ಚಳ್ಳಕೆರೆ ಫೆ 5
ನೀರಿಲ್ಲದೆ ಕೃಷಿ ಮುಂದೆ ಸಾಗದು. ಮಳೆ ನೀರನ್ನು ರಕ್ಷಿಸಿಸದಿದ್ದರೆ ಅಂತರ್ಜಲ ಬತ್ತಿ ಹೋಗಿ ನೀರಿಗಾರಿ ಪರದಾಡ ಬೇಕಾಕುತ್ತದೆ ಎಂದು ಎಂದುಐಸಿಐಸಿಐ ಪೌಂಡೇಷನ್ ಪ್ರಾಜೆಕ್ಟ್ ವ್ಯವಸ್ಥಾಪಕ ರಾಜಸಾಭಿ ಹೇಳಿದರು.
ತಾಲೂಕಿನ ದೇವರಮರಿಕುಂಟೆ ಗ್ರಾಮಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮಳೆ ನೀರು ರಕ್ಷಣೆ ಮಾಡುವ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಚಳ್ಳಕೆರೆ ತಾಲೂಕು ಬಯಲು ಸೀಮೆ ಬರದ ನಾಡು ಎಂಬ ಹಣೆ ಪಟ್ಟಿ ಕಟ್ಟಿಕೊಂಡಿದ್ದು ಇಂತಹ ಪ್ರದೇಶಗಳನ್ನು ಐಸಿಐಸಿಐ ಪೌಂಡೇಷನ್ ವತಿಯಿಂದ ಗೋಕಟ್ಟೆ ಅಭಿವೃದ್ಧಿ. ಕೆರೆ ಕಾಲುವೆ ಹೂಳೆತ್ತುವುದು.ಕೃಷಿಹೊಂಡ. ಕೊಳವೆ ಬಾವಿಗಳ ಬಳಿ ಇಂಗು ಗುಂಡಿ. ಬದು ನಿರ್ಮಾಣ ಕಾಮಗಾರಿಗಳನ್ನು ಮಾಡುವ ಮೂಲಕ ಮಳೆಗಾಲದಲ್ಲಿ ಮಳೆಯಿಂದ ಬಿದ್ದ ನೀರನ್ನು ಸಂರಕ್ಷಣೆ ಮಾಡುವ ಮೂಲಕ ಅರ್ತಜಲ ಹೆಚ್ಚಿಸಲಾಗುವುದುಮ
ಈಗಾಗಲೆ ಹಲವು ಕಾಮಗಾರಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಇದರಿಂದ ರೈತರಿಗೆ ವರದಾನವಾಗಿದೆ ಎಂದು ತಿಳಿಸಿದರು.
ರೈತ ಮುಖಂಡ ಹಾಗೂ ಮಾಜಿ ಗ್ರಾಪಂ ಸದಸ್ಯ ಬೂಲಿಂಗಪ್ಪ ಮಾತನಾಡಿ ಐಸಿಐಸಿಐ ಪೌಂಡೇಷನ್ ಸಂಸ್ಥೆ ಬಂದಯ 6 ತಿಂಗಳು ಕಳೆದಿದೆ ಕೃಷಿಹೊಂಡ. ಬದು ನಿರ್ಮಾಣ. ಬೋರ್ ವೆಲ್ ರೀಚಾರ್ಜ್.ರೈತರ ಜಾನವಾರುವಾರುಗಳಿಗೆ ಮೇವಿನ ಕೊರತೆ ನೀಗಿಸಲು ಮೇವಿನ ಬೀಜ ವಿತರಣೆ. ಗೋಕಟ್ಟೆ ಅಭಿವೃದ್ಧಿ. ಕೃಷಿ ಚಟುವಟಿಕೆ ಹಾಗೂ ಕೂಲಿ ಕೆಲಸ ಮಾಡುವ ಜತೆಗೆ ಕೋಳಿ ಸಾಕಾಣಿಕೆ ಮಾಡಲು ಉಚಿತ ಕೋಳಿ ಮರಿಗಳನ್ನು ನೀಡಿದ್ದಾರೆ ಮಳೆ ನೀರು ವ್ಯರ್ಥವಾಗದೆ ಸಂಗ್ರಹಣೆ ಮಾಡುವ ಮೂಲಕ ಅಂತರ್ಜಲ ವೃದ್ದಿಸಿ ರೈತರಿಗೆ ವರದಾನವಾಗುವಂತತಹ ಕಾಮಗಾರಿಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಐಸಿಐಸಿಐ ಪೌಂಡೇಷನ್ ಸಮುದಾಯ ಮೇಲ್ವೀಚಾರಕಿ ವನಿತ ಮಾತನಾಡಿ ಈಗಾಗಲ ಸರಕಾರ ಅಂತರ್ಜಲ ರಕ್ಷಣೆಗಾಗಿ ಕೃಷಿ ಇಲಾಖೆ ಹಾಗೂ ಉದ್ಯೋಗ ಖಾತರಿ ಯೋಜನೆಯಡಿ ಕೃಷಿ ಹೊಂಡ ಬದು ನಿರ್ಮಾಣ.ಕೆರೆ ಕಾಕುವೆ ಹೂಳೆತ್ತುವ ಕಾರ್ಯ ಮಾಡುತ್ತಿದ್ದು ಅದೇ ರೀ ಐ ಸಿ ಐಸಿಐ ಪೌಂಡೇಷನ್ ವತಿಯಿಂದ ಮಳೆ ನೀರು ರಕ್ಷಣೆಗೆ ಮುಂದಾಗಿದೆ
ಮಳೆಗಾಲ ಸಣ್ಣದು. ವರ್ಷದಲ್ಲಿ 2-3 ತಿಂಗಳು ಮಾತ್ರ ಮಳೆ ಸುರಿಯುತ್ತದೆ. ಆ ಅಮೂಲ್ಯ ನೀರು ಹರಿದು ಪೋಲಾಗದಂತೆ ತಡೆದು ಬಳಸುವುದು ಮಳೆ ನೀರು ಕೊಯ್ಲು ವಿಧಾನ. ಈ ನೀರನ್ನು ವ್ಯವಸ್ಥಿತವಾಗಿ ಸಂಗ್ರಹಿಸುವುದು ಕೃಷಿಗೂ ಪೂರಕ. ಅಂತರ್ಜಲಮಟ್ಟ ಹೆಚ್ಚಳಕ್ಕೂ ಪ್ರೇರಕ. ಬರೀ ನೀರು ಇಂಗಿಸಬೇಕಾದರೆ ಇಂಗು ಗುಂಡಿ. ಕೃಷಿಹೊಂಡ ರೈತ ಜಮೀನನಲ್ಲಿ ಬದು ನಿರ್ಮಾಣ ಮಾಡಿದರೆ ಮಾತ್ರ ನೀರನ್ನು ಸಂಗ್ರಹಿಸಲು ಸಾಧ್ಯ ರೈತರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಐಸಿಐಸಿಐ ಪೌಂಡೇಶ್ ಅಭಿವೃದ್ದಿ ಅಧಿಕಾರಿ ಮಾತನಾಡಿ ಮನ್ಸೂರು ಸಮೀರ್ ಹಾಗೂ ರೈತರಿದ್ದರು.
















About The Author
Discover more from JANADHWANI NEWS
Subscribe to get the latest posts sent to your email.