December 14, 2025
IMG20250305120230_01.jpg

ಚಳ್ಳಕೆರೆ ಮಾ.5.

ಗ್ರಾಮದಲ್ಲಿ ಪ್ರತಿ ಬಾರಿಯೂ ಜನರು ಪಡಿತರ ಪಡೆದುಕೊಳ್ಳಲು ನ್ಯಾಯಬೆಲೆ ಅಂಗಡಿಯ ಮುಂದೆ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ದೂರುಗಳು ಬರುತ್ತಿದ್ದ ಪಡಿತರ ವಿತರಣೆಯಲ್ಲಿ ಲೋಪ ಕಂಡು ಬಂದರೆ ಕ್ರಮಕೈಗೊಳ್ಳುವುದಾಗಿ ತಾಪಂ ಇಒ ಶಶಿಧರ್ ಹೇಳಿದರು.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕು ಗ್ಯಾರೆಂಟಿ ಅನುಷ್ಡಾನ‌ಸಮಿತಿ‌ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಅಧ್ಯಕ್ಷತೆತಲ್ಲಿ ನ್ಯಾಯಬೆಲೆ ಅಂಗಡಿ ಮಾಲಿಕರಿಗೆ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೆಲವೇ ನ್ಯಾಯಬೆಲೆ ಅಂಗಡಿ ಮಾಲಿಕರಿಂದ ಇಡೀ ತಾಲೂಕಿನ ಮರ್ಯಾದೆ ಹೋಗುತ್ತಿದ್ದು ಪಡಿತರ ವಿತರಣೆ ನಿಯಮ ಪಾಲಿಸಿ ವಿತರಣೆ ಮಾಡ ಬೇಕು. ಪಡಿತರ ವಿತರಣೆ ದಿನಾಂಕ. ಫಲಾನುಭವಿಗೆ ವಿತರಣೆ ಮಾಡುವ ಪಡಿತರ ಬಗ್ಗೆ ನಾಮಫಲಕದಲ್ಲಿ ಕಾಣುವಂತೆ ಕಡ್ಡಾಯವಾಗಿ ಹಾಕ ಬೇಕು ಎಂದರು.
ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಮಾತನಾಡಿ ಬಯೋಮೆಟ್ರಿಕ್ ಪಡೆದರೂ ಸಹ ಎರಡು ಮೂರು ತಿಂಗಳ ಅಕ್ಕಿ ವಿತರಣೆ ಮಾಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು ಅಕ್ಕಿ ಸಿಗುವುದಿಲ್ಲ ಎಂಬ ಗೊಂದಲದಲ್ಲಿ ಕೂಲಿ ನಾಲಿ ಬಿಟ್ಟು ಬಯೋಮೆಟ್ರಿಕ್ ಪಡೆಯಲು ಒಂದು ದಿನ ಮತ್ತೊಂದು ಅಕ್ಕಿ ಪಡೆಯಲು ಎರಡು ದಿನಗಟ್ಟೆಲೆ ನೂಕು ನುಗ್ಗಲಿನಲ್ಲಿ ನಿಲ್ಲುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತಿವೆ ಮತ್ತೆ ಇಂತಹ ದೂರುಗಳ ಬರಂತೆ ಪಡಿತರ ವಿತರಣೆ ಮಾಡಬೇಕು ಎಂದರು.
ತಾಪಂ ಇಒ ಶಶಿಧರ್ ಮಾತನಾಡಿ ಬಯೋಮೆಟ್ರಿಕ್ ಪಡೆದ ದಿನವೇ ಅಕ್ಕಿ ಕೊಡಿ ಎರಡು ದಿನ ಕಾಯಿಸ ಬೇಡಿ ಎಂದು ಹೇಳಿದರು.

ನ್ಯಾಯಬೆಲೆ ಅಂಗಡಿ ಮಾಲಿಕ ಚನ್ನಿಗರಾಮಯ್ಯ ಮಾತನಾಡಿ ಒಟಿಪಿ ಪದ್ದತಿ ತೆಗೆದು ಹಾಕಿರುವುದರಿಂದ ಕುಟುಂಬ ಸಮೇತ ವಲಸೆ ಹೋಗಿರುತ್ತಸರೆ 65 ವರ್ಷ ಮೇಲ್ಪಟ್ಟ ವೃದ್ದರ ಹೆಬ್ಬೆಟ್ಟು ಬರುವುದಿಲ್ಲ ಒಟಿಪಿ ವ್ಯವಸ್ಥೆಗೆ ಸರಕಾರ ಗಮನ ಸೆಳೆಯ ಬೇಕು ಎಂದರು.
ತಾಲೂಕಿನ ಸುಮಾರು 125 ಪಡಿತರ ಅಂಗಡಿ ಮಾಲಿಕರಲ್ಲಿ ಸುಮಾರು60 ಜನ ಮಾಲಿಕರು ಸಭೆಗೆ ಗೈರಾಗಿದ್ದು ಗೈರಾದವರಲ್ಲಿ ಪಡಿತರ ವಿತರಣೆ ಮಾಡುವಲ್ಲಿ ಲೋಪ ಎದ್ದು ಕಾಣಿತ್ತಿದೆ ಮುಂದೆ ಸಭೆಯಲ್ಲಿ ಗೈರಾದರೆ ಕ್ರಮ ಕೈಗೊಳ್ಳಲಾಗುವುದು.
ಬಹುತೇಕ ಅಂಗಡಿ ಮಾಲಿಕರಲ್ಲಿ ಹೆಂಡತಿಯರ ಪರವಾಗಿ ಗಂಡಂದಿರು. ಮಕ್ಕಳು. ಕಂಪ್ಯೂಟರ್ ಆಪರೇಟರ್. ಕಾರ್ಯದರ್ಶಿ.ಮಕ್ಕಳ ಪರವಾಗಿ ತಂದೆಯವರು ಭಾಗವಹಿಸಿರುವುದು ಕಂಡು ಬಂತು.
ಸಭೆಯಲ್ಲಿ ಸಮಿತಿ ಸದಸ್ಯರಾದ ಕವಿತ ದಳವಾಯಿ.ಪರುಷೋತ್ತಮ ನಾಯ್ಕ.ಮುಜೀಬ್ ವುಲ್ಲಾ. ಹೆಚ್.ಆಂಜನೇಯ.ಹನುಮಂತರೆಡ್ಡಿ.ಅನಿಲ್ಕುಮಾರ್.ಜನಾರ್ಧನ್.ಗುಜ್ಜಾರಪ್ಪ.ಜಿ.ಪಿ.ನಾಗೇಶ್‌ರೆಡ್ಡಿ.ಉಮೇಶ್.ಮಲ್ಲಿಕಾರ್ಜುನ.ಹೆಚ್.ಬಿ.ತಿಪ್ಪೇಸ್ವಾಮಿ.ಆರ್.ಬಸಪ್ಪ .ಆಹಾರ ಇಲಾಖೆ ಶಿರಸ್ತೆದಸರ್ ಶ್ರೀನಿವಾಸ್. ಶಿಶುಅಭಿವೃದ್ಧಿ ಅಧಿಕಾರಿ ಹರಿಪ್ರಸಾದ್. ತಾಪಂ ವ್ಯವಸ್ಥಾಕ ಹಾಗೂ ನ್ಯಾಯಬೆಲೆ ಅಂಗಡಿ ಮಾಲಿಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading