ಹಿರಿಯೂರು:
ಸಾಲಬಾಧೆ ತಾಳಲಾರದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಬ್ಯಾರಮಡು ಗ್ರಾಮದಲ್ಲಿ ನಡೆದಿದೆ. ಬಿ.ಜಿ.ಗುರುರಾಜ(62) ತಂದೆ ಗೋವಿಂದಪ್ಪ ಆತ್ಮಹತ್ಯೆಗೆ ಶರಣಾದ ರೈತ.
ಗುರುರಾಜರವರು ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ರೂ.3ಲಕ್ಷ, ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ 50ಸಾವಿರ, ಶ್ರೀ ಮಂಜುನಾಥ ಸಂಘದಲ್ಲಿ 2ಲಕ್ಷ, ಗ್ರಾಮೀಣ ಕೂಟದಲ್ಲಿ 50ಸಾವಿರ, ಸ್ತ್ರೀ ಶಕ್ತಿ ಸಂಘದಲ್ಲಿ 50 ಸಾವಿರ ಸೇರಿ ಒಟ್ಟು 6.50ಲ ರೂ ಸಾಲ ಮಾಡಿಕೊಂಡಿದ್ದರು.
ಪಡೆದ ಸಾಲದಿಂದ ತಮ್ಮ 5 ಎಕರೆ ಜಮೀನಿನಲ್ಲಿ ರಾಗಿ, ಮೆಣಸಿನಕಾಯಿ, ಬೆಳೆದಿದ್ದರು.ಅಲ್ಲದೆ, ಕೊಳವೆಬಾವಿಗಳು ವಿಫಲವಾದ್ದರಿಂದ ಹಲವು ಬಾರಿ ಬೆಳೆ ನಷ್ಟ ಎದುರಾಗಿದ್ದು, ಸಾಲದ ಹೊರೆ ತಾಳಲಾರದೆ, ಮಂಗಳವಾರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಹಿರಿಯೂರು ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.