December 14, 2025
IMG-20250305-WA0164.jpg

ನಾಯಕನಹಟ್ಟಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ ಶ್ರೀ ಕಲಾನಿಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ನಾಯಕನಹಟ್ಟಿ ಇವರ ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕ ಪ್ರದರ್ಶಿಸುವ ಸಲುವಾಗಿ ಪಟ್ಟಣದ ಎ.ಕೆ. ಕಾಲೋನಿಯಲ್ಲಿ ಬೀದಿ ನಾಟಕ ಪ್ರದರ್ಶನ ಮಾಡಲಾಯಿತು.

ಶ್ರೀ ಕಲಾ ನಿಧಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಡಿ ರಾಜಣ್ಣ ಮಲ್ಲೂರಹಳ್ಳಿ ಮಾತನಾಡಿ ಮಕ್ಕಳ ಬೆಳವಣಿಗೆಗೆ ಉತ್ತಮ ಪೌಷ್ಟಿಕ ಆಹಾರ ನೀಡುವುದರ ಜೊತೆಗೆ ಅವರ ಆರೋಗ್ಯ ಸಂರಕ್ಷಣೆ ಮಾಡಬೇಕಿದೆ. ಕ್ಷಯರೋಗ ಹಾಗೂ ಕುಷ್ಟರೋಗಗಳ ಬಗ್ಗೆ ಸಾರ್ವಜನಿಕರು ಹೆಚ್ಚು ಜಾಗೃತೆ ವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಅಕ್ಕಿ ಜ್ವರ ರಾಜ್ಯದಲ್ಲಿ ಕಾಣಿಸಿಕೊಂಡಿದೆ. ಕೆಲವು ವರ್ಷಗಳ ಹಿಂದೆ ಕರೋನ ವೈರಸ್ ನಿಂದ ಸಾರ್ವಜನಿಕರಿಗೆ ತೊಂದರೆಗಳಾಗಿದ್ದವು. ಹಕ್ಕಿ ಜ್ವರದ ಬಗ್ಗೆ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಅನುಸರಿಸಿ ಜಾಗೃತರಾಗಬೇಕಿದೆ.

ಸರ್ಕಾರ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಂತಹ ಬೀದಿ ನಾಟಕಗಳ ಮೂಲಕ ಪ್ರದರ್ಶನವನ್ನ ಮಾಡಿ ಜಾಗೃತಿ ಮೂಡಿಸಲಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ 18 ವರ್ಷದೊಳಗೆ ತಮ್ಮ ಮಕ್ಕಳಿಗೆ ಬಾಲ್ಯ ವಿವಾಹವನ್ನು ಮಾಡಬಾರದು ಮತ್ತು ಬಾಲ್ಯ ವಿವಾಹವನ್ನು ತಡೆಯಬೇಕು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಇಂದು ಹೋಬಳಿಯ ಗೌಡಗೆರೆ, ಮಲ್ಲೂರಹಳ್ಳಿ, ಜಾಗನೂರಹಟ್ಟಿ, ಮುಷ್ಟಲಗುಮ್ಮಿ, ಅಬ್ಬೇನಹಳ್ಳಿ, ಗ್ರಾಮಗಳಲ್ಲಿ ಬೀದಿ ನಾಟಕಗಳ ಮೂಲಕ ಪ್ರದರ್ಶನವನ್ನ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಡಾ. ವಾಸುದೇವ ಮೇಟಿ ಬಣದ ಹೋಬಳಿ ಅಧ್ಯಕ್ಷ ಡಾ. ನಾಗರಾಜ್ ಮೀಸೆ, ನಿವೃತ್ತ ಪಿಡಿಒ ಎ.ಕೆ. ತಿಪ್ಪೇಸ್ವಾಮಿ, ಶಿಕ್ಷಕ ನಿಂಗಪ್ಪ, ಅಂಗನವಾಡಿ ಶಿಕ್ಷಕಿ ಲತಾಬಾಯಿ, ಆಶಾ ಕಾರ್ಯಕರ್ತೆರಾದ ರತ್ನಮ್ಮ, ಪರಂಜ್ಯೋತಿ, ಶ್ರೀ ಕಲಾನಿಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಲಾತಂಡದ ಕಲಾವಿದರಾದ ಆಶಾ ಹೊನ್ನಳ್ಳಿ, ದೇವಿರಮ್ಮ ತಿಮ್ಮನಹಳ್ಳಿ, ಹಂಪಣ್ಣ ಮಲ್ಲೂರಹಳ್ಳಿ, ಗ್ರಾಮಸ್ಥರು ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading