹಾಯಕ ನಿರ್ದೆಶಕರು, ಪಶು ಆಸ್ಪತ್ರೆ, ಚಳ್ಳಕೆರೆ.
ಉಪನಿರ್ದೆಶಕರು, ಕುರಿ ಸಂವರ್ಧನ ಮತ್ತು ತರಬೇತಿ ಕೇಂದ್ರ, ಕುಧಾಪುರ, ಚಳ್ಳಕೆರೆ ತಾಲ್ಲೂಕು.ಪಶು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ಪಶು ಆಸ್ಪತ್ರೆ, ನಾಯಕನಹಟ್ಟಿ ಇವರ ಸಂಯುತ್ತಾ ಆಶ್ರಯದಲ್ಲಿ ವಸ್ತು ಪ್ರದರ್ಶನ ಮತ್ತು ಉತ್ತಮ ಜೋಡಿ ಹೋರಿ/ಜೋಡಿ ಎತ್ತುಗಳ ಪ್ರದರ್ಶನ ಮತ್ತು ಸ್ಪರ್ಧೆ ಏರ್ಪಡಿಸಲಾಗಿದೆ.



ನಾಯಕನಹಟ್ಟಿಯಲ್ಲಿ ದಿನಾಂಕ:16-3-2025 ರಂದು ನಡೆಯುವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವದ ಅಂಗವಾಗಿ ಪಶುಪಾಲನಾ ಇಲಾಖೆಯು ವಸ್ತು ಪ್ರದರ್ಶನ ಮತ್ತು ಉತ್ತಮ ಜೋಡಿ ಹೋರಿ/ಜೋಡಿ ಎತ್ತುಗಳ ಪ್ರದರ್ಶನ ಮತ್ತು ಸ್ಪರ್ಧೆ ಏರ್ಪಡಿಸಲಾಗಿದೆ. ಜಾತ್ರೆಗೆ ಬರುವ ಸಮಸ್ತ ಜನರು ಇವುಗಳ ಪ್ರಯೋಜನ ಪಡೆಯಲು ಅವಕಾಶ ಹೊಂದಿರುತ್ತಾರೆ.
ವಸ್ತು ಪ್ರದರ್ಶನದ ವಿಶೇಷತೆಗಳು
ದಿನಾಂಕ : 15-3-2025 ರ ಬೆಳಿಗ್ಗೆ 8-00 ಗಂಟೆಯಿಂದ ಪ್ರಾರಂಭಗೊಂಡು ದಿನಾಂಕ : 16-3-2025 ನೇ ಸಂಜೆ 6-00 ಗಂಟೆಗೆ ಮುಕ್ತಾಯವಾಗುವುದು. ಈ ಪ್ರದರ್ಶನದಲ್ಲಿ ಪಶುಪಲನಾ ಇಲಾಖೆಯ ಚಟುವಟಿಕೆಗಳು,
ಉತ್ತಮ ಹೈನು ರಾಸುಗಳು, ಕೋಳಿ ತಳಿಗಳು, ಮೇವಿನ ತಳಿಗಳು,ಇತ್ಯಾದಿ ಚಟುವಟಿಕೆಗಳನ್ನು ಬಿಂಬಿಸುವ ಮಾದರಿಗಳನ್ನು ಪ್ರದರ್ಶನದಲ್ಲಿ ಕಾಣಬಹುದು.
-: ಉತ್ತಮ ಜೋಡಿ ಹೋರಿ/ಜೋಡಿ ಎತ್ತುಗಳ ಪ್ರದರ್ಶನ:-
ಈ ಕಾರ್ಯಕ್ರಮವು ದಿನಾಂಕ : 16-3-2025 ರಂದು ನಡೆಯುವ ದೊಡ್ಡ ರಥೋತ್ಸವದ ಅಂಗವಾಗಿ ಏರ್ಪಡಿಸಿರುತ್ತದೆ. ಜಾತ್ರೆಗೆ ಬರುವ
ಸಮಸ್ತ ಎತ್ತಿನಗಾಡಿಯವರು ಹಾಗೂ ರೈತಭಾಂದವರು ತಮ್ಮ ಜೋಡಿ ಹೋರಿ ಆಥವಾ ಎತ್ತುಗಳೊಂದಿಗೆ ಪ್ರದರ್ಶನದಲ್ಲಿ
ಭಾಗವಹಿಸಿ, ಸ್ಪರ್ಧೆಯ ಮೂಲಕ ಬಹುಮಾನ ಗೆಲ್ಲುವ ಅವಕಾಶ ಹೊಂದಿರುತ್ತಾರೆ.ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಲು
ಇಚ್ಚಿಸುವ ಹೋರಿಗಳ ಮಾಲೀಕರು ತಮ್ಮರಾಸುಗಳೊಂದಿಗೆ ದಿನಾಂಕ : 16-3-2025 ರಂದು ಬೆಳಿಗ್ಗೆ 8-00 ಗಂಟೆಗೆ ಹಾಜರಾಗಬೇಕು.
ವಿ.ಸೂ.:ಒಂದು ಹೋರಿ ಅಥವಾ ಒಂಟಿ ಎತ್ತಿನ ಪ್ರದರ್ಶನಕ್ಕೆ ಸ್ಪರ್ಧೆಯಲ್ಲಿ ಅವಕಾಶ ಇಲ್ಲ.
ಸ್ಥಳ: ಪಶು ಅಸ್ಪತ್ರೆಅವರಣದ ಮುಂಭಾಗ, ನಾಯಕನಹಟ್ಟಿ
ಸ್ಪರ್ಧೆಯಲ್ಲಿ ಭಾಗವಹಿಸುವ ರಾಸುಗಳ ಪೈಕಿ ಉತ್ತಮ ಜೋಡಿಗಳನ್ನು ತಜ್ಞತೀರ್ಪುಗಾರರಿಂದ ಆಯ್ಕೆ ಮಾಡಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಬಹುಮಾನ ನೀಡಲಾಗುವುದು.
ಸಮಸ್ತ ಭಕ್ತಾಧಿಗಳು ರೈತರು, ಜಾನುವಾರು ಮಾಲೀಕರು ಈ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಲು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದೆ.
About The Author
Discover more from JANADHWANI NEWS
Subscribe to get the latest posts sent to your email.