January 29, 2026
IMG-20250205-WA0231.jpg

ನಾಯಕನಹಟ್ಟಿ : ಪಟ್ಟಣ ಪಂಚಾಯ್ತಿಯ ಕೌನ್ಸಿಲ್ ಸಭಾಂಗಣದಲ್ಲಿ ನಡೆದ 2025 26 ನೇ ಸಾಲಿನ ಆಯವ್ಯಯದ ಬಜೆಟ್ ಅನ್ನು ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳ ಶ್ರೀಕಾಂತ್ ಮಂಡಿಸಿದರು.

ನಂತರ ಮಾತನಾಡಿದ ಅವರು ನಾಯಕನಹಟ್ಟಿ ಪಟ್ಟಣದ ಅಭಿವೃದ್ಧಿಗಾಗಿ ಎಲ್ಲಾ ಆಯವ್ಯಯದ ಮೂಲಗಳಿಂದ 17.65 ಕೋಟಿಗಳ ಆದಾಯ ಮತ್ತು 17.60 ಕೋಟಿಗಳ ವೆಚ್ಚವನ್ನು ಅಳವಡಿಸಿಕೊಂಡು 5.01 ಲಕ್ಷಗಳ ನೀರಿಕ್ಷಿತ ಉಳಿತಾಯ ಬಜೆಟನ್ನು ಮಂಡಿಸಿದರು.

ಆಸಿ ತೆರಿಗೆ, ಉದ್ದಿಮೆ ಪರವಾನಿಗೆ, ಅಂಗಡಿ ಮಳಿಗೆಗಳ ಬಾಡಿಗೆ, ಕಟ್ಟಡ ಪರವಾನಿಗೆ, ಖಾತಾ ಬದಲಾವಣೆ, ರಸ್ತೆ ಅಗೆತದ ಶುಲ್ಕ, ನೀರಿನ ಶುಲ್ಕ, ನೀರಿನ ಸಂಪರ್ಕ, ಬರ ಪರಿಹಾರದ ಅನುದಾನ, ಸ್ವಚ್ಛ ಭಾರತ ಯೋಜನೆ, ನೀರು ಸರಬರಾಜು ಮತ್ತು ಬೀದಿ ದೀಪಗಳ ಮೂಲಕ ಅನುದಾನ ಬರುತ್ತಿದ್ದು. ಇದರಲ್ಲಿ ರಸ್ತೆ ಹಾಗೂ ಚರಂಡಿಗಳ ನಿರ್ಮಾಣಕ್ಕಾಗಿ, ಗಣಕಯಂತ್ರ ಹಾಗೂ ಇತರ ಉಪಕರಣಗಳು ಖರೀದಿಗಾಗಿ, ವಿದುದ್ದೀಪ ಹಾಗೂ ಸೋಲಾರ್ ದೀಪಗಳ ಅಳವಳಿಕೆಗಾಗಿ, ಸಾರ್ವಜನಿಕ ಶೌಚಾಲಯ ದುರಸ್ತಿ ಮತ್ತು ನಿರ್ಮಾಣಕ್ಕಾಗಿ, ಕಟ್ಟಡ ದುರಸ್ತಿ ಮತ್ತು ನಿರ್ವಹಣೆಗಾಗಿ, ವಾಣಿಜ್ಯ ಮಳಿಗೆಗಳು ಮಾರುಕಟ್ಟೆ ಮತ್ತು ಇತರೆ ನಿರ್ಮಾಣಕ್ಕಾಗಿ, ಗಣ ತ್ಯಾಜ್ಯ ವಿಲೇವಾರಿ ಘಟಕ ಶೂನ್ಯ ತ್ಯಾಜ್ಯ ಹಾಗೂ ಬೀದಿ ದೀಪವಾಗಿ, ಬೀದಿ ದೀಪಗಳ ಸಾಮಗ್ರಿ ಖರೀದಿಗಾಗಿ, ಸ್ವಚ್ಛ ಭಾರತ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ, ಹೊರಗುತ್ತಿಗೆ ನೀರು ಸರಬರಾಜು ನಿರ್ವಹಣೆ ಮತ್ತು ಇತರ ಕಾಮಗಾರಿಗಳಿಗಾಗಿ, ಬೋರ್ ವೆಲ್, ಪೈಪ್ ಲೈನ್, ಪಂಪ್ ಹೌಸ್ ಅಭಿವೃದ್ಧಿ, ಪಂಪ ಹೌಸ್ ಗಳಿಗೆ ಯಂತ್ರ ಹಾಗೂ ಇತರೆ ಸಲಕರಣೆ ಖರೀದಿಗಳಿಗಾಗಿ ಅನುದಾನವನ್ನು ಬಳಸಿಕೊಂಡು ಪಟ್ಟಣದ ಸರ್ವತೋ ಅಭಿವೃದ್ಧಿ ಮಾಡುವ ಉದ್ದೇಶದಿಂದ ಬಜೆಟ್ ಅನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅಧಿಕಾರಿ ಓ ಶ್ರೀನಿವಾಸ್, ಉಪಾಧ್ಯಕ್ಷೆ ಸರ್ವಮಂಗಳ ಉಮಾಪತಿ, ಸದಸ್ಯರಾದ ಜೆ ಆರ್ ರವಿಕುಮಾರ್,ಎಂ.ಟಿ.ಮಂಜುನಾಥ,ಕೆ ಪಿ ತಿಪ್ಪೇಸ್ವಾಮಿ,ಓ ಮಹೇಶ್ವರಿ,ಬಿ ಗುರುಶಾಂತಮ್ಮ,
ಡಿ ಸುನಿತ ಮುದಿಯಪ್ಪ,ಈರಮ್ಮ,ಸೈಯ್ಯದ್ ಅನ್ವರ್,ಪಾಪಮ್ಮ,ತಿಪ್ಪೇಶ್,ಬಿ ವಿನುತಾ,ಎನ್ ಮಹಂತಣ್ಣ,ಪಿ ಬೋಸಮ್ಮ,ಪಿ ಓಒಯ್ಯ ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading