ಚಳ್ಳಕೆರೆ ಫೆ.5
ಶ್ರೀ ಚಲುಮೇರುದ್ರ ಸ್ವಾಮಿಸ ಬ್ರಹ್ಮರಥೋತ್ಸವಕ್ಕೆ ಸಕಲ ಸಿದ್ದತೆ
ಹೌದು ಇದು ಚಳ್ಳಕೆರೆ ತಾಲ್ಲೂಕಿನ ನಾಗಗೊಂಡನಹಳ್ಳಿ ಸಮೀಪ ಇರುವ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತಕ್ಕೆ ಒಳಪಟ್ಟಿರುವ ಶ್ರೀ ಚಲುಮೇರುದ್ರ ಸ್ವಾಮಿಸ ಬ್ರಹ್ಮರಥೋತ್ಸವ ಶುಕ್ರವಾರ ಫೆ.7 ರಂದು ವಿಜೃಂಭಣೆಯಿಂದ ನಡೆಯಲಿದ್ದು , ಗ್ರಾಮಪಂಚಾಯಿತಿ ಹಾಗೂ ದೇವಸ್ಥಾನ ಕಮಿಟಿ ವತಿಯಿಂದ ಸಕಲ ಸಿದ್ಧತೆಯನ್ನು ಮಾಡಲಾಗಿದೆ.
ಫೆ 8 ರಂದು ಹೂವಿನ ಅಡ್ಡ ಪಲ್ಲಕ್ಕಿ ಉತ್ಸವ ಫೆ 9 ರಂದು ಜಾತ್ರೆಗೆ ತೆರೆಬಿಳಲಿದೆ.
ಇತಿಹಾಸ
ನಾಯಕನಹಟ್ಟಿಯ ಶ್ರೀ ತಿಪ್ಪೇರುದ್ರಸ್ವಾಮಿಯಂತೆ ಪವಾಡ ಪುರುಷರಾದ ಶ್ರೀ ಚಲುಮೆರುದ್ರಸ್ವಾಮಿ ನಾಗಗೊಂಡನಹಳ್ಳಿ ಸಮೀಪ ವೇದಾವತಿ ನದಿಯ ದಂಡೆಯ ಮೇಲೆ ಇರುವ ಈಶ್ವರ ದೇವಾಲಯದಲ್ಲಿ ಪೂಜೆ ಮಾಡುತ್ತಿದ್ದರು.ಇಲ್ಲಿನ ಸುತ್ತ ಮುತ್ತಲಿನ ಜನರು ನದಿ ದಡದ ಮೇಲೆ ಪ್ರತಿ ನಿತ್ಯ ದನಗಳನ್ನು ಮೇಯಿಸಲು ಬರುತ್ತಿದ್ದರಂತೆ .ಆಗ ಸ್ವಾಮಿಗೆ ದಿನ ದನ ಕಾಯುವ ಹುಡುಗರು ಹಾಲನ್ನು ನೀಡುತ್ತಿದ್ದರು.ಅದಕ್ಕೆ ಪ್ರತಿಯಾಗಿ ಸ್ವಾಮಿ ತಮ್ಮ ಬೆತ್ತದಿಂದ ಮರಳನ್ನು ಮುಟ್ಟಿ ಪ್ರಸಾದವನ್ನಾಗಿ ಪವಾಡ ಮಾಡುತ್ತಿದ್ದರು.
ಅದನ್ನು ದನ ಕಾಯುವ ಹುಡುಗರು ಸೇವಿಸುತ್ತಿದ್ದರು ಎನ್ನುವ ಪ್ರತೀತಿ ಇದೆ.
ಹೀಗೆ ಪವಾಡ ಮಾಡುತ್ತಿದ್ದ ಚೆಲುಮೆಸ್ವಾಮಿಯನ್ನು ಈ ಭಾಗದ ಸುತ್ತು ಮುತ್ತಲಿನ ಹಳ್ಳಿಯ ಜನರು ವಿಶೇಷ ಪೂಜೆ ಸಲ್ಲಿಸಿಸುತ್ತಾರೆ.
ಜೊತೆಗೆ ಪ್ರತಿ ಮನೆಯಲ್ಲೂ ಚಲ್ಮೇಶ್, ಚಲುಮಪ್ಪ,ಚಲುಮೇರುದ್ರ, ಚಲುಮಕ್ಕ ಹೀಗೆ ಸ್ವಾಮಿಯ ಹೆಸರುಗಳನ್ನಿಟ್ಟು ಕೊಂಡ ನಿದರ್ಶನಗಳನ್ನು ಕಾಣಬಹುದು
ಚೆಲುವೆಯೇ ಸ್ವಾಮಿಯವರು ನಾಗ ಗೊಂಡನಹಳ್ಳಿ ಸಮೀಪ ವೇದಾವತಿ ನದಿಯ ದಂಡೆಯ ಮೇಲೆ ಜೀವ ಸಮಾಧಿ ಆಗಿದ್ದರಂತೆ ನಂತರವೂ ಅಲ್ಲಿನ ದನ ಕಾಯುವವರು ಸಮಾಧಿ ಮೇಲೆ ದಿನಾಲೂ ಹಾಲು ಇಟ್ಟು ಬರುತ್ತಿದ್ದಂತೆ .ಈ ಹಾಲನ್ನು ಸ್ವಾಮಿಯು ನಾಗರಹಾವಿನ ರೂಪದಲ್ಲಿ ಬಂದು ಹಾಲನ್ನು ಕುಡಿದು ಹೋಗುತ್ತಿದ್ದಂತೆ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.
ಚಿಲುಮೆ ಸ್ವಾಮಿಯ ಇಷ್ಟ ಪ್ರಸಾದ :-ಹಸಿ ಕಡಲೆ (ಶೇಂಗಾ) ನೆನಸಿದ ಅಕ್ಕಿ ಬೆಲ್ಲ ತೆಂಗಿನಕಾಯಿ ಈಗಲೂ ಸಹ ದೇವಸ್ಥಾನದಲ್ಲಿ ಇದೆ ಪ್ರಸಾದ ನೀಡುತ್ತಾರೆ ಎಂದು
ಚಲ್ಮೇಶ್ ಎ
ಅಧ್ಯಕ್ಷರು
ಸಿಡಿಲ ಸಂತ ಸ್ವಾಮಿ ವಿವೇಕಾನಂದ ಸಮಾಜ ಸೇವಾ ಸಂಸ್ಥೆ ರಿ
ಮತ್ಸಮುದ್ರ ಜನಧ್ವನಿಗೆ ಮಾಹಿತಿ ನೀಡಿದ್ದಾರೆ.



About The Author
Discover more from JANADHWANI NEWS
Subscribe to get the latest posts sent to your email.